ಬ್ರೇಕಿಂಗ್ ನ್ಯೂಸ್
01-02-22 11:02 am Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ದೇಹದಲ್ಲಿ ಅತ್ಯಂತ ಮುಖ್ಯವಾದ ಅಂಗ ಎಂದರೆ ಮೆದುಳು ಎಂದು ನಿಸ್ಸಂದೇಹವಾಗಿ ಹೇಳಬಹುದು. ದೇಹದ ಪ್ರತಿಯೊಂದು ಕಾರ್ಯಕ್ಕೂ ನೇರವಾಗಿ ಅಥವಾ ಪರೋಕ್ಷವಾಗಿ ನಿಯಂತ್ರಣ ಸಾಧಿಸುವುದೇ ಇದಕ್ಕೆ ಕಾರಣ. ಮಾನವನ ಮೆದುಳು ಜೀವನಪರ್ಯಂತ ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.
ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ನೀವು ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಿರಬಹುದು. ಮಾನವ ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ಇದಕ್ಕೆ ಸೂಕ್ತವಾದ ಇಂಧನವನ್ನೂ ನೀಡಬೇಕಾಗುತ್ತದೆ. ಆರೋಗ್ಯಕರ ಮೆದುಳಿಗೆ ಮೆದುಳಿನ ಆಹಾರಗಳೇ ಅತ್ಯುತ್ತಮ ಇಂಧನವಾಗಿದೆ. ಆರೋಗ್ಯಕರ ಮೆದುಳಿಗೆ ನಿಮ್ಮ ಆಹಾರಕ್ರಮದಲ್ಲಿ ನೀವು ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ಕೆಲವು ಮೆದುಳಿನ ಆಹಾರಗಳು ಇಲ್ಲಿವೆ...
ಮೊಟ್ಟೆಗಳು
ಮೊಟ್ಟೆಗಳ ಸೇವನೆಯಿಂದ ದೊರಕುವ ಆರೋಗ್ಯಕ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ನೀವು ಉಪಾಹಾರದ ರೂಪದಲ್ಲಿ ಬಹಳ ಸುಲಭವಾಗಿ ಸೇವಿಸಬಹುದು. ನೀವು ವಿವಿಧ ರೀತಿಯಲ್ಲಿ ಮೊಟ್ಟೆಗಳನ್ನು ಬೇಯಿಸಬಹುದು.
ಇದು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಟ್ಟೆಗಳನ್ನು ಸೇವಿಸುವುದರಿಂದ ನೀವು ಆರೋಗ್ಯಕರ ಮೆದುಳನ್ನು ಖಚಿತಪಡಿಸಿಕೊಳ್ಳಬಹುದು. ಮೊಟ್ಟೆ ಎಂದರೆ ಇದರ ಬಿಳಿಭಾಗ ಒಳ್ಳೆಯದು ಹಳದಿ ಭಾಗ ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸುತ್ತಾರೆ.
ವಾಸ್ತವದಲ್ಲಿ, ಹಳದಿ ಭಾಗದಲ್ಲಿ ಹೆಚ್ಚಾಗಿರುವ ಕೊಲೆಸ್ಟಾಲ್ ಕಾರಣದಿಂದ ಅತಿಯಾಗಿ ತಿನ್ನಬಾರದೇ ವಿನಃ ಮೊಟ್ಟೆಯ ಹಳದಿ ಭಾಗವನ್ನೇ ತಿನ್ನಬಾರದು ಎಂದಲ್ಲ. ಹಾಗಾಗಿ ಇಡಿಯ ಮೊಟ್ಟೆಯನ್ನು ದಿನಕ್ಕೆ ಒಂದು ಅಥವಾ ಎರಡಕ್ಕೆ ಮೀರದಂತೆ ಸೇವಿಸಿದರೆ ಮೆದುಳಿಗೆ ಅಗತ್ಯವಿರುವ ಆಹಾರ ಲಭಿಸುತ್ತದೆ.
ಒಣಫಲಗಳು
ಮೆದುಳು ಚುರುಕಾಗಲು ನಮ್ಮ ಅಜ್ಜಿಯರು ನಿತ್ಯವೂ ಒಂದೆರಡು ಬಾದಾಮಿಗಳನ್ನು ತಿನ್ನಲು ಕೊಡುತ್ತಿದ್ದುದು ನೆನಪಿಗೆ ಬರಬಹುದು. ಹೌದು, ಇದು ನಿಜ. ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ನೀವು ಬಾದಾಮಿಯ ಸಹಿತ ಇತರ ಒಣಫಲಗಳನ್ನೂ ಸೇವಿಸಬಹುದು.
ಒಣಫಲ ಅತ್ಯಂತ ಆರೋಗ್ಯವಾಗಿದ್ದು ಅದು ನಿಮ್ಮ ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿರುವ ಭಾವನೆ ಮೂಡಿಸುತ್ತವೆ. ನಿಮ್ಮ ಮೆದುಳನ್ನು ಆರೋಗ್ಯವಾಗಿಡಲು ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ ಹಾಗೂ ಇತರ ಒಣಫಲಗಳನ್ನು ಸೇವಿಸಬಹುದು.
ಕೊಬ್ಬುಯುಕ್ತ ಮೀನುಗಳು
ಪ್ರತಿವರ್ಷದ ಪರೀಕ್ಷೆಗಳಲ್ಲಿ ಕರಾವಳಿ ನಗರಗಳ ಮಕ್ಕಳೇ ಹೆಚ್ಚು ಅಂಕಗಳಿಸಲು ಅವರು ಹೆಚ್ಚು ಹೆಚ್ಚಾಗಿ ಮೀನು ತಿನ್ನುವುದೇ ಕಾರಣ ಎಂದು ಕಡಿಮೆ ಅಂಕ ಬಂದವರು ಕುಹಕವಾಡಬಹುದು. ಆದರೆ ಈ ಕುಹಕದ ಹಿಂದೆಯೂ ಒಂದು ಸತ್ಯವಿದೆ.
ಕೊಬ್ಬುಯುಕ್ತ ಅಥವಾ ಒಮೆಗಾ 3 ಕೊಬ್ಬಿನಾಮ್ಲ ಇರುವ ಮೀನುಗಳ ಸೇವನೆಯಿಂದ ಸ್ಮರಣಶಕ್ತಿ ಹೆಚ್ಚುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ. ಮೀನಿನ ರುಚಿ ಕಂಡವರಿಗೆ ಈ ಆಹಾರದ ಮಹತ್ವವನ್ನು ವಿವರಿಸ ಬೇಕಾಗಿಲ್ಲ. ಅಲ್ಲದೇ ಮೀನಿನ ಸೇವನೆಯಿಂದ ಇತರ ಆರೋಗ್ಯಕರ ಪ್ರಯೋಜನಗಳೂ ಇವೆ.
ಹಸಿರು ತರಕಾರಿಗಳು
ಸಾಮಾನ್ಯವಾಗಿ ತರಕಾರಿ ಸೊಪ್ಪುಗಳ ಖಾದ್ಯ ತಯಾರಿಸಿದಾಗ ಹಲವರು ಮೂಗು ಮುರಿಯುತ್ತಾರೆ. ಸೊಪ್ಪು ತಿನ್ನಲಿಕ್ಕೆ ನಾವೇನು ಕುರಿಗಳೇ ಎಂಬುದು ಇವರ ವಾದ. ವಾಸ್ತವದಲ್ಲಿ, ಹಸಿರು ತರಕಾರಿಗಳು ಮತ್ತು ಸೊಪ್ಪುಗಳು ಅತ್ಯಂತ ಉತ್ತಮವಾದ ಆಹಾರವಾಗಿದ್ದು ಇವನ್ನು ಹಲವು ವಿಧಗಳಲ್ಲಿ ಸೇವಿಸಬಹುದು.
ನಿತ್ಯದ ಅಹಾರದಲ್ಲಿ ಹಸಿರು ತರಕಾರಿ ಮತ್ತು ಸೊಪ್ಪುಗಳು ಇರಲೇಬೇಕು. ಅದರಲ್ಲೂ ಹಸಿಯಾಗಿ ತಿನ್ನಬಹುದಾದ ಸೊಪ್ಪುಗಳು ಮತ್ತು ತರಕಾರಿಗಳನ್ನು ನಿತ್ಯದ ಸಾಲಾಡ್ ನಲ್ಲಿ ಸೇರಿಸಿಕೊಳ್ಳಲೇಬೇಕು. ಇವು ಒಟ್ಟಾರೆ ಆರೋಗ್ಯಕ್ಕೆ ಮಾತ್ರವಲ್ಲ, ವಿಶೇಷವಾಗಿ ಮೆದುಳಿನ ಆರೋಗ್ಯಕ್ಕೂ ಅಗತ್ಯವಾಗಿವೆ.
ಹಸಿರು ಟೀ
ತೂಕ ಇಳಿಕೆಗೆ ಹಸಿರು ಟೀ ಒಳ್ಳೆಯದು ಹೌದು, ಆದರ್ ಇದರಲ್ಲಿರುವ ಪೋಷಕಾಂಶಗಳು ಮೆದುಳು ಸಹಿತ ದೇಹದ ಇತ ಅಂಗಗಳಿಗೂ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಆದರೆ ಇದು ಅತಿ ಪ್ರಬಲವಾದ ಪೇಯವಾದ ಕಾರಣ ಹಸಿರು ಟೀಯನ್ನು ದಿನಕ್ಕೆ ಎರಡು ಕಪ್ ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಈ ಎರಡು ಕಪ್ ಗಳನ್ನು ದಿನದ ಯಾವುದೇ ಹೊತ್ತಿನಲ್ಲಿ ಸೇವಿಸಬಹುದು.
Foods that boost brain health, eat them without missing them.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm