ಬ್ರೇಕಿಂಗ್ ನ್ಯೂಸ್
15-09-21 04:44 pm Shreeraksha, Boldsky ಡಾಕ್ಟರ್ಸ್ ನೋಟ್
ಕೆಲವೊಮ್ಮೆ ನಾವು ಇಷ್ಟಪಟ್ಟು ತಿನ್ನುವ ಆಹಾರವೇ ನಮ್ಮ ಆರೋಗ್ಯ ಕೆಡಿಸಲು ಕಾರಣವಾಗಬಹುದು. ಜಿಟಜಿಟಿ ಎಂದು ಮಳೆ ಸುರಿಯುವಾಗ ಬೀದಿಬದಿಯಲ್ಲಿ ಮಾಡುವ ಬಿಸಿಬಿಸಿ ಅಥವಾ ಮಸಾಲೆಯುಕ್ತ ಆಹಾರಗಳ ಕಡೆ ಮನಸ್ಸು ಸೆಳೆಯುತ್ತದೆ. ಆದರೆ ಇದರ ಆರೋಗ್ಯ ಪರಿಣಾಮಗಳ ಬಗ್ಗೆ ಎಂದೂ ಯೋಚಿಸುವುದಿಲ್ಲ. ಇದು ಕೆಲವೊಮ್ಮೆ ಫುಡ್ ಪಾಯಿಸನ್ ಗೆ ಕಾರಣವಾಗುತ್ತದೆ.
ಫುಡ್ ಪಾಯಿಸನ್ ಆಹಾರದ ಕಳಪೆ ನೈರ್ಮಲ್ಯದಿಂದ ಸಾಮಾನ್ಯವಾಗಿ ಉಂಟಾಗುತ್ತಿದ್ದು, ಜ್ವರ, ಹೊಟ್ಟೆನೋವು ಮೊದಲಾದ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇಂತಹ ರೋಗ ಲಕ್ಷಣ ನಿವಾರಿಸಲು ಸಹಾಯ ಮಾಡುವ ಕೆಲವೊಂದು ನೈಸರ್ಗಿಕ ಗಿಡಮೂಲಿಕೆಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಇವುಗಳು ಫುಡ್ ಪಾಯಿಸನ್ನ್ನು ಕಡಿಮೆ ಮಾಡುತ್ತವೆ.
ಶುಂಠಿ:
ಶುಂಠಿಯು ಫುಡ್ ಪಾಯಿಸನ್ನ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಅದರ ಅಂತರ್ಗತ ಉರಿಯೂತದ ಗುಣಗಳಿಂದಾಗಿ ನಿಮ್ಮ ಹೊಟ್ಟೆಯ ಒಳಪದರವನ್ನು ಶಾಂತಗೊಳಿಸುತ್ತದೆ. ಒಂದು ಲೋಟ ತುರಿದ ಶುಂಠಿಯನ್ನು ಒಂದು ಕಪ್ ನೀರನೊಂದಿಗೆ ಕುದಿಸಿ. ಅಗತ್ಯವಿರುವಂತೆ ಜೇನುತುಪ್ಪ ಅಥವಾ ಸಕ್ಕರೆಯನ್ನು ಸೇರಿಸಿ. ಪರ್ಯಾಯವಾಗಿ, ನೀವು ಶುಂಠಿಯ ತುಂಡುಗಳನ್ನು ನೇರವಾಗಿ ತಿನ್ನಬಹುದು.
ಮೊಸರು ಮತ್ತು ಮೆಂತ್ಯ ಬೀಜ:
ಮೊಸರಿನ ಆಂಟಿಬ್ಯಾಕ್ಟೀರಿಯಲ್ ಗುಣಗಳು ಫುಡ್ ಪಾಯಿಸನ್ ಉಂಟುಮಾಡುವ ರೋಗಾಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳಲ್ಲಿ ಬಹಳಷ್ಟು ನಾರುಗಳಿದ್ದು, ಇವು ನೀರನ್ನು ಹೀರಿಕೊಂಡು, ಉತ್ತಮ ಜೀರ್ಣಕ್ರಿಯೆ ಆಗುವಂತೆ ನೋಡಿಕೊಳ್ಳುತ್ತದೆ. ಮೆಂತ್ಯ ಬೀಜಗಳು ಸಡಿಲಗೊಳಿಸುವ ಗುಣವನ್ನು ಹೊಂದಿದ್ದು ಅದು ಹೊಟ್ಟೆ ನೋವಿನ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಚಮಚ ಮೊಸರು ಮತ್ತು ಒಂದು ಚಮಚ ಮೆಂತ್ಯ ಬೀಜಗಳನ್ನು ತಿನ್ನಿರಿ. ಬೀಜಗಳನ್ನು ಅಗಿಯುವ ಬದಲು ನುಂಗಲು ಸೂಚಿಸಲಾಗುತ್ತದೆ.
ಬೆಳ್ಳುಳ್ಳಿ:
ಬೆಳ್ಳುಳ್ಳಿ ಅದರ ಜ್ವರನಿವಾರಕ ಮತ್ತು ಹೃದಯದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಪರಿಣಾಮಗಳಿಂದಾಗಿ ಅತಿಸಾರ ಮತ್ತು ಹೊಟ್ಟೆಯ ಅಸ್ವಸ್ಥತೆ ಸೇರಿದಂತೆ ಅನೇಕ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಒಂದು ಬೆಳ್ಳುಳ್ಳಿ ಎಸಳನ್ನು ಒಂದು ಲೋಟ ನೀರಿನ ಜೊತೆಗೆ ದಿನಕ್ಕೆ ಒಮ್ಮೆ ತೆಗೆದುಕೊಳ್ಳಿ. ನಿಮಗೆ ಬೆಳ್ಳುಳ್ಳಿಯ ವಾಸನೆ ಸಹಿಸಲಾಗದಿದ್ದರೆ, ಬೆಳ್ಳುಳ್ಳಿ ರಸವನ್ನು ಕುಡಿಯಬಹುದು. ಇಲ್ಲದಿದ್ದರೆ, ಬೆಳ್ಳುಳ್ಳಿ ಮತ್ತು ಸೋಯಾಬೀನ್ ಎಣ್ಣೆಯನ್ನು ಮಿಕ್ಸ್ ಮಾಡಿ, ಊಟದ ನಂತರ ಅದನ್ನು ನಿಮ್ಮ ಹೊಟ್ಟೆಗೆ ಮಸಾಜ್ ಮಾಡಿ.
ಜೇನುತುಪ್ಪ:
ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಫಂಗಲ್ ವಿರೋಧಿ ಗುಣಲಕ್ಷಣಗಳಿಂದಾಗಿ ಅತ್ಯಂತ ಪರಿಣಾಮಕಾರಿ ಫುಡ್ ಪಾಯಿಸನ್ ಚಿಕಿತ್ಸೆಗಳಲ್ಲಿ ಒಂದಾಗಿದೆ. ದಿನಕ್ಕೆ ಮೂರು ಬಾರಿ, ಒಂದು ಚಮಚ ಜೇನುತುಪ್ಪವನ್ನು ಸೇವಿಸಿ. ಬಯಸಿದರೆ ನೀವು ಇದನ್ನು ಚಹಾ ಅಥವಾ ನಿಂಬೆ ಪಾನಕದೊಂದಿಗೆ ಕುಡಿಯಬಹುದು.
ಜೀರಿಗೆ:
ಜೀರಿಗೆ ಬೀಜಗಳು ಫುಡ್ ಪಾಯಿಸನ್ ಗೆ ಸಾಂಪ್ರದಾಯಿಕ ಮನೆಮದ್ದು. ಇದು ನಿಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳ (ಆಹಾರವನ್ನು ಒಡೆಯುವ ಕಿಣ್ವಗಳು) ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಜೀರ್ಣಕ್ರಿಯೆ ವೇಗಗೊಳ್ಳುತ್ತದೆ. ಒಂದು ಕಪ್ ನೀರಿನಲ್ಲಿ ಜೀರಿಗೆಯನ್ನು ಕುದಿಸಿ, ನಂತರ ಅದಕ್ಕೆ ಕೊತ್ತಂಬರಿ ರಸವನ್ನು ಸೇರಿಸಿ, ದಿನಕ್ಕೆ ಎರಡು ಬಾರಿ ಕುಡಿಯಿರಿ. ಉಪ್ಪು, ಜೀರಿಗೆ ಮತ್ತು ಇಂಗುಗಳ ಸಂಯೋಜನೆಯನ್ನು ಸಹ ಬಳಸಬಹುದು. ಈ ಪಾನೀಯವನ್ನು ದಿನಕ್ಕೆ ಕನಿಷ್ಠ 2-3 ಬಾರಿ ಸೇವಿಸಬೇಕು.
ತುಳಸಿ:
ಫುಡ್ ಪಾಯಿಸನ್ ವಿರುದ್ಧ ಬಳಸಬಹುದಾದ ಅತ್ಯುತ್ತಮವಾದ ಗಿಡಮೂಲಿಕೆಗಳೆಂದರೆ ತುಳಸಿ ಎಲೆಗಳು. ತುಳಸಿ ಎಲೆಗಳು ಉರಿಯೂತದ ಗುಣಗಳನ್ನು ಹೊಂದಿದ್ದು, ಅದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.
ಕೊತ್ತಂಬರಿ:
ನಿಮ್ಮಲ್ಲಿ ಕೆಲವರಿಗೆ ಮಾತ್ರ ಇದರ ಚಿಕಿತ್ಸಕ ಪ್ರಯೋಜನಗಳ ಬಗ್ಗೆ ತಿಳಿದಿರಬಹುದು. ಇದು ಹೊಟ್ಟೆಯ ಸೋಂಕಿನಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಎರಡು ರೂಪಗಳಲ್ಲಿ ಲಭ್ಯವಿದೆ: ತಾಜಾ ಮತ್ತು ಪುಡಿ. ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೊತ್ತಂಬರಿ ಎಣ್ಣೆಯಲ್ಲಿಯೂ ಇವೆ ಎಂದು ವರದಿಯಾಗಿದೆ. ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿಡಿ, ಮರುದಿನ ಬೆಳಿಗ್ಗೆ, ಅದನ್ನು ಕುಡಿಯಿರಿ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm