ಈ ಹಣ್ಣು-ತರಕಾರಿಗಳ ಜ್ಯೂಸ್‌‌ನ ಎದುರು, ಸಕ್ಕರೆ ಕಾಯಿಲೆ ಆಟ ನಡೆಯಲ್ಲ!

02-02-22 10:49 am       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಸುಮಾರು ವರ್ಷಗಳ ಕಾಲ ಪರಂಗಿಯವರ ಕಾಯಿಲೆ ಎಂದೇ ಕನ್ನಡಿಗರಿಗೆ ಪರಿಚಿತವಾಗಿದ್ದ ಈ ಮಧುಮೇಹ ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಈ ಸೈಲೆಂಟ್ ಕಿಲ್ಲರ್ ಮಧುಮೇಹ ಒಮ್ಮೆ ಬಂದರೆ, ಖಂಡಿತ ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಲ್ಲ, ಆದರೆ ಇದನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬಹುದು!

ಸುಮಾರು ವರ್ಷಗಳ ಕಾಲ ಪರಂಗಿಯವರ ಕಾಯಿಲೆ ಎಂದೇ ಕನ್ನಡಿಗರಿಗೆ ಪರಿಚಿತವಾಗಿದ್ದ ಈ ಮಧುಮೇಹ ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಆವರಿಸಿಬಿಟ್ಟಿದೆ. ಈ ಸೈಲೆಂಟ್ ಕಿಲ್ಲರ್ ಮಧುಮೇಹ ಒಮ್ಮೆ ಬಂದರೆ, ಖಂಡಿತ ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಲ್ಲ, ಆದರೆ ಇದನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬಹುದು!

ಇನ್ನು ಮಧುಮೇಹ ಇರುವುದು ಪತ್ತೆಯಾದ ಬಳಿಕ, ಈ ಕಾಯಿಲೆಯ ಬಗ್ಗೆ ಎಷ್ಟು ಜಾಗೃತೆ ವಹಿಸುತ್ತೇವೋ, ಅಷ್ಟು ಒಳ್ಳೆಯದು. ನಾವು ದಿನನಿತ್ಯ ಸೇವಿಸುವ ಆಹಾರದಿಂದ ಹಿಡಿದು ಪ್ರತಿಯೊಂದರ ಬಗ್ಗೆಯೂ ಹೆಜ್ಜೆ ಹೆಜ್ಜೆಗೆ ಎಚ್ಚರಿಕೆ ಅಗತ್ಯ. ಅದರಲ್ಲೂ ಇಂತಹ ಸಮಯದಲ್ಲಿ ಸಕ್ಕರೆ ರಹಿತ ಹಣ್ಣು ತರಕಾರಿಗಳನ್ನು ಜಾಸ್ತಿ ಸೇವಿಸಬೇಕಾಗುತ್ತದೆ.

ಇನ್ನು ಕೆಲವು ಹಣ್ಣು ಮತ್ತು ತರಕಾರಿಗಳು ರುಚಿಯಲ್ಲಿ ಕಹಿಯಾಗಿದ್ದರೂ ಕೂಡ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪ್ರಯೋಜನ ಒದಗಿಸುತ್ತವೆ ಹಾಗೂ ವಿಶೇಷವಾಗಿ ಮಧುಮೇಹಿಗಳ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪ್ರಯೋಜನ ಒದಗಿಸುತ್ತದೆ. ಅಂತಹ ಹಣ್ಣು-ತರಕಾರಿಗಳ ಬಗ್ಗೆ ಈ ಲೇಖನದಲ್ಲಿ ನೀಡಿದ್ದೇವೆ, ಮುಂದೆ ಓದಿ.

ಪಾಲಕ್ ಜ್ಯೂಸ್

  • ಚಳಿಗಾಲದಲ್ಲಿ ತುಂಬಾನೇ ಸಿಗುವ ಈ ಪಾಲಕ್ ಸೊಪ್ಪಿನಲ್ಲಿ ಆರೋಗ್ಯಕ್ಕೆ ಬೇಕಾಗುವಂತಹ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು ಸಿಗುತ್ತದೆ. ಅಲ್ಲದೇ ಈ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈಜ್ಞಾನಿಕವಾಗಿಯೂ ಸಾಬೀತು ಆಗಿದೆ. ಹಾಗಾಗಿ ಈ ಪಾಲಕ್ ಸೊಪ್ಪಿನ ಜ್ಯೂಸ್ ಅಥವಾ ಸೂಪ್ ರೀತಿ ಮಾಡಿಕೊಂಡು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.
  • ಇನ್ನು ಈ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಫೋಲೇಟ್, ಕರಗುವ ನಾರು, ವಿಟಮಿನ್ ಎ, ಬಿ, ಸಿ, ಇ ಮತ್ತು ಕೆ ಅಧಿಕ ಪ್ರಮಾಣದಲ್ಲಿದ್ದು, ಅದರಲ್ಲೂ ವಿಶೇಷವಾಗಿ ಇದರಲ್ಲಿರುವ ಕಬ್ಬಿಣಾಂಶ ಮತ್ತು ಕರಗುವ ನಾರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ಆಹಾರದಲ್ಲಿರುವ ಸಕ್ಕರೆ ಅತಿ ಶೀಘ್ರವಾಗಿ ರಕ್ತಕ್ಕೆ ಸೇರದಂತೆ ತಡೆಯುತ್ತವೆ. ಈ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ಥಟ್ಟನೇ ಏರುವುದನ್ನು ತಡೆಯುತ್ತದೆ.

ಹಾಗಲಕಾಯಿ ಜ್ಯೂಸ್ 

ಎಲ್ಲಾ ತರಕಾರಿಗಳಿಗೆ ಹೋಲಿಸಿದರೆ, ತುಂಬಾನೇ ಕಹಿಯಾಗಿರುವ ತರಕಾರಿ, ಎಂದರೆ ಅದು ಹಾಗಲಕಾಯಿ. ಆದರೆ ರುಚಿಯಲ್ಲಿ ಅತೀ ಕಹಿ ಎಂಬ ಒಂದೇ ಒಂದು ವಿಷಯವನ್ನು ಬಿಟ್ಟರೆ, ಉಳಿದೆಲ್ಲಾದರಲ್ಲೂ ಮಧುಮೇಹಿಗಳಿಗೆ ಅತ್ಯುತ್ತಮ ಆಹಾರವಾಗಿದೆ.

ಅಧ್ಯಯನಗಳ ಪ್ರಕಾರ,ಇವುಗಳಲ್ಲಿ ಪ್ರಮುಖವಾದ ಪೋಷಕಾಂಶವೆಂದರೆ ಚಾರಂಟಿನ್. ಇದು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಅದರಲ್ಲೂ ಸಕ್ಕರೆ ಕಾಯಿಲೆ ಇದ್ದವರು ನಿಯಮಿತವಾಗಿ ಈ ಹಾಗಲಕಾಯಿ, ರಸ ಕುಡಿಯುತ್ತಾ, ಬಂದರೆ, ರಕ್ತದಲ್ಲಿನ ಗ್ಲುಕೋಸ್ ಮಟ್ಟಗಳನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತವೆ.

ದಾಳಿಂಬೆಯ ಜ್ಯೂಸ್

  • ದಾಳಿಂಬೆ ಹಣ್ಣಿನ ಬೀಜಗಳು, ಹುಳಿ ಸಿಹಿ ಮಿಶ್ರಿತವಾಗಿರುವ ಹಣ್ಣಾಗಿರುವುದರಿಂದ, ಇದರಲ್ಲಿರುವ ಸಕ್ಕರೆ ಅಷ್ಟು ಬೇಗನೇ ರಕ್ತದಲ್ಲಿ ಸೇರಲಾರದು. ಹಾಗಾಗಿ ಮಧುಮೇಹಿಗಳಿಗೆ ಈ ಹಣ್ಣಿನ ಜ್ಯೂಸ್ ಅದರಲ್ಲೂ ಸಿಹಿಯನ್ನು ಬಹಳವೇ ಇಷ್ಟಪಡುವ, ಸಕ್ಕರೆ ಕಾಯಿಲೆಯ ರೋಗಿಗಳಿಗೆ ದಾಳಿಂಬೆಯ ಜ್ಯೂಸ್ ಅತ್ಯುತ್ತಮವಾಗಿದೆ.
  • ಇನ್ನು ಈ ಹಣ್ಣಿನ ವಿಶೇಷತೆ ಏನೆಂದರೆ, ಇದರಲ್ಲಿರುವ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಜೊತೆಗೆ ಇನ್ನೂ ಹಲವಾರು ಪ್ರಯೋಜನ ಗಳನ್ನು ಒದಗಿಸುತ್ತದೆ.
  • ಈ ಹಣ್ಣಿನ ಜ್ಯೂಸ್ ಮಾಡಲು ಹೀಗೆ ಮಾಡಿ, ಮೊದಲಿಗೆ ಹಣ್ಣಾದ ದಾಳಿಂಬೆಯ ಕಾಳುಗಳನ್ನು ಒಂದು ಬೌಲ್‌ನಲ್ಲಿ ಸಂಗ್ರಹಿಸಿ, ನಂತರ ಮಿಕ್ಸಿಯ ಬ್ಲೆಂಡರಿನಲ್ಲಿ,ಈ ಹಣ್ಣಿನ ಕಾಳುಗಳನ್ನು, ಕೊಂಚ ನೀರಿನೊಂದಿಗೆ ಗೊಟಾಯಿಸಿ. ಈ ರಸವನ್ನು, ಒಂದು ಪಾತ್ರೆಗೆ ಸೋಸಿ, ಆಮೇಲೆ ಕುಡಿಯಿರಿ. ನೆನಪಿಡಿ ತಪ್ಪಿಯೂ ಈ ಜ್ಯೂಸ್ ಮಾಡುವಾಗ ಸಕ್ಕರೆ ಹಾಕಬೇಡಿ.

ತಾಜಾ ಟೊಮೆಟೊ ಹಣ್ಣಿನ ಜ್ಯೂಸ್ 

  • ಮಧುಮೇಹಿಗಳಿಗೆ ಟೊಮೆಟೊ ಹಣ್ಣಿನ ಜ್ಯೂಸ್ ಕೂಡ ಬಹಳ ಒಳ್ಳೆಯದು. ಅದರಲ್ಲೂ ವಿಶೇಷವಾಗಿ ಮಧುಮೇಹ ಕಾಯಿಲೆ ಇರುವಾಗ ಗಾಯವಾದರೆ, ಆ ಸಮಯದಲ್ಲಿ ಈ ಟೊಮೆಟೊ ಹಣ್ಣಿನ ಜ್ಯೂಸ್ ಕುಡಿದರೆ ಬಹಳ ಒಳ್ಳೆಯದು.
  • ಅಧ್ಯಾಯಾನದ ಪ್ರಕಾರ, ಮಧುಮೇಹ ಒಂದು ಹಂತಕ್ಕೆ ದಾಟಿದ ಬಳಿಕ ರಕ್ತ ಹೆಪ್ಪುಗಟ್ಟುವ ಕ್ಷಮತೆಯನ್ನು ಕಡಿಮೆಯಾಗಿರುತ್ತದೆ. ಇದು ತುಂಬಾನೇ ಅಪಾಯಕಾರಿ ಪ್ರಕ್ರಿಯೆ, ಯಾಕೆಂದರೆ ಇದೇ ಕಾರಣದಿಂದ ಕೂಡ ಹೃದಯ ಸಂಬಂಧಿ ರೋಗಗಳ ಸಾಧ್ಯತೆ ಕೂಡ ಹೆಚ್ಚಾಗುತ್ತದೆ! ಹಾಗಾಗಿ ಸಕ್ಕರೆ ಕಾಯಿಲೆ ಇರುವವರು, ಒಂದು ಚಿಕ್ಕ ಲೋಟದಷ್ಟು ತಾಜಾ ಟೊಮಾಟೋ ಹಣ್ಣಿನ ರಸವನ್ನು ಸೇವಿಸುತ್ತಾ ಬಂದರೆ ಈ ಸಾಧ್ಯತೆಯನ್ನು ತಗ್ಗಿಸಬಹುದು.
  • ಇದಕ್ಕಾಗಿ ಚೆನ್ನಾಗಿ ಹಣ್ಣಾದ ಟೊಮೆಟೊ ಹಣ್ಣಿನ ಬೀಜಗಳನ್ನು ಹಾಗೂ ಸಿಪ್ಪೆಯನ್ನು ನಿವಾರಿಸಿ ಕೇವಲ ತಿರುಳನ್ನು ಮಾತ್ರವೇ ಸಂಗ್ರಹಿಸಿ ಸಕ್ಕರೆ ಅಥವಾ ಬೇರೆ ಯಾವುದೇ ಸಿಹಿಕಾರಕಗಳನ್ನು ಬೆರೆಸದೇ ಸೇವಿಸಬೇಕು.

 

In the face of this fruit-vegetable juice, there is no sugar disease game.