ಬ್ರೇಕಿಂಗ್ ನ್ಯೂಸ್
21-01-22 10:48 am Source: Boldsky Kannada ಡಾಕ್ಟರ್ಸ್ ನೋಟ್
ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಕಲುಷಿತ ವಾತಾವರಣ, ಅನಾರೋಗ್ಯಕರ ಜೀವನಶೈಲಿಯೇ ಮುಖ್ಯ ಕಾರಣ. ಇದಕ್ಕಾಗಿ ಹಲವರು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ರಾಸಾಯನಿಕಯುಕ್ತ ಶಾಂಪೂಗಳನ್ನು ಅವಲಂಬಿಸಿದ್ದಾರೆ. ಆದರೆ, ಇದರಿಂದ ಸಿಗುವ ಫಲಿತಾಂಶ ತೃಪ್ತಿದಾಯಕವಾಗಿರುವುದಿಲ್ಲ.
ಆದರೆ, ಕೂದಲು ಉದುರುವಿಕೆಯಂತಹ ಕೂದಲಿನ ಸಮಸ್ಯೆಗಳಿಗೆ ನೈಸರ್ಗಿಕ ಪದಾರ್ಥಗಳನ್ನು ಹೇಗೆ ಬಳಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಇಲ್ಲಿ, ನೀವು ಪ್ರಯತ್ನಿಸಬಹುದಾದ ಕೆಲವು ಸುಲಭವಾದ ಮನೆಯಲ್ಲಿ ಕೂದಲು ಉದುರುವಿಕೆ ತಡೆಯುವ ಶಾಂಪೂ ಪಾಕವಿಧಾನಗಳನ್ನು ತಿಳಿಸಿಕೊಡಲಿದ್ದೇವೆ.
ಈರುಳ್ಳಿ ಮತ್ತು ಗುಲಾಬಿ ಶಾಂಪೂ: ಈರುಳ್ಳಿ ನಿಮ್ಮ ಕೂದಲಿಗೆ ಉತ್ತಮ ಪದಾರ್ಥಗಳಲ್ಲಿ ಒಂದಾಗಿದ್ದು, ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ, ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅಂತಿಮವಾಗಿ ನಿಮ್ಮ ಕೂದಲನ್ನು ಆರೋಗ್ಯಕರವಾಗಿಸುತ್ತದೆ. ಆದರೆ, ಈರುಳ್ಳಿಯನ್ನು ನೇರವಾಗಿ ನಿಮ್ಮ ಕೂದಲಿಗೆ ಬಳಸುವುದರಿಂದ ಕೂದಲಿನ ಮೇಲೆ ಕಟುವಾದ ವಾಸನೆಯನ್ನು ಬಿಡಬಹುದು. ಅದಕ್ಕಾಗಿ ಈ ಮನೆಯಲ್ಲಿ ತಯಾರಿಸಿದ ಶಾಂಪೂ ಕೇವಲ 2 ಪದಾರ್ಥಗಳನ್ನು ಬಳಸಿ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
1 ಈರುಳ್ಳಿ
1-2 ಚಮಚ ರೋಸ್ ವಾಟರ್
ಬಳಸುವ ವಿಧಾನ:
ಈರುಳ್ಳಿ ಸಿಪ್ಪೆ ತೆಗೆದು, ಜಜ್ಜಿ ರಸ ತೆಗೆಯಿರಿ. ಇದಕ್ಕೆ ರೋಸ್ ವಾಟರ್ ಸೇರಿಸಿ, ಚೆನ್ನಾಗಿ ಬೆರೆಸಿ. ನಿಮ್ಮ ಕೂದಲನ್ನು ಒದ್ದೆ ಮಾಡಿ, ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಿಂದ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಟ್ಟು, ಸಾಮಾನ್ಯ ನೀರಿನಿಂದ ತೊಳೆಯಿರಿ.
ನೆಲ್ಲಿಕಾಯಿ ಮತ್ತು ನಿಂಬೆ ಶಾಂಪೂ:
ನೆಲ್ಲಿಕಾಯಿ ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ಇದು ರಕ್ತವನ್ನು ಶುದ್ಧೀಕರಿಸುತ್ತದೆ ಜೊತೆಗೆ ನಿಮ್ಮ ಕೂದಲಿನ ಬಣ್ಣವನ್ನು ಹೆಚ್ಚಿಸುತ್ತದೆ. ನೆಲ್ಲಿಕಾಯಿಯ ಆಂಟಿಫಂಗಲ್ ಮತ್ತು ಆಂಟಿವೈರಲ್ ಗುಣಲಕ್ಷಣಗಳು ತಲೆಹೊಟ್ಟು, ಶಿಲೀಂಧ್ರಗಳ ಸೋಂಕುಗಳು, ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ನಿಂಬೆ ಕೂಡ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಕೂದಲು ಉದುರುವಿಕೆ ಮತ್ತು ಇತರ ಕೂದಲಿನ ತೊಂದರೆಗಳನ್ನು ತಡೆಯುತ್ತದೆ.
ಬೇಕಾಗುವ ಸಾಮಾಗ್ರಿಗಳು:
1 ಚಮಚ ನೆಲ್ಲಿಕಾಯಿ ಜ್ಯೂಸ್
1 ಚಮಚ ನಿಂಬೆ ರಸ ಬಳಸುವ
ವಿಧಾನ: ಒಂದು ಬಟ್ಟಲಿನಲ್ಲಿ, ಎರಡೂ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ನೆತ್ತಿಯ ಮೇಲೆ ಹಚ್ಚಿ, 5 ನಿಮಿಷಗಳ ಕಾಲ ಹಿಡಿದುಕೊಳ್ಳಿ ಮತ್ತು ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಬಲವಾದ ನಿಂಬೆ ಸುಗಂಧವನ್ನು ತೊಡೆದುಹಾಕಲು, ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಬಹುದು.
ಶೀಗೆಕಾಯಿ ಮತ್ತು ಮೆಂತ್ಯೆ ಶಾಂಪೂ:
ಶೀಗೆಕಾಯಿ ನಿಮ್ಮ ಕೂದಲಿಗೆ ಉತ್ತಮ ಕ್ಲೆನ್ಸರ್ ಮಾತ್ರವಲ್ಲದೆ ಇದು ನಿಮ್ಮ ಕೂದಲಿನ ಬೇರುಗಳನ್ನು ಬಲಪಡಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಮೆಂತ್ಯ ಬೀಜಗಳು ಪ್ರೋಟೀನ್ ಮತ್ತು ಕಬ್ಬಿಣದ ಉತ್ತಮ ಮೂಲವಾಗಿದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬೇಕಾಗುವ ಸಾಮಾಗ್ರಿಗಳು:
10 ಗ್ರಾಂ ಶೀಗೆಕಾಯಿ
2-3 ಕಪ್ ನೀರು
1 ಟೀಸ್ಪೂನ್ ಮೆಂತ್ಯ ಬೀಜಗಳು
10 ಗ್ರಾಂ ಅಂಟುವಾಳ ಕಾಯಿ ಅಗತ್ಯವಿರುವಂತೆ ನೀರು ಬಳಸುವ
ವಿಧಾನ: ಬಾಣಲೆಯಲ್ಲಿ, ನೀರು ಮತ್ತು ಎಲ್ಲಾ ಪದಾರ್ಥಗಳನ್ನು ಸೇರಿಸಿ, ಕನಿಷ್ಠ 10-15 ನಿಮಿಷ ಬೇಯಿಸಿ, ತಣ್ಣಗಾಗಿಸಿ. ಇದನ್ನು ಸ್ಪ್ರೇ ಬಾಟಲಿಗೆ ಹಾಕಿ ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಸಿಂಪಡಿಸಿ. 15-20 ನಿಮಿಷಗಳ ಕಾಲ ಇರಿಸಿ. ಸಾಮಾನ್ಯ ನೀರಿನಿಂದ ತೊಳೆಯಿರಿ.
ಮೊಟ್ಟೆ ಮತ್ತು ಅಲೋವೆರಾ ಶಾಂಪೂ:
ಈ ಮನೆಯಲ್ಲಿ ತಯಾರಿಸಿದ ಮೊಟ್ಟೆಯ ಶಾಂಪೂ ನಿಮ್ಮ ತೆಳ್ಳನೆಯ ಕೂದಲಿಗೆ ಮ್ಯಾಜಿಕ್ನಂತೆ ಕೆಲಸ ಮಾಡುತ್ತದೆ. ಮೊಟ್ಟೆಯಲ್ಲಿ ಲೆಸಿಥಿನ್ ಇದ್ದು, ಇದು ಎಮಲ್ಸಿಫೈಯರ್ ಆಗಿ ಕಾರ್ಯನಿರ್ವಹಿಸಿ, ನಿಮ್ಮ ಕೂದಲನ್ನು ಕ್ಲೀನ್ ಮಾಡುತ್ತದೆ. ಇದು ವಿಟಮಿನ್ ಎ, ಡಿ, ಬಿ 12 ಮತ್ತು ಇತರ ಅಗತ್ಯ ಕೊಬ್ಬಿನಾಮ್ಲಗಳನ್ನು ಹೊಂದಿದೆ, ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಅಲೋವೆರಾ ನಿಮ್ಮ ಕೂದಲಿನ ನೆತ್ತಿಯನ್ನು ಸ್ವಚ್ಛಗೊಳಿಸಲು, ತಲೆಹೊಟ್ಟು ಕಡಿಮೆ ಮಾಡುತ್ತದೆ ಮತ್ತು ಕೂದಲು ಕಿರುಚೀಲಗಳನ್ನು ಅನಿರ್ಬಂಧಿಸುತ್ತದೆ, ಕೂದಲಿನ ಬೆಳವಣಿಗೆಯನ್ನು ಇನ್ನಷ್ಟು ಸುಧಾರಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು:
1 ಮೊಟ್ಟೆಯ ಹಳದಿ ಲೋಳೆ ಅಗತ್ಯವಿರುವಂತೆ ನೀರು
1 ಚಮಚ ಅಲೋವೆರಾ ಜೆಲ್
1 ಟೀಸ್ಪೂನ್ ಶಿಕಾಕಾಯಿ ಪುಡಿ
ಬಳಸುವ ವಿಧಾನ:
ಒಂದು ಬಟ್ಟಲಿನಲ್ಲಿ, ಮೊಟ್ಟೆಯ ಹಳದಿ ಲೋಳೆ ಮತ್ತು ಇತರ ಎಲ್ಲಾ ಪದಾರ್ಥಗಳನ್ನು ಸೇರಿಸಿ, ತೆಳುವಾದ ಸ್ಥಿರತೆಯನ್ನು ನೀಡಲು ಸ್ವಲ್ಪ ನೀರು ಸೇರಿಸಿ. ಇದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ, 15-20 ನಿಮಿಷಗಳ ಕಾಲ ಬಿಟ್ಟು, ಸಾಮಾನ್ಯ ನೀರಿನಿಂದ ತೊಳೆಯಿರಿ.
Best Homemade Shaampoos Recipes in Kannada.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm