ಬ್ರೇಕಿಂಗ್ ನ್ಯೂಸ್
23-09-21 11:58 am Source: News 18 Kannada ಡಾಕ್ಟರ್ಸ್ ನೋಟ್
ತಾಯಿಯ ಮಧುಮೇಹವು ಇನ್ಸುಲಿನ್ ಮೂಲಕ ನಿಯಂತ್ರಣದಲ್ಲಿದ್ದರೂ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹುತೇಕ ಪರಿಶೀಲನೆಯಲ್ಲಿರಿಸಿದ್ದರೂ ಭ್ರೂಣಕ್ಕೆ ಹಾನಿಯುಂಟಾಗುವ ಸಾಧ್ಯತೆ ಇದ್ದು ಅನೇಕ ಜನ್ಮದೋಷಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಇದರ ವಿವರಗಳನ್ನು ‘ಸೈನ್ಸ್ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದ್ದು ಮಾತೃತ್ವ ವಯಸ್ಸಿನ ಯುಎಸ್‌ನ ಸುಮಾರು 3 ಮಿಲಿಯನ್ ಮಹಿಳೆಯರು ಹಾಗೂ ವಿಶ್ವದಾದ್ಯಂತ 60 ಮಿಲಿಯನ್ ಮಹಿಳೆಯರು ಮಧುಮೇಹ ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ರಕ್ತದಲ್ಲಿನ ಸಕ್ಕರೆ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಾದಾಗ ಈ ಕಾಯಿಲೆ ಉಂಟಾಗುತ್ತದೆ.
ಮಧುಮೇಹ ಹೊಂದಿರುವ ತಾಯಂದಿರಿಂದ 300,000 ರಿಂದ 400,000 ಭ್ರೂಣಗಳು ನರಕ್ಕೆ ಸಂಬಂಧಿಸಿದ ದೋಷಗಳನ್ನು ಹೊಂದಿವೆ. ಅಂದರೆ ಬೆನ್ನುಹುರಿ ಹಾಗೂ ಮೆದುಳನ್ನು ರೂಪಿಸುವ ಅಂಗಾಂಶಗಳು ಸರಿಯಾಗಿ ರೂಪುಗೊಳ್ಳಲು ವಿಫಲವಾದಾಗ ಗರ್ಭಪಾತ ಅಥವಾ ತೀವ್ರ ಅಂಗವೈಕಲ್ಯಕ್ಕೆ ಕಾರಣವಾಗಬಹುದು ಎಂಬುದಾಗಿ ಅಧ್ಯಯನ ತಿಳಿಸಿದೆ.
ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು (UMSOM) ಇಲಿಗಳ ಮೇಲೆ ಈ ಕುರಿತಂತೆ ಅಧ್ಯಯನ ನಡೆಸಿದ್ದು, ರಚನಾತ್ಮಕ ಜನ್ಮದೋಷಗಳ ಹಿಂದಿರುವ ಕಾರಣವನ್ನು ಕಂಡುಹಿಡಿದಿದ್ದಾರೆ. ನರ ಅಂಗಾಂಶಗಳು ಬಹುಬೇಗನೇ ಪಕ್ವಗೊಳ್ಳುವುದರಿಂದ ಅಂದರೆ ಸಾಕಷ್ಟು ಕೋಶಗಳು ರೂಪುಗೊಳ್ಳುವ ಮೊದಲೇ ಬೆಳವಣಿಗೆ ಕುಂಠಿತಗೊಳಿಸುತ್ತದೆ ಎಂಬುದಾಗಿ ಸಂಶೋಧಕರು ಅನ್ವೇಷಿಸಿದ್ದಾರೆ.
ಪ್ರಸೂತಿ, ಸ್ತ್ರೀರೋಗ ಮತ್ತು ಸಂತಾನೋತ್ಪತ್ತಿ ವಿಜ್ಞಾನಗಳ ಪ್ರಾಧ್ಯಾಪಕರಾದ ಪೀಕ್ಸಿನ್ ಯಾಂಗ್, MD, PhD, MBA, ವೈದ್ಯಕೀಯ ವ್ಯವಹಾರಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಇ. ಅಲ್ಬರ್ಟ್ ರೀಸ್, UM ಬಾಲ್ಟಿಮೋರ್, ಮತ್ತು ಜಾನ್ Z. ಮತ್ತು UMSOM ನ ಪ್ರಾಧ್ಯಾಪಕ ಮತ್ತು ಡೀನ್ ಅಕಿಕೊ K. ಬೋವರ್ಸ್ ಮುಂದಾಳತ್ವದಲ್ಲಿ UMSOM ಸೆಂಟರ್ ಫಾರ್ ಬರ್ತ್ ಡಿಫೆಕ್ಟ್ ರಿಸರ್ಚ್ ಈ ಅಧ್ಯಯನ ನಡೆಸಿದೆ.
ಮಧುಮೇಹವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದ್ದರೂ, ಆಧುನಿಕ ಮಧುಮೇಹವು ಹೆಚ್ಚಾಗಿ ಯುವಜನರಲ್ಲಿ ಪತ್ತೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸ್ಥೂಲಕಾಯತೆ ಹಾಗೂ ಸಕ್ರಿಯವಾಗಿ ಚಟುವಟಿಕೆ ಇಲ್ಲದಿರುವುದಾಗಿದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ. ಇದರೊಂದಿಗೆ ವಯಸ್ಸಿಗೆ ಸಂಬಂಧಿಸಿದ ಹಲವಾರು ಕಾಯಿಲೆಗಳೂ ಮಧುಮೇಹದ ಮೇಲೆ ಪರಿಣಾಮ ಬೀರಿದ್ದು, ಅದೇ ರೀತಿ ಹೆಚ್ಚಿನ ಗ್ಲೂಕೋಸ್ ಭ್ರೂಣದ ಅಕಾಲಿಕ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ ಎಂದು ಡಾ. ಯಾಂಗ್ ತಿಳಿಸಿದ್ದಾರೆ.
ಹಲವಾರು ದಶಕಗಳಿಂದ ನಾವು ಊಹಿಸಿರುವ ಅಂಶವೆಂದರೆ ಅಕಾಲಿಕ ಬೆಳವಣಿಗೆಯಾದ ಸೆನಸೆನ್ಸ್ ಮಧುಮೇಹ ಹೊಂದಿರುವ ತಾಯಂದಿರ ಹೊಟ್ಟೆಯಲ್ಲಿರುವ ಭ್ರೂಣಗಳಿಗೆ ಸಂಭವಿಸುತ್ತಿದ್ದು ಹಲವಾರು ಜನ್ಮದೋಷಗಳಿಗೂ ಕಾರಣವಾಗಿದೆ. ಇತ್ತೀಚಿನ ತಂತ್ರಜ್ಞಾನ ಉಪಕರಣಗಳು ಹಾಗೂ ಸಂಶೋಧನೆಗಳ ಮೂಲಕ ನಮ್ಮ ಊಹೆ ನಿಜವೇ ಸುಳ್ಳೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದೂ ಹೇಳಿದ್ದಾರೆ.
ಭ್ರೂಣದ ಜನ್ಮದೋಷಗಳನ್ನು ಪತ್ತೆಹಚ್ಚುವುದು ಹೇಗೆ?
ಗರ್ಭಾವಸ್ಥೆಯ ಮಧುಮೇಹ ಭ್ರೂಣದಲ್ಲಿನ ಜನ್ಮದೋಷಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದಕ್ಕೆ ನಿಖರವಾದ ವಿಧಾನಗಳನ್ನು ಕಂಡುಕೊಳ್ಳುವುದು ಇದನ್ನು ತಡೆಗಟ್ಟಲು ಅನುಸರಿಸುವ ವಿಧಾನಗಳಲ್ಲೊಂದಾಗಿದೆ ಎಂದು ಯಾಂಗ್ ಹೇಳುತ್ತಾರೆ. ಕ್ಯಾನ್ಸರ್ ಔಷಧ ಬಳಸಿಕೊಂಡು ಪ್ರೌಢಾವಸ್ಥೆಯ ಹಂತವನ್ನು ನಿಧಾನಗೊಳಿಸುವುದಕ್ಕೆ ಸಂಶೋಧನಾಕಾರರಿಗೆ ಸಾಧ್ಯವಾಯಿತು. ಮಧುಮೇಹ ಅನುಸರಿಸುವ ರೂಪಾಂತರಗಳೊಂದಿಗೆ ಇಲಿಗಳ ಮರಿಗಳಲ್ಲಿ ನರಕ್ಕೆ ಸಂಬಂಧಿಸಿದ ಕೋಶಗಳು ಸಂಪೂರ್ಣವಾಗಿ ರೂಪುಗೊಂಡವು.
ಈ ಸಂಶೋಧನೆಗಳಿಂದ ತಿಳಿದುಬಂದಿರುವ ಅಂಶಗಳೆಂದರೆ ಮಧುಮೇಹ ಹೊಂದಿರುವ ತಾಯಂದಿರಿಂದ ಜನಿಸಿದ ಮಕ್ಕಳಲ್ಲಿ ಉಂಟಾಗುವ ಜನ್ಮದೋಷಗಳನ್ನು ಅಥವಾ ಗರ್ಭಪಾತದಂತಹ ಗಂಭೀರ ಅಪಾಯಗಳನ್ನು ತಡೆಗಟ್ಟಲು ವಿಶೇಷವಾದ ಚಿಕಿತ್ಸೆಗಳನ್ನು ಅಭಿವೃದ್ಧಿಗೊಳಿಸಬಹುದು ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಮಧುಮೇಹ ಹೊಂದಿರುವ ಇಲಿಗಳ 8-ದಿನದ ಮರಿಗಳ ನರ ಸಂಬಂಧಿತ ಅಂಗಾಂಶಗಳು ಅಪಕ್ವ ಬೆಳವಣಿಗೆಯ ಗುರುತುಗಳನ್ನು ಒಳಗೊಂಡಿವೆ ಎಂಬುದನ್ನು ಸಂಶೋಧನಾ ತಂಡವು ಬಹಿರಂಗಪಡಿಸಿದೆ.
ಕ್ಯಾನ್ಸರ್ ಔಷಧವಾದ ರಾಪಾಮೈಸಿನ್ ಮನುಷ್ಯರ ಮೇಲೆ ಪರಿಣಾಮಕಾರಿಯೇ?
ಈ ಗುರುತುಗಳು ಮಧುಮೇಹ ಹೊಂದಿಲ್ಲದ ತಾಯಿ ಇಲಿಯ ಮರಿಗಳಿಗಿಲ್ಲ ಎಂಬುದನ್ನೂ ಸಂಶೋಧನೆ ಬಹಿರಂಗಪಡಿಸಿದೆ. ಅಪಕ್ವ ಬೆಳವಣಿಗೆ ಗುರುತಿರುವ ಕೋಶಗಳು ರಾಸಾಯನಿಕ ಸಂಕೇತಗಳನ್ನು ಸ್ರವಿಸಿ ಅಕ್ಕಪಕ್ಕದ ಜೀವಕೋಶಗಳು ನಾಶಗೊಳ್ಳಲು ಕಾರಣವಾಗಿವೆ ಎಂಬುದಾಗಿ ಸಂಶೋಧನಾಕಾರರು ತಿಳಿಸಿದ್ದಾರೆ.
ಮಧುಮೇಹ ಹೊಂದಿರುವ ತಾಯಿ ಇಲಿಯ ಮರಿಗಳಿಗೆ ಕ್ಯಾನ್ಸರ್ ಔಷಧವಾದ ರಾಪಾಮೈಸಿನ್ ಅನ್ನು ಸಂಶೋಧಕರು ನೀಡಿದರು. ಇದು ಅಪಕ್ವ ಬೆಳವಣಿಗೆಯ ಕೋಶಗಳಿಂದ ಇತರ ಜೀವಕೋಶಗಳಿಗೆ ಉಂಟಾಗುವ ಹಾನಿ ತಡೆಯುತ್ತದೆ. ಈ ಔಷಧ ನೀಡಿದ ನಂತರ ಇಲಿಮರಿಗಳ ನರ ಅಂಗಾಂಶಗಳು ಇತರ ಆರೋಗ್ಯವಂತ ಇಲಿಮರಿಗಳ ನರ ಅಂಗಾಂಶಗಳಂತೆಯೇ ಅಭಿವೃದ್ಧಿಹೊಂದಿರುವುದನ್ನು ಕಂಡುಕೊಂಡಿದ್ದಾರೆ. ಈ ಔಷಧದ ಪ್ರಭಾವದಿಂದಾಗಿ ಅಪಕ್ವ ಬೆಳವಣಿಗೆ ಹೊಂದಿದ ಜೀವಕೋಶಗಳು ಸಾಮಾನ್ಯ ರೂಪಕ್ಕೆ ಬರಲು ಕಾರಣವಾಗಿವೆ ಎಂದು ಯಾಂಗ್ ತಿಳಿಸಿದ್ದಾರೆ.
ಆದರೆ ಇದೇ ಚಿಕಿತ್ಸೆಯನ್ನು ಮಾನವರಿಗೆ ನೀಡುವಲ್ಲಿ ಅಷ್ಟು ಸಮರ್ಪಕವಾಗಿಲ್ಲ ಎಂಬ ಅಂಶವನ್ನು ಸಂಶೋಧಕರು ಬಹಿರಂಗಪಡಿಸಿದ್ದು ಇದು ದೇಹದ ಇತರ ಜೀವಕೋಶಗಳ ಮೇಲೆ ಪರಿಣಾಮ ಬೀರುವುದರಿಂದ ವಿಷಕಾರಿಯಾಗಿ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾನವ ಶಿಶುಗಳಲ್ಲಿ ನರಕ್ಕೆ ಸಂಬಂಧಿಸಿದ ದೋಷಗಳನ್ನು ತಡೆಗಟ್ಟುವಲ್ಲಿ ಈ ಔಷಧವನ್ನು ಶಿಫಾರಸ್ಸು ಮಾಡಲಾಗಿಲ್ಲ ಎಂದು ಯಾಂಗ್ ತಿಳಿಸಿದ್ದಾರೆ.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm