ಭಾರತದಲ್ಲಿ 2022ರಲ್ಲಿ ಎಲ್ಲಾ ಆರೋಗ್ಯಕರ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯ

25-08-21 11:39 am       Reena TK, Boldsky   ಡಾಕ್ಟರ್ಸ್ ನೋಟ್

ಮಕ್ಕಳಿಗೆ ನೀಡುವ ಲಸಿಕೆಯನ್ನು ಕೂಡ ಅಗ್ಯತತೆ ಅನುಗುಣವಾಗಿ ನೀಡಲಾಗುವುದು ಅಂದ್ರೆ ಇತರ ಆರೋಗ್ಯ ಸಮಸ್ಯೆ ಹೊಂದಿರುವ ಮಕ್ಕಳಿಗೆ ಆದ್ಯತೆ ಮೇರೆಗೆ ಮೊದಲಿಗೆ ನೀಡಲಾಗುವುದು

ಕೋವಿಡ್‌ 19 ಬಗ್ಗೆ ಪೋಷರಲ್ಲಿ ಆತಂಕ ಇದ್ದೇ ಇದೆ, ಅದರಲ್ಲೂ ಮತ್ತೆ ಶಾಲೆ ಪ್ರಾರಂಭವಾಗಿದೆ, ಕೊರೊನಾ ರೂಪಾಂತರ ವೈರಸ್‌ ಮಕ್ಕಳ ಮೇಲೆ ಪರಿಣಾಮ ಬೀರಬಹುದೇ ಎಂಬ ಆತಂಕ ಪೋಷಕರಲ್ಲಿ ಇದ್ದೇ ಇದೆ, ಆದ್ದರಿಂದ ಮಕ್ಕಳಿಗೂ ವ್ಯಾಕ್ಸಿನ್‌ ಬಂದ್ರೆ ಸ್ವಲ್ಪ ಸಮಧಾನವಾಗುತ್ತಿತ್ತು ಎಂದು ಪ್ರತಿಯೊಬ್ಬ ಪೋಷಕರು ಬಯಸುತ್ತಿದ್ದಾರೆ. ಮಕ್ಕಳಿಗೆ ಯಾವಾಗ ಲಸಿಕೆ ಸಿಗುತ್ತದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.



ಮೊದಲಿಗೆ ಇತರ ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ನೀಡಲಾಗುವುದು

ಮಕ್ಕಳಿಗೆ ನೀಡುವ ಲಸಿಕೆಯನ್ನು ಕೂಡ ಅಗ್ಯತತೆ ಅನುಗುಣವಾಗಿ ನೀಡಲಾಗುವುದು ಅಂದ್ರೆ ಇತರ ಆರೋಗ್ಯ ಸಮಸ್ಯೆ ಹೊಂದಿರುವ ಮಕ್ಕಳಿಗೆ ಆದ್ಯತೆ ಮೇರೆಗೆ ಮೊದಲಿಗೆ ನೀಡಲಾಗುವುದು, ನಂತರ ಆರೋಗ್ಯವಂತ ಮಕ್ಕಳಿಗೆ ನೀಡಲಾಗುವುದು. ಅಕ್ಟೋಬರ್‌ 2021ರಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಒಂದು ಡೋಸ್‌ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕಳೆದ ವಾರ ತುರ್ತು ಸಂದರ್ಭದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲ ಡೋಸ್‌ ನೀಡುವುದಾಗಿ ಸರ್ಕಾರ ಹೇಳಿದೆ.



ಮಕ್ಕಳಿಗೆ ನೀಡಲು ಎಷ್ಟು ಲಸಿಕೆ ಬೇಕಾಗುವುದು?

ಭಾರತದಲ್ಲಿ 12-17 ವರ್ಷದ ಸುಮಾರು 12 ಕೋಟಿ ಮಕ್ಕಳಿದ್ದಾರೆ, ಅವರಲ್ಲಿ ಶೇ. 1ರಷ್ಟು ಮಕ್ಕಳಲ್ಲಿ ಇತರ ಆರೋಗ್ಯ ಸಮಸ್ಯೆ ಇದೆ. 2 ವರ್ಷದ ಮೇಲ್ಪಟ್ಟ ಮಕ್ಕಳು ಸುಮಾರು 44 ಕೋಟಿ ಇದ್ದಾರೆ. ಭಾರತದ ಎಲ್ಲಾ ಮಕ್ಕಳಿಗೆ 2022ರಲ್ಲಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಇತರ ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಈ ಅಕ್ಟೋಬರ್‌ನಿಂದ ಲಸಿಕೆ ಸಿಗುವ ಸಾಧ್ಯತೆ ಇದೆ.



ಮಕ್ಕಳ ಆರೋಗ್ಯದ ಬಗ್ಗೆ ಪೋಷಕರೇ ಎಚ್ಚರ!

ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚು ಎಚ್ಚರ ವಹಿಸಬೇಕು. ಸಭೆ-ಸಮಾರಂಭಗಳಿಗೆ ಕರೆದುಕೊಂಡು ಹೋಗುವುದು ಕಡಿಮೆ ಮಾಡಿ, ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಮಕ್ಕಳ ಸಂಪರ್ಕಕ್ಕೆ ಬರಬೇಡಿ. ಇನ್ನು ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ಮಕ್ಕಳ ವೈದ್ಯರಿಗೆ ತೋರಿಸಿ. ಶಾಲೆಗೆ ಹೋಗುವ ಮಕ್ಕಳಿಗೆ ಮಾಸ್ಕ್‌ ಧರಿಸುವಂತೆ ಸೂಚಿಸಿ, ಕೈಗಳಿಗೆ ಆಗಾಗ ಸ್ಯಾನಿಟೈಸರ್ ಹಾಕಲು ಹೇಳಿ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ತಿಳಿಸಿ. ಮಕ್ಕಳಿಗೆ ಇವೆಲ್ಲಾ ಸ್ವಲ್ಪ ಕಷ್ಟವೇ ಆದರೂ ಈಗ ಇವುಗಳನ್ನು ಪಾಲಿಸದೇ ಬೇರೆ ದಾರಿಯಿಲ್ಲ, ಇದರ ಕುರಿತು ಪೋಷಕರು ಮಕ್ಕಳಿಗೆ ಮನವರಿಕೆ ಮಾಡಬೇಕು.

(Kannada Copy of Bold Sky Kannada)