ಬ್ರೇಕಿಂಗ್ ನ್ಯೂಸ್
03-09-21 12:51 pm sOURCE: nEWS 18 Kannada ಡಾಕ್ಟರ್ಸ್ ನೋಟ್
ಕಾಲು ನೋವು, ಮೂಳೆ ನೋವು ಅಥವಾ ಮೂಳೆ ಜಡತ್ವ, ನಿಧಾನವಾದ ಬೆಳವಣಿಗೆ ಸಮಸ್ಯೆಯಿಂದ ನಮ್ಮ ಮಕ್ಕಳು ಬಳಲುತ್ತಿದ್ದಾರೆ ಎಂದು ವೈದ್ಯರ ಬಳಿ ನಾವು ಹೋದರೆ, ಅವರು ವಿಟಮಿನ್ ಡಿ ಕೊರತೆಯಿದೆ ಎಂದು ಖಂಡಿತವಾಗಿ ಹೇಳುತ್ತಾರೆ. ಹೌದು ಮಕ್ಕಳಿಗಾಗಲಿ ಅಥವಾ ದೊಡ್ಡವರಿಗಾಗಲಿ ವಿಟಮಿನ್ ಡಿ ಬಹಳ ಮುಖ್ಯವಾಗಿರುತ್ತದೆ. ಇಂದು ಅನೇಕ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಈ ವಿಟಮಿನ್ ಡಿ ಕೊರತೆಯನ್ನು ಕಾಣಬಹುದಾಗಿದೆ.ನಮ್ಮ ದೇಹಕ್ಕೆ ಅವಶ್ಯಕವಾಗಿರುವಂತಹ ಕ್ಯಾಲ್ಶಿಯಂ, ಮೆಗ್ನೀಷಿಯಮ್ ಮತ್ತು ಫಾಸ್ಫೇಟ್ನಂತಹ ಪ್ರಮುಖ ಪೋಷಕಾಂಶಗಳ ನಿಯಂತ್ರಣ ಮತ್ತು ಹೀರಿಕೊಳ್ಳುವಿಕೆಯಲ್ಲಿ ವಿಟಮಿನ್ ಡಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್ ಡಿಯನ್ನು ಹೇಗೆ ಪಡೆಯುವುದು ಎಂದರೆ ಬೆಳಗ್ಗೆ ಸೂರ್ಯನ ಕಿರಣಗಳಿಂದ ಅಂತ ಮಾತ್ರ ಬಹುತೇಕರು ತಿಳಿದುಕೊಂಡಿದ್ದಾರೆ.
ಈ ವಿಟಮಿನ್ ಡಿ ಕೊರತೆಯು ತುಂಬಾ ಮೃದು ಮತ್ತು ಬಿರುಸಾದ ಮೂಳೆಗಳು, ಕೀಲು ನೋವು, ಬೆನ್ನು ನೋವು, ಸ್ನಾಯು ನೋವಿಗೆ ಕಾರಣವಾಗಬಹುದು. ಸಂಧಿವಾತ, ರಿಕೆಟ್ಸ್ ಮತ್ತು ಆಸ್ಟಿಯೊಪೋರೋಸಿಸ್ನಂತಹ ಪ್ರಕರಣಗಳನ್ನೂ ಕಾಣಬಹುದು. ವಿಟಮಿನ್ ಡಿ ಕೊರತೆಯ ಮುಖ್ಯವಾದ ಕಾರಣವೆಂದರೆ ನಮ್ಮ ಜಡ ಜೀವನಶೈಲಿ ಎಂದರೆ ತಪ್ಪಾಗುವುದಿಲ್ಲ.
ಮುಂಜಾವಿನ ಸೂರ್ಯನ ಕಿರಣಗಳು ವಿಟಮಿನ್ ಡಿ ಏಕೈಕ ಮೂಲವಲ್ಲ, ಕೆಲವು ಆಹಾರಗಳು ಸಹ ವಿಟಮಿನ್ ಡಿ ಸಮೃದ್ಧ ಮೂಲವಾಗಿದ್ದು, ಇವುಗಳನ್ನು ಸೇವಿಸುವುದರಿಂದಲೂ ಸಹ ನಮಗೆ ವಿಟಮಿನ್ ಡಿ ದೊರೆಯುತ್ತದೆ.
ಅಮೆರಿಕದ ಒಂದು ಅಧ್ಯಯನದ ಪ್ರಕಾರ ವಿಟಮಿನ್ ಡಿ ಹೊಂದಿರುವಂತಹ ಸಮೃದ್ಧ ಆಹಾರಗಳು ಮಧುಮೇಹದ ಅಪಾಯ ದೂರವಿಡಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ. ಮತ್ತೊಂದು ಅಧ್ಯಯನವು ವಿಟಮಿನ್ ಡಿ ಶ್ವಾಸಕೋಶದಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಎದುರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಆದ್ದರಿಂದ, ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ 2021ರ ಪ್ರಯುಕ್ತವಾಗಿ ವಿಟಮಿನ್ ಡಿ ಹೊಂದಿರುವಂತಹ 7 ಆಹಾರ ಪದಾರ್ಥಗಳು ಇಲ್ಲಿವೆ.
1. ಮೊಟ್ಟೆಯಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಶಿಯಂ ಮತ್ತು ಹೆಚ್ಚಿನವುಗಳಿಂದ ತುಂಬಿರುತ್ತವೆ. ನಿಮ್ಮ ದೈನಂದಿನ ಅಡುಗೆಗೆ ಮೊಟ್ಟೆಯನ್ನು ಸೇರಿಸಿಕೊಳ್ಳುವುದು ತುಂಬಾ ಸುಲಭ.
2. ಹಾಲಿನಿಂದ ಮಾಡಿದ ಮೊಸರು, ಮೊಸರು ಹಗುರವಾಗಿದ್ದು ಮತ್ತು ಜೀರ್ಣಿಸಿಕೊಳ್ಳಲು ಸುಲಭಮಾಡುತ್ತದೆ. ಇದು ವಿಟಮಿನ್ ಡಿ ಉತ್ತಮ ಮೂಲವಾಗಿದೆ.
3. ನಮ್ಮ ಬಾಲ್ಯದಲ್ಲಿ ಪ್ರತಿದಿನ ಹಾಲು ಸೇವಿಸುವಂತೆ ದೊಡ್ಡವರು ಒತ್ತಾಯಿಸುತ್ತಾರೆ, ಏಕೆಂದರೆ ಇದು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಉತ್ತಮ ಮೂಲವಾಗಿದೆ.
4. ಅಣಬೆಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಣಬೆಗಳಲ್ಲಿಯೂ ಸಹ ವಿಟಮಿನ್ ಡಿ ಇರುತ್ತದೆ.
5. ಪಾಲಕ್ ಸೊಪ್ಪಿನಲ್ಲಿ ಸಹ ಪ್ರೋಟೀನ್ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುತ್ತವೆ.
6. ಚೀಸ್ ಕೊಬ್ಬಿನ ಆಹಾರ ಎಂದು ಕರೆಯಲಾಗಿದ್ದರೂ, ಹಾಲಿನ ಈ ಉಪ ಉತ್ಪನ್ನವು ವಿಟಮಿನ್ ಡಿ ಉತ್ತಮ ಮೂಲವಾಗಿದೆ.
7. ಸೋಯಾಬೀನ್ ಸಹ ಪ್ರೋಟೀನ್ ಮತ್ತು ವಿಟಮಿನ್ ಡಿಯನ್ನು ಹೊಂದಿರುತ್ತದೆ.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm