ಬ್ರೇಕಿಂಗ್ ನ್ಯೂಸ್
14-09-21 11:43 am Reena TK, Boldsky ಡಾಕ್ಟರ್ಸ್ ನೋಟ್
ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಪ್ರಸೂತಿ ತಜ್ಞರು ಸಲಹೆ ನೀಡುತ್ತಾರೆ. ಫಾಲಿಕ್ ಆಮ್ಲ ಸಪ್ಲಿಮೆಂಟ್ ತೆಗೆದುಕೊಳ್ಳುವುದರಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚುವುದು. ಗರ್ಭಿಣಿಯಾದ ಮೇಲೂ ಫಾಲಿಕ್ ಆಮ್ಲ ಸಪ್ಲಿಮೆಂಟ್ ತೆಗೆದುಕೊಳ್ಳಲೇಬೇಕೆಂದು ತಜ್ಞರು ಸೂಚಿಸುತ್ತಾರೆ. ತಾಯಿ ಹಾಗೂ
ಗರ್ಭಧಾರಣೆಗೆ, ಗರ್ಭನಿಂತ ಮೇಲೆ ಮಗುವಿನ ಮೂಳೆ,ಬೆರಳುಗಳು, ಉಗುರುಗಳು, ಬೆನ್ನುಮೂಳೆ, ಮೆದುಳು ಇವುಗಳ ಬೆಳವಣಿಗೆಗೆ ಫಾಲಿಕ್ ಆಮ್ಲ ಅತ್ಯವಶ್ಯಕವಾಗಿದೆ. ಫಾಲಿಕ್ ಆಮ್ಲದ ಕೊರತೆ ಉಂಟಾದರೆ ಮಗುವಿನ ಆರೋಗ್ಯದಲ್ಲಿ ನ್ಯೂನತೆ ಕಂಡು ಬರುವುದು.
ಆದ್ದರಿಂದ ಗರ್ಭಧಾರಣೆಗೆ ಬಯಸುವವರು, ಗರ್ಭಿಣಿಯಾದವರು ಫಾಲಿಕ್ ಆಮ್ಲ ಕಡ್ಡಾಯವಾಗಿ ಸೇವಿಸಬೇಕು. ಫಾಲಿಕ್ ಆಮ್ಲ ನೈಸರ್ಗಿಕವಾಗಿ ಕೆಲವೊಂದು ಹಣ್ಣು, ತರಕಾರಿ, ಧಾನ್ಯಗಳು, ನಟ್ಸ್ಗಳಲ್ಲಿ ಇರುತ್ತದೆ.
ಫಾಲಿಕ್ ಆಮ್ಲ ಏಕೆ ಅವಶ್ಯಕ?
ಫಾಲಿಕ್ ಆಮ್ಲ ಮತ್ತು ಫೋಲೆಟ್ ದೇಹದಲ್ಲಿ ಹೊಸ ಕೆಂಪು ರಕ್ತ ಕಣಗಳ ಉತ್ಪತ್ತಿಗೆ ಸಹಕಾರಿಯಾಗಿದೆ. ಕೆಂಪು ರಕ್ತ ಕಣಗಳು ದೇಹದಲ್ಲಿ ಎಲ್ಲಾ ಭಾಗಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿ ಕಡಿಮೆಯಾದರೆ ದೇಹದ ಭಾಗಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದು. ಫಾಲಿಕ್ ಆಮ್ಲ ಕೊರತೆ ಉಂಟಾದರೆ ರಕ್ತ ಹೀನತೆ ಸಮಸ್ಯೆ ಉಂಟಾಗುವುದು.
ಗರ್ಭಾವಸ್ಥೆಯಲ್ಲಿ ಫಾಲಿಕ್ ಆಮ್ಲ ತುಂಬಾ ಅವಶ್ಯಕ ಏಕೆ?
ಗರ್ಭಾವಸ್ಥೆಯ ಮೊದಲನೇ ವಾರದಲ್ಲಿ ಫಾಲಿಕ್ ಆಮ್ಲ ರೂಪಗೊಂಡಿರುವ ಭ್ರೂಣದ ಮೆದುಳು ಹಾಗೂ ಬೆನ್ನುಮೂಳೆ ಸರಿಯಾದ ರೀತಿಯಲ್ಲಿ ಕೂಡಿಕೊಳ್ಳುವಂತೆ ಮಾಡುವುದು. ಇದು ಮಗುವಿನಲ್ಲಿ ಅಂಗ ವೈಕ್ಲಯ ಉಂಟಾಗುವುದನ್ನು ತಡೆಗಟ್ಟಬಹುದು. ಫಾಲಿಕ್ ಆಮ್ಲ ದ್ರವರೂಪದಲ್ಲಿ ಇರುವುದರಿಂದ ಇದನ್ನು ನಮ್ಮ ದೇಹ ಸಂಗ್ರಹಿಸಿ ಇಡುವುದಿಲ್ಲ, ಇದು ಮೂತ್ರದಲ್ಲಿ ಹೊರ ಹೋಗುತ್ತದೆ. ಆದ್ದರಿಂದ ಫಾಲಿಕ್ ಆಮ್ಲದ ಕೊರತೆ ಉಂಟಾಗದಿರಲು ಗರ್ಭಿಣಿ ಪ್ರತಿದಿನ ಫಾಲಿಕ್ ಆಮ್ಲ ಸಪ್ಲಿಮೆಂಟ್ ಹಾಗೂ ಫಾಲಿಕ್ ಆಮ್ಲ ಇರುವ ಆಹಾರಗಳನ್ನು ಸೇವಿಸಬೇಕು. ಏಕೆಂದರೆ ಮಗುವಿನಲ್ಲಿ ದೈಹಿಕ ನ್ಯೂನತೆ ಹಾಗೂ ಮಾನಸಿಕ ನ್ಯೂನತೆ ಮೊದಲ ವಾರಗಳಲ್ಲಿ ಉಂಟಾಗುವುದು. ಆದ್ದರಿಂದ ಅದನ್ನು ತಡೆಗಟ್ಟಲು ಗರ್ಭಾವಸ್ಥೆಯ ಪ್ರಾರಂಭದಲ್ಲಿ ಫಾಲಿಕ್ ಆಮ್ಲ ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
ಫಾಲಿಕ್ ಆಮ್ಲ ತೆಗೆದುಕೊಳ್ಳುವುದರಿಂದ ಇತರ ಪ್ರಯೋಜನಗಳು
ಗರ್ಭಪಾತ ತಡೆಗಟ್ಟುವುದು: ಗರ್ಭಪಾತದ ಅಪಯ ತಡೆಗಟ್ಟುವುದು ಎಂದು ಅಧ್ಯಯನಗಳು ಹೇಳಿವೆ. ಮಗುವಿನ ಮೆದುಳಿನ ಬೆಳವಣಿಗೆಗೆ ಅವಶ್ಯಕ: ಫಾಲಿಕ್ ಆಮ್ಲ ಕೊರತೆಯಾದರೆ ಮಗುವಿನ ಬೆಳವಣಿಗೆಗೆ ತೊಂದರೆಯಾಗಬಹುದು. ಇದನ್ನು ತಡೆಗಟ್ಟಲು ಫಾಲಿಕ್ ಆಮ್ಲ ಅವಶ್ಯಕವಾಗಿದೆ. ಹೃದಯದ ಆರೋಗ್ಯಕ್ಕೆ ಅವಶ್ಯಕ: ಹೃದಯ ಸಂಬಂಧಿ ಕಾಯಿಲೆ ಮಗುವಿಗೆ ಉಂಟಾಗದಿರಲು ಫಾಲಿಕ್ ಆಮ್ಲದ ಕೊರತೆ ಉಂಟಾಗಬಾರದು. ಅವಧಿ ಪೂರ್ವ ಹೆರಿಗೆ ತಡೆಗಟ್ಟುವುದು: ಆರೋಗ್ಯಕರ ಆಹಾರಕ್ರಮದಿಂದ ಗರ್ಭಿಣಿ ಅವಧಿಪೂರ್ವ ಹೆರಿಗೆಯಾಗುವುದನ್ನು ತಡೆಗಟ್ಟಬಹುದಾಗಿದೆ.
ಫಾಲಿಕ್ ಆಮ್ಲ ಇರುವ ಆಹಾರಗಳು
ಗರ್ಭಿಣಿಯು ನಾರಿನಂಶ, ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಸಿ ಜೊತೆಗೆ ಫಾಲಿಕ್ ಆಮ್ಲ ಇರುವ ಆಹಾರಗಳನ್ನು ಸೇವಿಸಬೇಕು. ಈ ಆಹಾರಗಳಲ್ಲಿ ಫಾಲಿಕ್ ಆಮ್ಲ ಹೆಚ್ಚಿರುತ್ತದೆ.
* ಸೊಪ್ಪುಗಳಲ್ಲಿ ಫಾಲಿಕ್ ಆಮ್ಲ ಅಧಿಕವಿರುತ್ತದೆ: ಪಾಲಾಕ್, ಸಾಸಿವೆ ಸೊಪ್ಪು, ಬ್ರೊಕೋಲಿ, ಅಶ್ವಗಂಧ, ಲೆಟ್ಯೂಸೆ ಇವುಗಳಲ್ಲಿ ಫಾಲಿಕ್ ಆಮ್ಲ ಇದೆ.
* ಹಸರು ಬಟಾಣಿ, ಬೀಟ್ರೂಟ್, ಪಪ್ಪಾಯಿ, ಬಾಳೆಹಣ್ಣು, ಕಿತ್ತಳೆ ಈ ಹಣ್ಣುಗಳಲ್ಲಿ ಫಾಲಿಕ್ ಆಮ್ಲ ಇವೆ.
* ಧಾನ್ಯಗಳು, ಬ್ರೆಡ್, ಪಾಸ್ತಾ, ಅನ್ನ ಇವುಗಳಲ್ಲಿಯೂ ಫಾಲಿಕ್ ಆಮ್ಲ ಇದೆ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm