ಬ್ರೇಕಿಂಗ್ ನ್ಯೂಸ್
01-09-21 01:01 pm Shreeraksha, Boldsky ಡಾಕ್ಟರ್ಸ್ ನೋಟ್
ಮರೆವು ಎಲ್ಲ ವಯಸ್ಸಿನ ಜನರಲ್ಲಿ ಸಹಜ. ಕಾರಿನ ಕೀ ಇಟ್ಟ ಜಾಗ ಮರೆಯುವುದು, ವರ್ಷಗಳ ನಂತರ ಸಿಕ್ಕ ಸಹೋದ್ಯೋಗಿಯ ಹೆಸರನ್ನು ಮರೆತುಬಿಡುವುದು ಇವೆಲ್ಲವೂ ಸಾಮಾನ್ಯ ಮನುಷ್ಯರಲ್ಲಿ ಕಂಡುಬರುವ ಮರೆವಾಗಿದೆ. ಆದರೆ ಈಗ ಹೇಳಿದ್ದು, ಮರುಕ್ಷಣಕ್ಕೆ ಮರೆತು ಹೋಗುತ್ತಿದೆ, ಏನೋ ಮಾಡಲು ಹೋಗಿ, ಇನ್ನೇನೋ ಮಾಡುತ್ತಿದ್ದೇವೆ, ವಯಸ್ಸು ಹೆಚ್ಚಾದಂತೆ ಮರೆವೂ ಹೆಚ್ಚಾಗುತ್ತಿದೆ ಎಂದರೆ ಅದಕ್ಕೆ ಡಿಮೆನ್ಷಿಯಾ ಅಥವಾ ಬುದ್ಧಿ ಮಾಂದ್ಯತೆ ಎಂದು ಹೆಸರು.
ವಯಸ್ಸಾಗುತ್ತಾ ಹೋದಂತೆ, ಕಂಡುಬರುವ ಈ ಸಮಸ್ಯೆಯಲ್ಲಿ ಸ್ಮರಣ ಶಕ್ತಿ ಕಡಿಮೆಯಾಗಿ, ಭಾಷೆ ಮೇಲೆ ಹಿಡಿತವಿಲ್ಲದಿರುವುದು, ನಿರ್ಧಾರ ಮಾಡುವಿಕೆ ಅಸಾಧ್ಯ ಸೇರಿದಂತ ದೈನಂದಿನ ಜೀವನದಲ್ಲಿ ಹಲವಾರು ತೊಡಕುಗಳು ಉಂಟಾಗುತ್ತವೆ. ಈ ಮಾನಸಿಕ ಆರೋಗ್ಯ ಸ್ಥಿತಿಗೆ ಯಾವುದೇ ಚಿಕಿತ್ಸೆ ಇಲ್ಲ ಅಥವಾ ಅದನ್ನು ತಡೆಯಲು ಸಾಧ್ಯವಿಲ್ಲ, ಆದರೆ ಅವುಗಳ ಆರಂಭಿಕ ಲಕ್ಷಣಗಳನ್ನು ಅರಿತರೆ, ಪರ್ಯಾಯ ಚಿಕಿತ್ಸೆಯನ್ನು ಬೇಗನೆ ಆರಂಭಿಸಿ, ಮರೆವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು.
ಶಬ್ದ ಗುರುತಿಸಲಾಗುವುದು:
ಸಾಮಾನ್ಯವಾಗಿ ಮಾತು, ಶಬ್ದ ಕೇಳಿಸದಿರುವುದು ಕಿವುಡತನದ ಜೊತೆ ಸಂಬಂಧ ಹೊಂದಿದೆ ಎನ್ನಲಾಗುತ್ತದೆ. ಆದರೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ, ನಾವಾಡಿದ ಮಾತು ಕೇಳದಿರುವುದು ಅಥವಾ ಗದ್ದಲದ ನಡುವೆ ನಮ್ಮ ಮಾತು ಯಾವ ಕಡೆಯಿಂದ ಬರುತ್ತಿದೆ ಎಂದು ಗುರುತಿಸಲಾಗದ ಸ್ಥಿತಿಯು ಡಿಮೆನ್ಷಿಯಾದ ಜೊತೆಗೆ ಸಂಬಂಧ ಹೊಂದಿದೆ ಎಂದು ತಿಳಿದುಬಂದಿದೆ. ಜೊತೆಗೆ ಹೊರಗಿನ ಪರಿಸರಲ್ಲಿ ಶಬ್ದವನ್ನು ಪತ್ತೆಮಾಡಲು ಕಷ್ಟಪಡುವವರಿಗೆ ಡಿಮೆನ್ಷಿಯಾ ಬರುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿದ್ಯಂತೆ.
ಮರೆವು:
ನೆನಪಿನ ಶಕ್ತಿ ಕಡಿಮೆಯಾಗುವುದು ಡಿಮೆನ್ಷಿಯಾ ಅಥವಾ ಬುದ್ಧಿ ಮಾಂದ್ಯತೆಯ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಇಂತಹ ಸ್ಥಿತಿಗೆ ಒಳಗಾಗುವ ಸಮೀಪದಲ್ಲಿರುವ ವ್ಯಕ್ತಿಯು ಯಾವುದೇ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಕಷ್ಟಪಡುತ್ತಾನೆ ಜೊತೆಗೆ ಅದಕ್ಕಾಗಿ ಕುಟುಂಬ ಮತ್ತು ಸ್ನೇಹಿತರನ್ನು ಅವಲಂಬಿಸುತ್ತಾರೆ. ಒಂದು ಘಟನೆಯನ್ನು ಮರೆತು ನಂತರ ಅದನ್ನು ನೆನಪಿಸಿಕೊಳ್ಳುವುದು ಬುದ್ಧಿಮಾಂದ್ಯತೆ ಎಂದಾಗುವುದಿಲ್ಲ, ಇದು ಕೇವಲ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.
ದೈನಂದಿನ ಕಾರ್ಯದಲ್ಲಿ ಅಡ್ಡಿ:
ಡಿಮೆನ್ಷಿಯಾದ ಮರೆವಿನಿಂದ ಪರಿಚಿತ ದೈನಂದಿನ ಕಾರ್ಯಗಳನ್ನು ಮಾಡುವುದು ಕಷ್ಟಕರವಾಗುತ್ತವೆ. ಉದಾ, ಒಂದು ಕಪ್ ಚಹಾ ಮಾಡುವುದು ಮತ್ತು ಕಂಪ್ಯೂಟರ್ ಆಪರೇಟ್ ಮಾಡುವುದು ಮುಂತಾದ ಮೂಲಭೂತ ಕಾರ್ಯಗಳಿಗೂ ಹೆಣಗಾಡಬೇಕಾಗುತ್ತದೆ. ಇವುಗಳನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದರೂ, ಈ ಸಂದರ್ಭದಲ್ಲಿ ಅದನ್ನು ಪೂರ್ಣಗೊಳಿಸುವುದು ಸವಾಲಿನ ಸಂಗತಿಯಾಗಿ ಪರಿಣಮಿಸುತ್ತದೆ.
ಮಾತನಾಡಲು ಹೆಣಗಾಡುವುದು:
ಬುದ್ಧಿಮಾಂದ್ಯತೆ ಸಮಸ್ಯೆ ಹೊಂದಿರುವ ಜನರು ಸಂಭಾಷಣೆಯಲ್ಲಿ ತೊಡಗಲು ಅಥವಾ ಅವರ ಆಲೋಚನೆಗಳನ್ನು ವ್ಯಕ್ತಪಡಿಸುವಲ್ಲಿ ಕಷ್ಟಪಡಬಹುದು. ಅವರು ಏನು ಮಾತನಾಡುತ್ತಿದ್ದಾರೆ ಅವರಿಗೆ ತಿಳಿದಿರುವುದಿಲ್ಲ ಅಥವಾ ಬೇರೆಯವರು ಹೇಳಿದ್ದನ್ನು ಕೂಡಲೇ ಮರೆತುಬಿಡಬಹುದು. ಇಂತಹ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುವುದು ಕಷ್ಟವಾಗಬಹುದು ಮತ್ತು ಉತ್ತರಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅನೇಕ ಜನರು ತಪ್ಪಾಗಿ ಉಚ್ಚರಿಸಲು ಅಥವಾ ವ್ಯಾಕರಣದ ತಪ್ಪುಗಳನ್ನು ಮಾಡಲು ಪ್ರಾರಂಭಿಸುತ್ತಾರೆ ಅಥವಾ ಅವರ ಕೈಬರಹವನ್ನು ಓದಲು ಕಷ್ಟವಾಗುತ್ತದೆ.
ಮೂಡ್ ಬದಲಾವಣೆ:
ಆಗಾಗ ಭಾವನೆಗಳ ಬದಲಾವಣೆಗಳನ್ನ ಅನುಭವಿಸುತ್ತಿದ್ದರೂ, ಡಿಮೆನ್ಷಿಯಾದ ಲಕ್ಷಣವಿರಬಹುದು. ಕೆಲವೊಮ್ಮೆ ಫುಲ್ ಜಾಲಿ ಮತ್ತು ಕೆಲವೊಮ್ಮೆ ಖಾಲಿ ಖಾಲಿ ರೀತಿ ಅನಿಸಬಹುದು. ವ್ಯಕ್ತಿತ್ವದಲ್ಲಿ ಕ್ರಮೇಣ ಬದಲಾವಣೆಯಾಗುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ಜನರು ಸಹ ಈ ಸ್ಥಿತಿಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ವ್ಯಕ್ತಿಯ ಹಿರಿತನ ಸಾಕಷ್ಟು ಬದಲಾವಣೆಗೆ ಕಾರಣವಾಗುತ್ತದೆ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm