ಬ್ರೇಕಿಂಗ್ ನ್ಯೂಸ್
18-12-21 11:59 am Source: Boldsky Kannada ಡಾಕ್ಟರ್ಸ್ ನೋಟ್
ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಬೆಳಗ್ಗಿನ ಉಪಹಾರ ಮಹತ್ವದ ಪಾತ್ರ ವಹಿಸುವುದು. ಉಪಹಾರವನ್ನು ಬಿಡುವುದು ಒಳ್ಳೆಯದಲ್ಲ ಎಂದು ಹೆಚ್ಚಿನ ಆಹಾರ ತಜ್ಞರು ಸಲಹೆ ನೀಡುತ್ತಾರೆ. ಸ್ವಲ್ಪ ತಡವಾದರೂ ಸರಿ, ಉಪಹಾರ ಸೇವಿಸಲೇಬೇಕು.
ಆದರೆ, ಬೆಳಗ್ಗಿನ ಉಪಹಾರವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ಹೊಟ್ಟೆ ಉಬ್ಬುವಿಕೆ ಅಥವಾ ಸುಸ್ತನ್ನು ಅನುಭವಿಸಿದರೆ, ನೀವು ಬೆಳಗಿನ ಉಪಾಹಾರದಲ್ಲಿ ಸರಿಯಾದ ಆಹಾರವನ್ನು ಸೇವಿಸುತ್ತಿಲ್ಲ ಎಂದರ್ಥ. ಇದು ಮುಂದೆ ಬೊಜ್ಜಿನಂತಹ ಸಮಸ್ಯೆಗಳಿಗೆ ಕಾರಣವಾಗುವುದು. ಹಾಗಾದರೆ, ಬೆಳಗಿನ ಉಪಹಾರದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ
ಬೆಳಗಿನ ಉಪಾಹಾರಕ್ಕೆ ಸಂಬಂಧಿಸಿದಂತೆ ಬೊಜ್ಜಿಗೆ ಕಾರಣವಾಗುವ ತಪ್ಪುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ;
ಅತಿಯಾದ ಸಕ್ಕರೆ ಸೇವನೆ:
ಬೆಳಗಿನ ಉಪಾಹಾರಕ್ಕಾಗಿ ನೀವು ಜಾಮ್, ಕಾರ್ನ್ಫ್ಲೇಕ್ಸ್ ಅಥವಾ ಪ್ಯಾಕ್ ಕಿತ್ತಳೆ ಜ್ಯೂಸ್ ಕುಡಿಯುತ್ತಿದ್ದೀರಾ? ಒಂದು ವೇಳೆ ಇದನ್ನು ಸೇವಿಸುತ್ತಿದ್ದರೆ, ಅತಿಯಾಗಿ ಸಿಹಿಯನ್ನು ಸೇವಿಸುತ್ತಿದ್ದೀರಿ ಎಂದರ್ಥ. ಜ್ಯೂಸ್ ಕುಡಿಯುವ ಬದಲು ಹಣ್ಣನ್ನು ತಿನ್ನುವುದು ಉತ್ತಮ, ಏಕೆಂದರೆ ಇದು ಹೆಚ್ಚು ಫೈಬರ್, ಕಡಿಮೆ ಸಕ್ಕರೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಬೇಯಿಸಿದ ಪದಾರ್ಥಗಳು, ಕಾರ್ನ್ಫ್ಲೇಕ್ಗಳು ಅಥವಾ ಬಿಸ್ಕತ್ತುಗಳು ತಿನ್ನಲು ರುಚಿಕರವಾಗಿ ತೋರುತ್ತದೆ, ಆದರೆ ಅವು ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಪ್ರಯೋಜನವನ್ನು ನೀಡುವುದಿಲ್ಲ.
ಹೆಚ್ಚು ಕ್ಯಾಲೋರಿ ಸೇವನೆ:
ನೀವು ತಂಪು ಪಾನೀಯಗಳು, ಕ್ರೀಡಾ ಪಾನೀಯಗಳು, ಸಿಹಿ ಚಹಾ ಅಥವಾ ಕಾಫಿ, ನಿಂಬೆ ಪಾನಕ, ಫಾಸ್ಟ್ ಫುಡ್ ಅಥವಾ ಜಂಕ್ ಫುಡ್ ಗಳನ್ನು ಬೆಳಿಗ್ಗೆ ಬೇಗನೆ ಸೇವಿಸಿದರೆ, ನಿಮ್ಮ ದೇಹಕ್ಕೆ ಕೆಟ್ಟ ಕ್ಯಾಲೋರಿಗಳನ್ನು ನೀಡುತ್ತೀರುವಿರಿ. ಪ್ರತಿ ಆಹಾರದಲ್ಲೂ ಕ್ಯಾಲೋರಿಗಳಿವೆ, ಆದರೆ ಕ್ಯಾಲೊರಿಗಳನ್ನು ಮಾತ್ರ ಸೇವಿಸುವುದರಿಂದ ಹಾನಿಯಾಗಬಹುದು. ಉದಾಹರಣೆಗೆ, ಬೆಳಗಿನ ಉಪಾಹಾರಕ್ಕಾಗಿ ಕಾಫಿ ಮಾತ್ರ ಸೇವಿಸಿದರೆ, ಕ್ಯಾಲೊರಿಗಳನ್ನು ಮಾತ್ರ ಪಡೆಯುತ್ತೀರಿ ಆದರೆ, ಪೌಷ್ಟಿಕಾಂಶವಲ್ಲ. ಆದ್ದರಿಂದ ಬೆಳಗಿನ ಉಪಾಹಾರವನ್ನು ಆರೋಗ್ಯಕರವಾಗಿ ಇಡಿ, ಬೇಯಿಸಿದ ಮೊಟ್ಟೆಗಳು, ಆವಕಾಡೊ ಅಥವಾ ಚಿಕನ್ ಮತ್ತು ತರಕಾರಿ ಸ್ಯಾಂಡ್ವಿಚ್ಗಳನ್ನು ಸೇವಿಸಿ.
ಪ್ರೋಟೀನ್ ಅಥವಾ ಕೊಬ್ಬು ಸಿಗದೇ ಇರುವುದು:
ನಿಮ್ಮ ಆಹಾರದಲ್ಲಿ ಪ್ರೋಟೀನ್ ಅನ್ನು ಕಡಿಮೆ ಮಾಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಪ್ರೋಟೀನ್ ನಿಮಗೆ ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಜೊತೆಗೆ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಂತ ನಿಮ್ಮ ಪ್ಲೇಟ್ ಅನ್ನು ಮಾಂಸಾಹಾರಿ ಪಿಜ್ಜಾ ಅಥವಾ ಸಂಸ್ಕರಿಸಿದ ಮಾಂಸದಿಂದ ತುಂಬಿಸಿ ಎಂದು ಇದರ ಅರ್ಥವಲ್ಲ. ಸೋಯಾಬೀನ್, ಕುಂಬಳಕಾಯಿ ಬೀಜಗಳು, ಕಡಲೆಕಾಯಿಗಳು, ಕ್ಯಾರೆಟ್, ಚೀಸ್, ಬೀನ್ಸ್, ಬಾದಾಮಿ, ಮೊಸರು, ಬೆಣ್ಣೆ, ಕಾಟೇಜ್ ಚೀಸ್ ಅಥವಾ ಹಾಲು ಮುಂತಾದ ನಿಮ್ಮ ದಿನಕ್ಕೆ ಉತ್ತಮವಾದ ವಸ್ತುಗಳನ್ನು ಆರಿಸಿ. ಶೂನ್ಯ ಕೊಬ್ಬಿನಂಶ ಹೊಂದಿರುವ ಕೆನೆರಹಿತ ಹಾಲನ್ನು ಆರಿಸಿ.
ಎಣ್ಣೆಯುಕ್ತ ಅಥವಾ ಹುರಿದ ಆಹಾರ;
ನಿಮ್ಮ ಹೃದಯಕ್ಕೆ ಹಾನಿ ಮಾಡುವ ಜೊತೆಗೆ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವ ವಸ್ತುಗಳನ್ನು ತಿನ್ನುತ್ತೀರಾ? ಹಾಗಾದ್ರೆ, ಈಗಲೇ ಬಿಡಿ. ಬೆಳಗಿನ ಉಪಾಹಾರದಲ್ಲಿ ಕರಿದ ಪದಾರ್ಥಗಳನ್ನು ತೆಗೆದುಕೊಳ್ಳಬೇಡಿ, ಇದು ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಬೇಗಬೇಗ ಉಪಾಹಾರ ಸೇವಿಸುವುದು:
ಸಾಮಾನ್ಯವಾಗಿ ಜನರು ಕಚೇರಿಗೆ ಅಥವಾ ಕಾಲೇಜಿಗೆ ಹೋಗುವಾಗ ಬೆಳಿಗ್ಗೆ ಅವಸರವಾಗಿ ಬೇಗಬೇಗ ಉಪಾಹಾರ ಸೇವಿಸುವುದು ಕಂಡುಬರುತ್ತದೆ. ಹೀಗೆ ತಿನ್ನುವುದರಿಂದ ಬೊಜ್ಜು ಬರುತ್ತದೆ. ಆದ್ದರಿಂದ ಆಹಾರವನ್ನು ಯಾವಾಗಲೂ ನಿಧಾನವಾಗಿ ತಿನ್ನಬೇಕು, ಪ್ರತಿ ತುತ್ತನ್ನು ಆನಂದಿಸಬೇಕು ಮತ್ತು ಆರಾಮವಾಗಿ ತಿನ್ನಬೇಕು.
ಉಪಹಾರ ಸೇವಿಸದೇ ಇರುವುದು:
ಅನೇಕ ಜನರು ಮಧ್ಯಂತರ ಉಪವಾಸವನ್ನು ನಂಬುತ್ತಾರೆ. ಇದರಲ್ಲಿ ಅವರು ಬೆಳಿಗ್ಗೆ ಉಪಾಹಾರವನ್ನು ಸೇವಿಸುವುದಿಲ್ಲ, ಅವರು ಹಸಿವಾಗುವವರೆಗೆ ಉಪಾಹಾರ ಸೇವಿಸುವುದಿಲ್ಲ. ನೇರವಾಗಿ ಮಧ್ಯಾಹ್ನದ ಊಟವನ್ನೇ ಮಾಡುತ್ತಾರೆ. ಆದರೆ, ಬೆಳಗಿನ ಉಪಾಹಾರವು ಕಡ್ಡಾಯವಾಗಿದೆ. ಇದು ನಿಮಗೆ ದಿನಕ್ಕೆ ಬೇಕಾಗುವ ಶಕ್ತಿಯನ್ನು ನೀಡುತ್ತದೆ.
Common Breakfast Mistakes Leads to Weight Gain. Starting your morning right can set you up for a successful day. And if eating well and staying on a healthy track is part of what makes your day successful, try not to make the following breakfast mistakes that the nutritionists at Fresh fitness good warn against.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm