ಬ್ರೇಕಿಂಗ್ ನ್ಯೂಸ್
20-09-21 05:43 pm Shreeraksha, Boldsky ಡಾಕ್ಟರ್ಸ್ ನೋಟ್
ವಿರಳವಾಗಿ ಬಳಸುವ ತರಕಾರಿಗಳಲ್ಲಿ ಗೆಣಸು ಅಥವಾ ಸಿಹಿ ಆಲೂಗಡ್ಡೆ ಕೂಡ ಒಂದು. ಪೋಷಕಾಂಶಗಳು ಸಮೃದ್ಧವಾಗಿದ್ದರೂ, ಉಪಯೋಗಿಸುವವರ ಪ್ರಮಾಣ ತೀರಾ ಕಡಿಮೆ. ಗೆಣಸಿನಲ್ಲಿ ಬೀಟಾ-ಕ್ಯಾರೋಟಿನ್, ಆಂಥೋಸಯಾನಿನ್‌ಗಳು, ಬಿ ಜೀವಸತ್ವಗಳು, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಇತರ ಖನಿಜಗಳು ಸೇರಿದಂತೆ ಹಲವು ವಿಭಿನ್ನ ಪೋಷಕಾಂಶಗಳಿವೆ. ಈ ಪೋಷಕಾಂಶಗಳು ನಿಮ್ಮ ಚರ್ಮ ಮತ್ತು ಕೂದಲಿಗೆ ಕೆಲವು ಅದ್ಭುತ ಪ್ರಯೋಜನಗಳನ್ನು ನೀಡಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಹೌದು, ಗೆಣಸಿನಿಂದ ಸಾಕಷ್ಟು ಅದ್ಭುತ ಲಾಭಗಳಿವೆ. ಅವುಗಳನ್ನು ಇಲ್ಲಿ ನೋಡೋಣ.
ತ್ವಚೆಯ ಯೌವ್ವನತೆ ಕಾಪಾಡುವುದು:
ಗೆಣಸಿನಲ್ಲಿ ಹೆಚ್ಚಿನ ಪ್ರಮಾಣದ ಬೀಟಾ-ಕ್ಯಾರೋಟಿನ್ ಇದೆ. ಆದ್ದರಿಂದ ಇದನ್ನು ಸೇವಿಸಿದಾಗ ವಿಟಮಿನ್ ಎ (ರೆಟಿನಾಲ್) ನ ಸಕ್ರಿಯ ರೂಪವಾಗಿ ಪರಿವರ್ತನೆಯಾಗುತ್ತದೆ. ಚರ್ಮದ ಜೀವಕೋಶಗಳ ಉತ್ಪಾದನೆ ಮತ್ತು ಬೆಳವಣಿಗೆಗೆ ಈ ವಿಟಮಿನ್ ಎ ಅಗತ್ಯವಿದೆ. ವಿಟಮಿನ್ ಎ ಯ ಅಧಿಕ ಸೇವನೆಯು ಆರೋಗ್ಯಕರ ಚರ್ಮದ ಕೋಶಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಮೂಲಕ ಸದಾ ತಾರುಣ್ಯ ಪೂರ್ಣ ತ್ವಚೆ ಪಡೆಯಲು ಸಹಾಯವಾಗುವುದು.
ವಯಸ್ಸಾಗುವಿಕೆಯ ಲಕ್ಷಣಗಳನ್ನು ನಿಧಾನಗೊಳಿಸುವುದು:
ಗೆಣಸಿನಲ್ಲಿ ಆಂಥೋಸಯಾನಿನ್‌ಗಳು ಹೆಚ್ಚು ಲಭ್ಯವಿರುವ ಪೌಷ್ಟಿಕಾಂಶವಾಗಿದ್ದು, ಇದು ವಯಸ್ಸಾಗುವಿಕೆಯ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ಆಂಥೋಸಯಾನಿನ್‌ಗಳು ಒಂದು ರೀತಿಯ ಉತ್ಕರ್ಷಣ ನಿರೋಧಕಳಾಗಿದ್ದು, ಫ್ರೀ ರಾಡಿಕಲ್ ಎಂದು ಕರೆಯಲ್ಪಡುವ ಅಣುಗಳು ಬೆಳೆಯುವುದನ್ನು ತಡೆಯುತ್ತವೆ. ಈ ಮೂಲಕ ವಯಸ್ಸಾದ ಲಕ್ಷಣಗಳಾದ ಸುಕ್ಕು, ಸೂಕ್ಷ್ಮ ರೇಖೆಗಳು ಬರುವುದನ್ನು ನಿಧಾನಗೊಳಿಸುತ್ತದೆ.
ಕಾಲಜನ್ ಉತ್ಪಾದನೆ:
ಗೆಣಸಿನಲ್ಲಿ ವಿಟಮಿನ್ ಸಿ ಇದ್ದು, ಇದು ಆ್ಯಂಟಿಆಕ್ಸಿಡೆಂಟ್ ಮತ್ತು ಕಾಲಜನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕೂದಲು ಮತ್ತು ಉಗುರು ಸೇರಿದಂತೆ ಚರ್ಮ ಮತ್ತು ಇತರ ಸಂಯೋಜಕ ಅಂಗಾಂಶಗಳಲ್ಲಿ ಕಾಲಜನ್ ಮುಖ್ಯ ಅಂಶವಾಗಿದೆ.
ತ್ವಚೆಯ ಮಾಯಿಶ್ಚರೈಸಿಂಗ್:
ಗೆಣಸಿನಲ್ಲಿ ಪೊಟ್ಯಾಸಿಯಮ್ ಮತ್ತು ಪ್ಯಾಂಟೊಥೆನಿಕ್ ಗಳೆಂಬ ನೈಸರ್ಗಿಕ ಮಾಯಿಶ್ಚರೈಸರ್‌ಗಳಾಗಿ ಕಾರ್ಯನಿರ್ವಹಿಸುವ ಅಂಶಗಳನ್ನು ಹೊಂದಿದೆ. ಪೊಟ್ಯಾಷಿಯಂಗಾಗಿ ಆಂತರಿಕವಾಗಿ ಸೇವನೆ ಮಾಡಬಹುದು ಜೊತೆಗೆ ಪ್ಯಾಂಟೊಥೆನಿಕ್ ಇರುವುದರಿಂದ ಇದನ್ನು ನೇರವಾಗಿ ಚರ್ಮಕ್ಕೆ ಹಚ್ಚುವುದರಿಂದ ಗೆಣಸು ತೇವಾಂಶವನ್ನು ನೀಡುತ್ತದೆ ಹಾಗೂ ಹೆಚ್ಚುವರಿ ಮುಖದ ಎಣ್ಣೆಯನ್ನು ತೆಗೆಯಲು ಸಹಾಯ ಮಾಡುತ್ತದೆ. ಬೇಯಿಸಿದ ಗೆಣಸು,ಜೇನುತುಪ್ಪ, ಶುಂಠಿ ಪುಡಿ ಮತ್ತು ಹಾಲಿನೊಂದಿಗೆ ಸುಲಭವಾದ ಗೆಣಸು ಫೇಸ್ ಮಾಸ್ಕ್ ತಯಾರಿಸಬಹುದು.
ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ:
ಗೆಣಸಿನಲ್ಲಿ ಕಂಡುಬರುವ ಇನ್ನೊಂದು ಪ್ರಮುಖ ಪೋಷಕಾಂಶವೆಂದರೆ ಫೋಲೇಟ್. ಫೋಲೇಟ್ ಕೊರತೆಯಿಂದ ಸೂರ್ಯನ ಹಾನಿಕಾರಕ ಕಿರಣಗಳ ಹಾನಿಯನ್ನ ಹೆಚ್ಚಿಸುತ್ತದೆ, ಇದು ಚರ್ಮದ ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಿದೆ. ಗೆಣಸನ್ನು ಸಮತೋಲಿತ ಆಹಾರಕ್ಕೆ ಸೇರಿಸಿದರೆ, ಫೋಲೇಟ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕೂದಲು ಬೆಳವಣಿಗೆ ಸಹಾಯ:
ಗೆಣಸು ಕೂದಲಿನ ಬೆಳವಣಿಗೆಗೆ ಮುಖ್ಯವಾದ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದರಲ್ಲಿ ವಿಟಮಿನ್ ಬಿ, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಸತುವು ಸೇರಿವೆ. ಆದರೆ ಗೆಣಸು ಮತ್ತು ಕೂದಲಿನ ಬೆಳವಣಿಗೆಯ ಬಗ್ಗೆ ಯಾವುದೇ ನೇರ ಅಧ್ಯಯನವಿಲ್ಲದಿದ್ದರೂ, ಸಿಹಿ ಆಲೂಗಡ್ಡೆ ಕೂದಲನ್ನು ಬೆಂಬಲಿಸುವ ಪೋಷಕಾಂಶಗಳ ಉತ್ತಮ ಮೂಲವಾಗಿರುವುದರಿಂದ ಪ್ರಮುಖ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm