ಬ್ರೇಕಿಂಗ್ ನ್ಯೂಸ್
25-08-21 12:05 pm Shreeraksha, Boldsky ಡಾಕ್ಟರ್ಸ್ ನೋಟ್
ಕೊರೊನಾ ಲಸಿಕೆಯ ಎರಡು ಡೋಸ್ ಪಡೆಯುವುದು ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಆದರೆ ಈ ಲಸಿಕೆಗಳು ಸಾಂಕ್ರಾಮಿಕ ವೈರಸ್‌ನಿಂದ ಸಂಪೂರ್ಣ ರಕ್ಷಣೆ ನೀಡುವುದಿಲ್ಲ ಎಂಬುದನ್ನು ಮರೆಯಬಾರದು. ಇತರರಂತೆ ನೀವೂ ಕೊರೊನಾಗೆ ತುತ್ತಾಗುವ ಸಾಧ್ಯತೆಗಳು ಸಮಾನವಾಗಿದ್ದರೂ, ರೋಗಲಕ್ಷಣಗಳು ಅಷ್ಟೊಂದು ತೀವ್ರವಾಗಿರುವುದಿಲ್ಲ.
ಸಂಪೂರ್ಣ ಲಸಿಕೆ ಪಡೆದ ನಂತರವೂ ಹಲವಾರು ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಗಳು ಹೇಳು ಆದರೆ ಇವರ ರೋಗಲಕ್ಷಣಗಳು ಲಸಿಕೆ ಪಡೆಯದೇ ಇರುವವರಿಗಿಂತ ಭಿನ್ನವಾಗಿವೆ. ಹಾಗಾದರೆ ಲಸಿಕೆ ಪಡೆದ ನಂತರ ಕೊರೊನಾಗೆ ತುತ್ತಾದರೆ, ಕಂಡುಬರುವ ಲಕಕ್ಷಣಗಳಾವುವು ಎಂಬುದನ್ನು ನೋಡೋಣ.
ಹೊಸ ಅಧ್ಯಯನ:
ಇಂಗ್ಲೆಂಡ್ ನಲ್ಲಿ ನಡೆದ ಒಂದು ಹೊಸ ಅಧ್ಯಯನದ ಪ್ರಕಾರ, ಒಂದು ಡೋಸ್ ಕೂಡ ಪಡೆಯದವರಿಗೆ ಹೋಲಿಸಿದರೆ ಸಂಪೂರ್ಣವಾಗಿ ಲಸಿಕೆ ಹಾಕಿಕೊಂಡ ಜನರು ಕೆಲವು ವಿಭಿನ್ನ ರೋಗಲಕ್ಷಣಗಳನ್ನು ತೋರಿಸಿದ್ದಾರೆ. ಲಸಿಕೆ ಹಾಕಿಕೊಂಡ ಜನರು, ಲಸಿಕೆ ಪಡೆಯದ ವ್ಯಕ್ತಿಗಳಿಗಿಂತ ವಿಭಿನ್ನ ರೋಗಲಕ್ಷಣಗಳನ್ನು ಹೊಂದಿದ್ದು, ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಸಂಪೂರ್ಣ ಲಸಿಕೆ ಹಾಕಿದ ಜನರಲ್ಲಿ ಕಾಣಿಸಿಕೊಂಡ ಕೋವಿಡ್ ರೋಗಲಕ್ಷಣಗಳ ಶ್ರೇಯಾಂಕ ಇಲ್ಲಿದೆ:
ಮೊದಲ ಮೂರು ಲಕ್ಷಣಗಳು:
ತಲೆನೋವು:
ತಲೆನೋವು ಕೊರೊನಾ ಆರಂಭಿಕ ಲಕ್ಷಣವಾಗಿದೆ. ವಿವಿಧ ಕಾರಣಗಳಿಂದಾಗಿ ನಾವೆಲ್ಲರೂ ಆಗಾಗ ತಲೆನೋವನ್ನು ಅನುಭವಿಸುವುದರಿದ, ಸಾಮಾನ್ಯ ತಲೆನೋವು ಮತ್ತು ಕೋವಿಡ್ ಗೆ ಸಂಬಂಧಿಸಿದ ಇತರವುಗಳ ನಡುವಿನ ವ್ಯತ್ಯಾಸವನ್ನು ಕಷ್ಟಕರವಾಗಿಸುತ್ತದೆ. ಒಂದೇ ವ್ಯತ್ಯಾಸವೆಂದರೆ ಕೊರೊನಾದಿಂದ ಉಂಟಾಗುವ ತಲೆನೋವು ನಿರಂತರವಾಗಿರುತ್ತದೆ, ಸಾಮಾನ್ಯ ತಲೆನೋವು ಸ್ವಲ್ಪ ಸಮಯದವರೆಗೂ ಇರುತ್ತದೆ.
ಮೂಗು ಸೋರುವಿಕೆ:
ಶೀತದ ಸಾಮಾನ್ಯ ಲಕ್ಷಣವೆಂದರೆ, ಮೂಗು ಸೋರುವಿಕೆ. ಇದನ್ನು ಕೊರೊನಾ ಆರಂಭಿಕ ಲಕ್ಷಣಗಳೆಂದು ಗುರುತಿಸಲಾಗಿದೆ. ಡೆಲ್ಟಾ ರೂಪಾಂತರದಲ್ಲಿ ಶೀತ ವಿಶಿಷ್ಟ ಲಕ್ಷಣವಾಗಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸಿದ್ದು, ಎಲ್ಲಾ ವಯೋಮಾನದ ಜನರಲ್ಲಿ ಕಂಡುಬಂದಿದೆ.
ಸೀನುವಿಕೆ:
ನಿರಂತರ ಸೀನುವಿಕೆ ಹಾಗೂ ಮೂಗು ಸೋರುವಿಕೆ ಅಥವಾ ಶೀತ ಒಂದಕ್ಕೊಂದು ಸಂಬಂಧ ಹೊಂದಿದೆ. ಕೆಲವು ಸಂದರ್ಭಗಳಲ್ಲಿ, ಸೀನುವಿಕೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಲೋಚಿತ ಅಲರ್ಜಿಯಿಂದಾಗಿರಬಹುದು. ನೀವು ಅಲರ್ಜಿ ಸಮಸ್ಯೆಯಿಂದ ಬಳಲುತ್ತಿಲ್ಲವಾದರೆ, ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಇತರ ಲಕ್ಷಣಗಳು:
ಗಂಟಲು ಕೆರೆತ:
ಕೊರೊನಾದಲ್ಲಿ ಗಂಟಲು ನೋವು ಅಥವಾ ಶುಷ್ಕತೆಯ ಭಾವನೆ, ಮಾತನಾಡಲು ಮತ್ತು ನುಂಗಲು ತೊಂದರೆ, ನೋಯುತ್ತಿರುವ ಗ್ರಂಥಿಗಳು ಮತ್ತು ಕೆಂಪು ಬಣ್ಣದಿಂದ ಗಂಟಲು ಕೂಡಿರುತ್ತದೆ. ಕೊರೊನಾವಿದ್ದರೆ, ಕೆಮ್ಮುವುದು ಕೂಡ ಕಷ್ಟವಾಗಬಹುದು.
ವಾಸನೆ ನಷ್ಟ:
ವಾಸನೆಯ ಪ್ರಜ್ಞೆಯ ನಷ್ಟವು ಕೊರೊನಾದ ಟ್ರೇಡ್‌ಮಾರ್ಕ್ ಲಕ್ಷಣವಾಗಿದೆ. ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ವೈರಸ್ ಸಂಪರ್ಕಕ್ಕೆ ಬಂದ ನಂತರ ಈ ರೋಗಲಕ್ಷಣವನ್ನು ಅನುಭವಿಸುವ ಸಾಧ್ಯತೆಯಿದೆ. ಸೋಂಕಿನ ನಂತರ ವಾಸನೆಯು ಸಾಮಾನ್ಯ ಸ್ಥಿತಿಗೆ ಮರಳುತ್ತದೆ, ಸುಮಾರು 10 ಪ್ರತಿಶತ ಪ್ರಕರಣಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 6 ತಿಂಗಳುಗಳು ತೆಗೆದುಕೊಳ್ಳಬಹುದು.
ಲಸಿಕೆ ಹಾಕದ ಜನರಲ್ಲಿ ರೋಗಲಕ್ಷಣಗಳು:
ಲಸಿಕೆ ಹಾಕದ ಜನರಲ್ಲಿ, ರೋಗಲಕ್ಷಣಗಳು ಲಸಿಕೆ ಹಾಕಿದವರಿಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ಅವುಗಳೆಂದರೆ, ತಲೆನೋವು, ಗಂಟಲು ಕೆರೆತ, ಮೂಗು ಸೋರುವಿಕೆ, ಜ್ವರ, ನಿರಂತರ ಕೆಮ್ಮು.. ಇವುಗಳು ಪ್ರಮುಖ ಐದು ಆರಂಭಿಕ ಲಕ್ಷಣಗಳಾಗಿವೆ. ಒಂಬತ್ತನೇ ಸ್ಥಾನದಲ್ಲಿ ವಾಸನೆಯ ನಷ್ಟ, ಉಸಿರಾಟದ ತೊಂದರೆ 30 ನೇ ಸ್ಥಾನದಲ್ಲಿ ಬರುತ್ತದೆ.
ನಿಮಗೆ ಅನುಮಾನಗಳಿದ್ದಾಗ, ಪರೀಕ್ಷಿಸಿಕೊಳ್ಳಿ:
ಇವುಗಳು ಸಾಮಾನ್ಯವಾಗಿ ಹೆಚ್ಚಿನ ಪ್ರಕರಣಗಳಲ್ಲಿ ಕಂಡುಬಂದ ಆರಂಭಿಕ ಚಿಹ್ನೆಗಳು. ಆದರೆ ನೀವು ವಿಭಿನ್ನವಾದ ರೋಗಲಕ್ಷಣಗಳನ್ನು ಅನುಭವಿಸಬಹುದು. ಇಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಫಲಿತಾಂಶ ನೆಗೆಟಿವ್ ಆಗುವವರೆಗೂ ಇತರರಿಂದ ಅಂತರ ಕಾಯ್ದುಕೊಳ್ಳಿ. ಅಲ್ಲದೆ, ಹೊರಹೋಗುವಾಗಲೆಲ್ಲಾ ಮಾಸ್ಕ್ ಧರಿಸಿ. ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆಯಿರಿ ಮತ್ತು ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm