ಬ್ರೇಕಿಂಗ್ ನ್ಯೂಸ್
13-12-21 10:50 am Source: Boldsky Kannada ಡಾಕ್ಟರ್ಸ್ ನೋಟ್
ಹಣ್ಣುಗಳು ನಮ್ಮ ದೈನಂದಿನ ಆಹಾರದ ಭಾಗವಾಗಿರಬೇಕು, ಏಕೆಂದರೆ ಇದು ದೈಹಿಕ ಆರೋಗ್ಯಕ್ಕೆ ಬಹಳ ಮುಖ್ಯ. ಜೊತೆಗೆ ಿವು ಆರೋಗ್ಯಕರ ಚರ್ಮ ಮತ್ತು ಕೂದಲನ್ನು ಉತ್ತೇಜಿಸುತ್ತದೆ. ನೆನಪಿಡಿ, ನಿಮ್ಮ ದೇಹದೊಳಗೆ ಎಂತಹ ಆಹಾರ ಹಾಕುತ್ತೀರೋ ಅದೇ ಹೊರಗೆ ತೋರುತ್ತದೆ, ಅದಕ್ಕಾಗಿಯೇ ದೇಹವನ್ನು ಪ್ರಯೋಜನಕಾರಿ ಪೋಷಕಾಂಶಗಳೊಂದಿಗೆ ತುಂಬಿಸುವುದು ಉತ್ತಮವಾಗಿದೆ.
ಆದ್ದರಿಂದ ಯುವಿಕಿರಣಗಳ ಹಾನಿ, ಪಿಗ್ಮೆಂಟೇಶನ್, ಸುಕ್ಕುಗಳು ಮತ್ತು ಹೆಚ್ಚಿನವುಗಳಿಂದ ನಿಮ್ಮ ಚರ್ಮವನ್ನು ಮುಕ್ತಗೊಳಿಸಲು ಮತ್ತು ಉತ್ತಮ ಕೂದಲನ್ನು ಉತ್ತೇಜಿಸಲು ಕೆಲವು ಹಣ್ಣುಗಳನ್ನು ನೀವು ಸೇವಿಸಬೇಕು. ಈ ಹಣ್ಣುಗಳು ಯಾವುವು? ಅವುಗಳನ್ನು ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ.
ಆರೋಗ್ಯಕರ ಕೂದಲು ಮತ್ತು ತ್ವಚೆ ಪಡೆಯಲು ಸೇವಿಸಬೇಕಾದ ಹಣ್ಣುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಅನಾನಸ್:
ನಾವು ವಿಟಮಿನ್ ಸಿ ಬಗ್ಗೆ ಯೋಚಿಸುವಾಗ, ತಕ್ಷಣ ನಮ್ಮ ಮನಸ್ಸಿನಲ್ಲಿ ಬರುವುದು ಕೇವಲ ಸಿಟ್ರಸ್ ಹಣ್ಣುಗಳ ಚಿತ್ರ, ಆದರೆ, ಅನಾನಸ್ ಹೊಳಪು ನೀಡುವ ಶಕ್ತಿಯ ಕೇಂದ್ರವಾಗಿದೆ. ಚರ್ಮವನ್ನು ವಯಸ್ಸಾಗದಂತೆ ತಡೆಯಲು, ನಿಯಮಿತವಾಗಿ ತಾಜಾ ಅನಾನಸ್ ಅನ್ನು ಸೇವಿಸಿ. ಇದು ಅತ್ಯುತ್ತಮ ಆಂಟಿ-ಏಜಿಂಗ್ ಆಹಾರಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಮೆಗ್ನೀಸಿಯಮ್, ವಿಟಮಿನ್ ಬಿ, ಟೆಸ್ಟೋಸ್ಟೆರಾನ್, ವಿಟಮಿನ್ ಸಿ ಮತ್ತು ರಂಜಕ ಮತ್ತು ಫೈಬರ್ನಂತಹ ಪೋಷಕಾಂಶಗಳನ್ನು ಹೊಂದಿದ್ದು, ಹೃದಯ, ಮೆದುಳನ್ನು ಬೆಂಬಲಿಸಲೂ ಕೆಲಸ ಮಾಡುತ್ತದೆ.
ನೆಲ್ಲಿಕಾಯಿ:
ಕೊರೊನಾ ಸಮಯದಲ್ಲಿ ಈ ಸೂಪರ್ಫುಡ್ನ ಅಗಾಧ ಪ್ರಯೋಜನಗಳ ಬಗ್ಗೆ ನಾವೆಲ್ಲರೂ ತಿಳಿದಿರುತ್ತೇವೆ. ಇದು ಅತ್ಯುತ್ತಮ ಕೂದಲು ಬೆಳವಣಿಗೆಯ ಬೂಸ್ಟರ್ ಎಂದು ಪರಿಗಣಿಸಲಾಗುತ್ತದೆ ಜೊತೆಗೆ ಚರ್ಮವನ್ನು ಮೊಡವೆಗಳಿಂದ ಮುಕ್ತಗೊಳಿಸಲು ರಕ್ತವನ್ನು ಶುದ್ಧೀಕರಿಸುತ್ತದೆ. ಇದು ವಿಟಮಿನ್ ಸಿ ಯ ಕೆಂದ್ರವಾಗಿದ್ದು, ಆಹಾರದ ಉತ್ಕರ್ಷಣ ನಿರೋಧಕ ಮೌಲ್ಯವನ್ನು ಹೆಚ್ಚಿಸುತ್ತದೆ. ಚರ್ಮದ ಉರಿಯೂತವನ್ನು ಕಡಿಮೆ ಮಾಡಲು, ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು, ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಗಳಿಗಾಗಿ 2 ನೆಲ್ಲಿಕಾಯಿ ಮತ್ತು 2 ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ, ಸೇವಿಸಬೇಕು. ನಿಂಬೆ ಸುಕ್ಕುಗಳು ಮತ್ತು ಮಂದ ಚರ್ಮದ ನೋಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ರಸವು ಕೂದಲಿಗೆ ಉತ್ತಮವಾಗಿದ್ದು, ಒಡೆಯುವುದನ್ನು ಮತ್ತು ಉದುರುವುದನ್ನು ತಡೆಯುತ್ತದೆ.
ಕಿತ್ತಳೆ:
ಈ ಕಿತ್ತಳೆ ರಸಭರಿತ ಹಣ್ಣು, ನಿಮ್ಮ ಚರ್ಮಕ್ಕೆ ಯೋಚಿಸುವುದಕ್ಕಿಂತ ಹೆಚ್ಚು ಪ್ರಯೋಜನವನ್ನು ನೀಡುತ್ತವೆ. ಕಿತ್ತಳೆಯು ದೇಹದಲ್ಲಿ ಕಾಲಜನ್ ಉತ್ಪಾದನೆಯನ್ನು ನೈಸರ್ಗಿಕ ರೀತಿಯಲ್ಲಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಹೆಚ್ಚು ಕಿರಿಯವರಾಗಿ ಕಾಣುವಂತೆ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಸಿ ಕೂಡ ಇದ್ದು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.
ಕಲ್ಲಂಗಡಿ:
ನಿಮ್ಮ ನೀರಿನ ಸೇವನೆಯನ್ನು ಹೆಚ್ಚಿಸಲು, ಕಲ್ಲಂಗಡಿಗಳನ್ನು ಸೇವಿಸಬೇಕು. ಇದರಲ್ಲಿ 90% ಕ್ಕಿಂತ ಹೆಚ್ಚು ನೀರಿದ್ದು, ನಿಮ್ಮ ತ್ವಚೆಯನ್ನು ರೂಪಿಸುವ ಜೀವಕೋಶಗಳಿಗೆ ನೀರನ್ನು ಪೂರೈಸುವ ಮೂಲಕ ನಿಮ್ಮ ಚರ್ಮವನ್ನು ಯುವ ಮತ್ತು ತಾಜಾವಾಗಿ ಕಾಣುವಲ್ಲಿ ಉತ್ತಮ ಪಾತ್ರವನ್ನು ವಹಿಸುತ್ತವೆ. ಅವು ಲೈಕೋಪೀನ್ ಎಂಬ ಫೈಟೊಕೆಮಿಕಲ್ಗಳಿಂದ ಕೂಡಿದ್ದು, ಇದು ಸೂರ್ಯನ ಹಾನಿಯನ್ನು ಉಂಟುಮಾಡುವ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
ದಾಳಿಂಬೆ:
ದಾಳಿಂಬೆಯು ಹೆಚ್ಚಿನ ಪ್ರಮಾಣದ ಕಾಲಜನ್ ಅನ್ನು ಹೊಂದಿದ್ದು ಅದು ನಿಮ್ಮ ಚರ್ಮವನ್ನು ಯೌವ್ವನತೆಯಿಂದ ಕೂಡಿರುವಂತೆ ಮಾಡುತ್ತದೆ. ಇದು ಶುಷ್ಕ, ವಯಸ್ಸಾದ ಮತ್ತು ಎಣ್ಣೆಯುಕ್ತ ತ್ವಚೆಗೆ ಉತ್ತಮವಾಗಿದ್ದು, ಮೊಡವೆ-ನಿಯಂತ್ರಕ, ಜಲಸಂಚಯನ, ಪುನರ್ಯೌವನಗೊಳಿಸುವ ಮತ್ತು ನವೀಕರಿಸುವ ಗುಣಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ಸ್ಮೂಥಿಗಳಿಗೆ ಈ ಪ್ರಯೋಜನಕಾರಿ ಬೀಜಗಳನ್ನು ಸೇರಿಸುವುಉದ ಒಳ್ಳೆಯದು.
Best Fruits to Boost Skin and Hair Health. Fruits should ideally be an inevitable part of your daily diet, not just because it helps with better physical health but also because it promotes healthier skin and hair. What you put inside your body shows on the outside, which is why it is best to replenish the body with beneficial nutrients time and again so that your body is never devoid of them.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm