ಬ್ರೇಕಿಂಗ್ ನ್ಯೂಸ್
19-09-21 12:56 pm Source: News 18 Kannada ಡಾಕ್ಟರ್ಸ್ ನೋಟ್
ಆರೋಗ್ಯಕರ ಮತ್ತು ಸಮತೋಲಿನ ಆಹಾರದ ಸೇವನೆ ನಿಮ್ಮ ದೇಹಕ್ಕೆ ವಿವಿಧ ರೀತಿಯಲ್ಲಿ ಅನುಕೂಲಗಳನ್ನು ಉಂಟು ಮಾಡುತ್ತದೆ. ವಯಸ್ಸಿಗೆ ತಕ್ಕಂತೆ ನಮ್ಮ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. 40ನೇ ವಯಸ್ಸಿನ ಹೊಸ್ತಿಲಿನಲ್ಲಿರುವ ಮಹಿಳೆಯರು ತಮ್ಮಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಕಾಣುತ್ತಾರೆ. ಪೌಷ್ಟಿಕಾಂಶ ತಜ್ಞೆ ಲವ್ನೀತ್ ಬಾತ್ರಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ, “ನೀವೇನು ತಿನ್ನುತ್ತೀರೋ ಅದೇ ನೀವಾಗಿರುತ್ತೀರಿ ಮತ್ತು ನೀವು ಮಾಡುವ ನಿರ್ಧಾರಗಳು ಭವಿಷ್ಯದ ಆರೋಗ್ಯಕ್ಕೆ ಮುಖ್ಯವಾಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ. ಅವರು 40ರ ವಯಸ್ಸಿನ ಹೊಸ್ತಿಲಲ್ಲಿ ಇರುವ ಮಹಿಳೆಯರು ತಪ್ಪದೇ ಸೇವಿಸಬೇಕಾಗಿರುವ ಪೌಷ್ಟಿಕಾಂಶಗಳ ಮಾಹಿತಿಯನ್ನು ನೀಡಿದ್ದಾರೆ.
40 ನೇ ವಯಸ್ಸಿನಲ್ಲಿ ಮತ್ತು ಆ ನಂತರ ಮಹಿಳೆಯರಿಗೆ ಅಗತ್ಯವಿರುವ ಪೌಷ್ಟಿಕಾಂಶಗಳು
1. ಕಬ್ಬಿಣಾಂಶ ಸೇವನೆ :ಕಬ್ಬಿಣಾಂಶವು ರಕ್ತದ ಉತ್ಪಾದನೆಗೆ ಅತ್ಯಂತ ಆವಶ್ಯಕವಾದ ಪೌಷ್ಟಿಕಾಂಶವಾಗಿದೆ. “40ನೇ ವಯಸ್ಸಿನಲ್ಲಿ ಮಹಿಳೆಯರಲ್ಲಿ ಹಲವಾರು ಪ್ರಮುಖ ಬದಲಾವಣೆಗಳಾಗುತ್ತವೆ. ಮತ್ತು ಬಹಳಷ್ಟು ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯ ಹತ್ತಿರ ಬರುವ ಕಾಲ ಇದಾಗಿರುವುದರಿಂದ ಕಬ್ಬಿಣಾಂಶದ ಕೊರತೆಯಿಂದ ರಕ್ತ ಹೀನತೆಯ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ” ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ಒಣ ಬೀಜಗಳು, ದ್ವಿದಳ ಧಾನ್ಯಗಳು ಮತ್ತು ಸೊಪ್ಪು ತರಕಾರಿಗಳ ಸೇವನೆಯಿಂದ ಕಬ್ಬಿಣಾಂಶವನ್ನು ಪಡೆಯಬಹುದು. ಕಬ್ಬಿಣಾಂಶವನ್ನು ದೇಹವು ಸರಿಯಾಗಿ ಹೀರಿಕೊಳ್ಳಬೇಕಾದರೆ ನೀವು ಅದರ ಜೊತೆ ಅದಕ್ಕೆ ತಕ್ಕಷ್ಟು ವಿಟಮಿನ್ ಸಿ ಯುಕ್ತ ಆಹಾರವನ್ನು ಕೂಡ ಸೇವಿಸಬೇಕು.
2. ಆರೋಗ್ಯವಂತ ಸ್ನಾಯುಗಳಿಗಾಗಿ ವಿಟಮಿನ್:ಪ್ರೋಟಿನ್ ಅನ್ನು ಮಾನವನ ದೇಹ ರಚನೆಯ ಬ್ಲಾಕ್ಗಳು ಎಂದು ಕರೆಯುತ್ತಾರೆ. ಅದು ಸ್ನಾಯುಗಳ ರಚನೆಗೆ ಮತ್ತು ಅವುಗಳ ದುರಸ್ತಿಗೆ ಸಹಾಯ ಮಾಡುತ್ತದೆ.ಅದು ವಯಸ್ಸಾದಂತೆ ಸಮತೋಲನ ಮತ್ತು ಚಲನಶೀಲತೆಯನ್ನು ಕಾಪಾಡಿಕೊಳ್ಳಲು ವ್ಯಾಯಾಮದ ಕೊರತೆಯು ಮಸಲ್ ಮಾಸ್ನ ನಷ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ, ಪ್ರೊಟೀನ್ ಯುಕ್ತ ಆಹಾರಗಳಾದ, ಬೀನ್ಸ್, ಬೇಳೆಗಳು, ಡೈರಿ ಉತ್ಪನ್ನಗಳಾದ ಹಾಲು, ಪನೀರ್, ಮೊಸರು ಮತ್ತು ಮೊಟ್ಟೆಯನ್ನು ಸೇವಿಸಬೇಕು ಎಂದು ತಜ್ಞರು ಶಿಫಾರಸ್ಸು ಮಾಡುತ್ತಾರೆ.
3. ಮೂಳೆಯ ಆರೋಗ್ಯಕ್ಕೆ ಕ್ಯಾಲ್ಸಿಯಂ :ಋತು ಬಂಧವು ಮೂಳೆಯ ಸಾಂದ್ರತೆಯ ಮೇಲೆ ಪ್ರಭಾವ ಬೀರುತ್ತದೆ, ಹಾಗಾಗಿ ಮಹಿಳೆಯರಲ್ಲಿ ಆಸ್ಟಿಯೋಪೋಸಿಸ್ನ ಅಪಾಯವು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಕ್ಯಾಲ್ಸಿಯಂ ಬದುಕಿನ ಎಲ್ಲಾ ಹಂತದಲ್ಲಿ , ವಿಶೇಷವಾಗಿ 40ರ ನಂತರ ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. “ ಇದು ನಮ್ಮ ಹೃದಯ, ಸ್ನಾಯುಗಳು ಮತ್ತು ನರಗಳ ಕಾರ್ಯ ನಿರ್ವಹಣೆಗೆ ಅಗತ್ಯವಾಗಿದೆ. ಕ್ಯಾಲ್ಸಿಯಂ ಸೇವನೆ ಅಧಿಕಗೊಳಿಸಬೇಕಾದರೆ, ಡೈರಿ ಉತ್ಪನ್ನ, ಸೊಪ್ಪು ತರಕಾರಿ, ರಾಗಿ ಮತ್ತು ಎಳ್ಳು ಮುಂತಾದ ಆಹಾರ ಸೇವನೆ ಬಗ್ಗೆ ಗಮನ ಹರಿಸಿ” ಎನ್ನುತ್ತಾರೆ ಬಾತ್ರಾ.
4. ವಿಟಮಿನ್ ಡಿ ಸೇವನೆ :ಬಿಸಿಲಿನಿಂದ ಸಿಗುವ ವಿಟಮಿನ್ ಡಿ ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. “ವಿಟಮಿನ್ ಡಿ, ವಿಶೇಷವಾಗಿ 40ನೇ ವಯಸ್ಸಿನ ಬಳಿಕ ಬಹಳ ಮುಖ್ಯ, ಏಕೆಂದರೆ ಅದು ವಯೋ ಸಹಜ ಬದಲಾವಣೆಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಯ ಕೊರತೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಅದಲ್ಲದೆ ವಿಟಮಿನ್ ಡಿ, ದೇಹದಲ್ಲಿ ಕ್ಯಾಲ್ಸಿಯಂನ ಹೀರುವಿಕೆಗೆ ಅತ್ಯಂತ ಅಗತ್ಯವೂ ಕೂಡ” ಎನ್ನುತ್ತಾರೆ ಬಾತ್ರ.
5. ವಿಟಮಿನ್ ಬಿ ಗಳ ಸೇವನೆ:ಪೌಷ್ಟಿಕಾಂಶ ತಜ್ಞರ ಪ್ರಕಾರ, ದೇಹದಲ್ಲಿನ ಸೆಲ್ಯುಲರ್ ಮತ್ತು ಅಂಗಾಗಗಳ ವ್ಯವಸ್ಥೆಯನ್ನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದರೆ ಅಗತ್ಯ ವಿಟಮಿನ್ ಬಿಗಳನ್ನು ಸೇವಿಸಲೇಬೇಕು. ದ್ವಿದಳ ಧಾನ್ಯಗಳು ಮತ್ತು ಸೊಪ್ಪು ತರಕಾರಿಗಳ ಸೇವನೆಯಿಂದ ವಿಟಮಿನ್ ಬಿ ದೇಹಕ್ಕೆ ಲಭ್ಯವಾಗುತ್ತದೆ.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm