ಈ ತರಕಾರಿಗಳಲ್ಲಿ ತೂಕ ಇಳಿಸುವ-ರೋಗ ನಿರೋಧ ಶಕ್ತಿ ಹೆಚ್ಚಿಸುವ ಪವರ್ ಇದೆ!

14-02-22 10:04 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ನೈಸರ್ಗಿಕವಾಗಿ ಸಿಗುವ ತರಕಾರಿಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಚಳಿಗಾಲ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತಾ ಬಂದಿದೆ, ಆದರೆ ಪೂರ್ತಿ ಕಡಿಮೆ ಆಗಿಲ್ಲ! ಈ ಸಮಯದಲ್ಲಿ ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ, ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳು ಎನ್ನುವುದು ಕಾಡುತ್ತಲೇ ಇರುವುದು ಮಾತ್ರವಲ್ಲದೆ, ಹಲವಾರು ರೀತಿಯ ಸೋಂಕುಗಳು ಕಾಡುವುದು.

ಇಂತಹ ಸಂದರ್ಭದಲ್ಲಿ, ಈ ಎಲ್ಲಾ ಸೊಂಕುಗಳಿಂದ ಹೋರಾಡುವ ಸಲುವಾಗಿ, ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವುದು ಅಗತ್ಯವಾಗಿರುವುದು. ಇದಕ್ಕಾಗಿ ಆಹಾರ ಕ್ರಮದಲ್ಲಿ ಸರಿಯಾದ ಆಹಾರ ಸೇವನೆ ಮಾಡಿದರೆ ಅದು ತುಂಬಾ ಲಾಭಕಾರಿ ಆಗಿರುವುದು.

ಇನ್ನು ಚಳಿಗಾಲದ ಸಮಯದಲ್ಲಿ, ಸಂಜೆ ಆಗುತ್ತಾ ಹೋದ ಹಾಗೆ, ತಣ್ಣಗೆ ಬೀಸುವ ತಂಪಾದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು, ಬೆಚ್ಚಗಿನ ಆಹಾರದ ಕಡೆ ಮನ ಹಾತೊರೆಯುವುದು ಸಾಮಾನ್ಯ, ಅಲ್ಲದೇ ಈ ಸಮಯದಲ್ಲಿ ಹಸಿವು ಕೂಡ ಹೆಚ್ಚು. ಹೀಗಾಗಿ ಅನಾರೋಗ್ಯಕರ ಆಹಾರ ಸೇವನೆಯು ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ತೂಕವನ್ನು ಸಮತೋಲನದಲ್ಲಿಡಲು ಬಯಸುವವರಿಗೆ, ತುಂಬಾನೇ ಕಷ್ಟವಾಗಿ ಪರಿಣಮಿಸಬಹುದು.

ಹಾಗಾಗಿ ಈ ಸಮಯದಲ್ಲಿ ನಮ್ಮ ದೈನಂದಿನ ಆಹಾರಕ್ರಮದಲ್ಲಿ ಕೆಲವೊಂದು ಆರೋಗ್ಯಕಾರಿ ತರಕಾರಿಗಳನ್ನು ಸೇರ್ಪಡೆ ಮಾಡಿದರೆ, ಆಗ ಖಂಡಿತವಾಗಿಯೂ ಅದು ನೆರವಾಗುವುದು. ಇಂತಹ ಕೆಲವೊಂದು ತರಕಾರಿಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದು ದೇಹದ ತೂಕ ಇಳಿಸಲು ಸಹಕಾರಿ ಮಾತ್ರವಲ್ಲದೆ, ರೋಗನಿರೋಧಕ ಶಕ್ತಿಯನ್ನು ಕೂಡ ವೃದ್ಧಿಸಲು ನೆರವಾಗುವುದು.

ಬೀಟ್‌ರೂಟ್

  • ನೈಸರ್ಗಿಕವಾಗಿ ಸಿಗುವ ಹಣ್ಣುಗಳು ಹಾಗೂ ತರಕಾರಿಗಳು ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು, ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ ನಾವು ಇವುಗಳನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ಹೋಗುತ್ತೇವೆ.
  • ಇನ್ನು ತರಕಾರಿಗಳ ವಿಷಯಕ್ಕೆ ಬರುವುದಾದರೆ, ಎಲ್ಲಾ ಬಗೆಯ ತರಕಾರಿಗಳು ಅಷ್ಟೇ, ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಕೆಲವು ತರಕಾರಿಗಳಲ್ಲಿ ವಿಟಮಿನ್ ಗಳು ಹೆಚ್ಚಾಗಿದ್ದರೆ, ಇನ್ನು ಕೆಲವು ತರಕಾರಿಗಳಲ್ಲಿ ನಾರನಾಂಶಗಳು, ಖನಿಜಾಂಶಗಳು ಹೆಚ್ಚಾಗಿ ಕಂಡುಬರುವುದು. ಹೀಗೆ ನಮ್ಮ ದೇಹಕ್ಕೆ ಬೇಕಾಗಿರುವಂತಹ ಸಂಪೂರ್ಣ ಪೋಷಕಾಂಶಗಳು ತರಕಾರಿಯಿಂದ ಸಿಗುವುದು. ಇಂತಹ ತರಕಾರಿಯಲ್ಲಿ ಒಂದು ಬೀಟ್ ರೂಟ್ ಕೂಡ ಒಂದು!
  • ಬೀಟ್‌ರೂಟ್ ಕತ್ತರಿಸಿದಾಗ ಕೈಯೆಲ್ಲಾ ರಕ್ತದ ಬಣ್ಣ ಆಗಿ ಬಿಡುತ್ತದೆ ಎನ್ನುವ ಒಂದೇ ಕಾರಣಕ್ಕೆ
  • ಈ ತರಕಾರಿಯಿಂದ ಎಲ್ಲರೂ ದೂರ ಉಳಿಯುತ್ತಾರೆ. ಆದ್ರೆ ನೆನಪಿರಲಿ ಸಾಕಷ್ಟು ಪೋಷಕಾಂಶ ಗಳನ್ನು ಹೊಂದಿರುವ ಈ ತರಕಾರಿ, ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇದನ್ನು ಪಲ್ಯ, ಸಾಂಬರ್ ಅಥವಾ ಸಲಾಡ್ ಮಾಡಿಕೊಂಡು ಸೇವಿಸಿದರೂ ಸಾಕು, ಆರೋಗ್ಯಕರವಾಗಿ ದೇಹದ ತೂಕ ಇಳಿಸಿಕೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

See the source image

ಮೂಲಂಗಿ

 

  • ನಿಜ ಹೇಳಬೇಕೆಂದ್ರೆ, ಈಗಿನ ಕಾಲದಲ್ಲಿ ನಮಗೆ ರೋಗನಿರೋಧಕ ಶಕ್ತಿ ಎಷ್ಟಿದ್ದರೂ ಕೂಡ ಕಡಿಮೆ ಎನಿಸುತ್ತದೆ. ಕಣ್ಣಿಗೆ ಕಾಣದ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು, ನಾವು ಎಷ್ಟೇ ಆರೋಗ್ಯ ವಾಗಿದ್ದರೂ ಕೂಡ, ಒಂದ ಸಲಕ್ಕೆ ಇವುಗಳ ಮುಂದೆ ಮಂಡಿಯೂರಬೇಕಾಗುತ್ತದೆ! ಹಾಗಾಗಿ ಮನೆಯಿಂದ ಹೊರಗೆ ಕಾಲಿಡಲು ಕೂಡ ಭಯ ಶುರುವಾಗಿದೆ.ಯಾವ ಸಮಯದಲ್ಲಿ ಯಾವ ಕಾಯಿಲೆ ಬರಬಹುದು ಎಂದು ಹೇಳಲು ಸಾಧ್ಯವಿಲ್ಲ!
  • ಆದ್ರೆ ಎಲ್ಲಾ ಸಮಸ್ಯೆಗೂ ಪರಿಹಾರ ಅನ್ನುವುದು ಇದ್ದೇ ಇರುತ್ತದೆ, ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದ್ರೆ ಮೂಲಂಗಿ! ಹೌದು ಮೂಲಂಗಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಅಂಶ ಒಳಗೊಂಡಿರುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಜೊತೆಗೆ ಇದರಲ್ಲಿ ಸಣ್ಣ-ಪುಟ್ಟ ಕಾಯಿಲೆಗಳಾದ ಜ್ವರ, ಶೀತ, ಕೆಮ್ಮು ಇತ್ಯಾದಿಗಳನ್ನು ಕಡಿಮೆ ಮಾಡಿ ದೇಹದ ಉರಿಯೂತವನ್ನು ನಿಯಂತ್ರಣ ಮಾಡುವ ಗುಣ ಲಕ್ಷಣ ಕಂಡುಬರುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಮೂಲಂಗಿ ಸೇವನೆ ನಮಗೆ ಬಹಳ ಪ್ರಯೋಜನಕಾರಿ. 

See the source image

ಪಾಲಕ್ ಸೊಪ್ಪು 

  • ಪ್ರಕೃತಿದತ್ತವಾಗಿ ಸಿಗುವಂತಹ ನೈಸರ್ಗಿಕ ತರಕಾರಿಗಳು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎನ್ನುವುದು ಈಗಾಗಲೇ ಸಾಬೀತಾಗಿದೆ. ಅದರಲ್ಲೂ ಹಸಿರೆಲೆ ತರಕಾರಿಗಳನ್ನು ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡರೆ, ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳನ್ನು ನೀಡುವುದು. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಪಾಲಕ್ ಸೊಪ್ಪು
  • ನಿಮಗೆ ಗೊತ್ತಿರಲಿ, ಪಾಲಕ್ ಸೊಪ್ಪು ತನ್ನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ, ಕಬ್ಬಿಣಾಂಶದ ಪ್ರಮಾಣವನ್ನು ಹೊಂದಿದ್ದು, ಇದು ಚಯಾಪಚಯ ಉತ್ತಮಪಡಿಸುವ ಜತೆಗೆ ವೇಗವಾಗಿ ಕ್ಯಾಲರಿ ದಹಿಸಲು ನೆರವಾಗುವುದು. ಹೀಗಾಗಿ ತೂಕ ಇಳಿಸುವವರು, ಸರಿಯಾದ ವ್ಯಾಯಾಮದ ಜೊತೆಗೆ, ತಮ್ಮ ಆಹಾರಕ್ರಮದಲ್ಲಿ ಪಾಲಕ್ ಸೊಪ್ಪನ್ನು ಸೇರಿಸಲು ಮರೆಯದಿರಿ!
  • ಇನ್ನು ಚಳಿಗಾಲದ ಸಂದರ್ಭದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪಾಲಕ್ ಸೊಪ್ಪನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

See the source image

ಕ್ಯಾರೆಟ್ 

  • ಮಾರ್ಕೆಟ್‌ನಲ್ಲಿ ತೆಳ್ಳಗೆ ಬೆಳ್ಳಗೆ ಕಾಣುವ ತರಕಾರಿಗಳು ಒಂದು ಕಡೆಯಾದರೆ, ದಷ್ಟಪುಷ್ಟವಾಗಿ ಕಾಣುವ ತರಕಾರಿಗಳು ಇನ್ನೊಂದು ಕಡೆ! ಈ ಮಧ್ಯೆ ಇವೆಲ್ಲಾ ತರಕಾರಿಗಳ ಮಧ್ಯೆ ಕಿತ್ತಳೆ ಬಣ್ಣದಲ್ಲಿ ಎಲ್ಲರನ್ನೂ ಆಕರ್ಷಿಸುವ ಮತ್ತು ಆರೋಗ್ಯಕ್ಕೆ ಊಹೆಗೂ ಮೀರಿ ಒಳ್ಳೆಯ ಪ್ರಯೋಜನಗಳನ್ನು ಒದಗಿಸುವ ಎಲ್ಲರ ಮೆಚ್ಚಿನ ತರಕಾರಿ ಎಂದರೆ ಅದು ಕ್ಯಾರೆಟ್!
  • ಇನ್ನು ಈ ತರಕಾರಿಯ ವಿಶೇಷತೆ ಏನೆಂದರೆ, ನಿಯಮಿತವಾಗಿ ಈ ತರಕಾರಿಯನ್ನು ಸೇವನೆ ಮಾಡುವುದರಿಂದ ಆಂತರಿಕವಾಗಿ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ದೀರ್ಘಕಾಲ ತನಕ ಹೊಟ್ಟೆಯು ತುಂಬಿರುವಂತೆ ಮಾಡುವುದು. ಇದನ್ನು ಸಲಾಡ್, ಜ್ಯೂಸ್ ಅಥವಾ ಸೂಪ್‌ ನಲ್ಲಿ ಬಳಸಬಹುದು

ಬೊಜ್ಜು ಇಳಿಸುವವರು ಅಥವಾ ದೇಹದ ತೂಕ ಇಳಿಸುವವರು, ತಮ್ಮ ಆಹಾರ ಕ್ರಮದಲ್ಲಿ ಹಸಿರು ಬೀನ್ಸ್‌ನ್ನು ಸೇರಿಸುವುದು ಒಳ್ಳೆಯದು. ಈ ತರಕಾರಿ ತನ್ನಲ್ಲಿ ಅಧಿಕ ಮಟ್ಟದ ನಾರಿನಾಂಶವನ್ನು, ಒಳಗೊಂಡಿರುವುದರಿಂದ, ಇದು ದೀರ್ಘಕಾಲ ಹೊಟ್ಟೆ ತುಂಬಿದಂತೆ ಮಾಡಿ, ದೇಹದ ತೂಕ ಇಳಿಸುವಲ್ಲಿ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.

These Veggies You Must Add In Your Diet To Loss Weight And Strengthen Your Immune System Naturally.