ಸೋರಿಯಾಸಿಸ್‌, ಮೊಡವೆ, ಕೂದಲಿನ ಸಮಸ್ಯೆಗೆ ಬೆಳ್ಳುಳ್ಳಿ ಬೆಸ್ಟ್ ಮದ್ದು!

17-02-22 08:57 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಅರೋಗ್ಯದ ವಿಷ್ಯದಲ್ಲಿ ಬೆಳ್ಳುಳ್ಳಿಯ ಪ್ರಯೋಜನಗಳು ನಮಗೆಲ್ಲಾ ಗೊತ್ತೇ ಇದೆ ಅಲ್ವಾ? ಅದೇ ರೀತಿಯಾಗಿ, ಸೌಂದರ್ಯ ವೃದ್ಧಿಗೂ ಕೂಡ ಬೆಳ್ಳುಳ್ಳಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಇರುವ ಬೆಳ್ಳುಳ್ಳಿ, ಹಲವಾರು ಬಗೆಯ ಔಷಧೀಯ ಗುಣಗಳನ್ನು ತನ್ನಲ್ಲಿ ಹೊಂದಿದೆ. ಮನೆಯಲ್ಲಿ ಯಾವುದೇ ಬಗೆಯ ಸಾಂಬರ್ ಅಥವಾ ರಸಂ ಮಾಡುವಾಗಲೂ ಬೆಳ್ಳುಳ್ಳಿಯ ಅಗತ್ಯ ಇದ್ದೇ ಇರುತ್ತದೆ. ದಿನನಿತ್ಯ ಸೇವಿಸುವ ಆಹಾರಕ್ಕೆ ವಿಶೇಷ ಪರಿಮಳ ನೀಡಲು, ವಿಶಿಷ್ಟ ರುಚಿ ನೀಡಲು ಇದನ್ನು ಬಳಸಲಾಗುತ್ತದೆ. ಆದರೆ ಇದು ಘಾಟು, ರುಚಿ ಕೆಲವರಿಗೆ ಇಷ್ಟವಾದರೆ, ಮತ್ತೆ ಕೆಲವರು ಇದರಿಂದ ದೂರ ಉಳಿಯುತ್ತಾರೆ.

ಹೆಚ್ಚು ಕಡಿಮೆ ಬೆಳ್ಳುಳ್ಳಿಯು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬ ವಿಷಯ ಎಲ್ಲರಿಗೂ ಗೊತ್ತು. ಆದರೆ ಬೆಳ್ಳುಳ್ಳಿಯಿಂದ ಕೂದಲು, ತ್ವಚೆಯ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ ಅಲ್ಲವೇ? ಬನ್ನಿ ಇಂದಿನ ಲೇಖನದಲ್ಲಿ ಇದರ ಬಗ್ಗೆ ವಿವರವಾದ ಮಾಹಿತಿ ಕೊಡಲಾಗಿದೆ, ಮುಂದೆ ನೋಡಿ…

ಮೊಡವೆ ಸಮಸ್ಯೆಗೆ

Most Powerful Home Remedies For Pimples- How To Remove Pimples| Nykaa's  Beauty Book

ನಮಗೆಲ್ಲರಿಗೂ ಗೊತ್ತೇ ಇರುವ ಹಾಗೆ, ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ, ಮುಖದ ಮೇಲೆ ಅಲ್ಲಲ್ಲಿ ಮೊಡವೆಗಳು ಕಾಣಲು ಶುರುವಾಗಿ ಬಿಡುತ್ತದೆ. ಇದಕ್ಕೆ ಮುಖ್ಯ ಕಾರಣ, ದೇಹದಲ್ಲಿ ಉಂಟಾಗುವ ಹಾರ್ಮೋನ್‍ಗಳ ಬದಲಾವಣೆ. ಆದರೆ ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್ ಬಳಸುವುದರ ಬದಲಿಗೆ, ಕೆಲವೊಂದು ಸಿಂಪಲ್ ಮನೆಮದ್ದು ಬಳಸುವುದು ತುಂಬಾನೇ ಒಳ್ಳೆಯದು. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಬೆಳ್ಳುಳ್ಳಿ

ಹೌದು ಬೆಳ್ಳುಳ್ಳಿಯಲ್ಲಿ ಉತ್ಕರ್ಷಣ ನಿರೋಧಕ ಜೊತೆಗೆ ಉರಿಯೂತ ಕಡಿಮೆ ಮಾಡುವ ಗುಣಲಕ್ಷಣಗಳು ಇರುವುದರಿಂದ, ಮೊಡವೆಗಳ ವಿರುದ್ಧ ಹೋರಾಡಲು ತುಂಬಾನೇ ಪ್ರಯೋಜನಕಾರಿಯಾಗುತ್ತದೆ.

ಹೀಗೆ ಮಾಡಿ

ಸುಮಾರು ನಾಲ್ಕೈದು ಎಸಳು ಬೆಳ್ಳುಳ್ಳಿಯನ್ನು ತಗೊಂಡು, ಅದನ್ನು ಚೆನ್ನಾಗಿ ಪೇಸ್ಟ್ ರೀತಿ ಮಾಡಿಕೊಂಡು, ದಿನಕ್ಕೆ ಎರಡು ಬಾರಿಯಂತೆ, ಮೊಡವೆಯ ಮೇಲೆ ಹಚ್ಚಿ. ಸುಮಾರು ಹತ್ತು ನಿಮಿಷಗಳವರೆಗೆ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ಸೋರಿಯಾಸಿಸ್ ಸಮಸ್ಯೆಗೆ

How to Properly Moisturize and Treat Psoriasis

  • ಸೋರಿಯಾಸಿಸ್ ಸಮಸ್ಯೆಯ ಮುಖ್ಯ ಲಕ್ಷಣಗಳು ಎಂದರೆ, ಚರ್ಮದಲ್ಲಿ ಕೆರೆತ, ದದ್ದು, ಅತಿಯಾಗಿ ತುರಿಕೆ ಸಮಸ್ಯೆಗಳು ಕಂಡುಬರುವುದು. ಹೀಗಾಗಿ ಇವೆಲ್ಲಾ ಸಮಸ್ಯೆಯನ್ನು ನಿವಾರಿಸಲು, ಆಹಾರಕ್ರಮದಲ್ಲಿ ನಿಯಮಿತವಾಗಿ ಬೆಳ್ಳುಳ್ಳಿ ಬಳಸುವುದನ್ನು ರೂಢಿ ಮಾಡಿಕೊಳ್ಳಿ.
  • ಇನ್ನು ಮೊದಲೇ ಹೇಳಿರುವ ಹಾಗೆ, ಬೆಳ್ಳುಳ್ಳಿಯಲ್ಲಿ ಉರಿಯೂತ ಸಮಸ್ಯೆ ನಿವಾರಿಸುವ ಗುಣ ಲಕ್ಷಣಗಳು ಅಧಿಕ ಪ್ರಮಾಣದಲ್ಲಿರುವುದರಿಂದ, ಸೋರಿಯಾಸಿಸ್ ಸಮಸ್ಯೆ ಕಡಿಮೆ ಮಾಡುವ ಎಲ್ಲಾ ಆರೋಗ್ಯ ಪವರ್ ಈ ಸಾಂಬಾರು ಪದಾರ್ಥಗಳಲ್ಲಿ ಸಿಗುತ್ತದೆ.

ವಯಸ್ಸಾದಂತೆ ಕಾಣಿಸುವುದಿಲ್ಲ!

Nursing Homes / Clinics / Hospitals of Hair Loss Treatment Service & Laser  Hair Removal Treatment Service by Dr. Charu Singh Clinic, Agra

ಚಿಕ್ಕ ವಯಸ್ಸಿನಲ್ಲಿ ವಯಸ್ಸಾದಂತೆ ಕಂಡರೆ ಏನು ಚಂದ ಅಲ್ಲವೇ? ಕೆಲವರಿಗೆ ಸಣ್ಣ ವಯಸ್ಸಿನ ಲ್ಲಿಯೇ ಮುಖದ ಮೇಲೆ ಮೂಡುವ ಕಲೆಗಳು, ಸಣ್ಣಸಣ್ಣ ಗೆರೆಗಳು, ಚರ್ಮದ ಸುಕ್ಕುಗಳು ಇರುವ ವಯಸ್ಸನ್ನು ಹೆಚ್ಚು ಮಾಡಿದಂತೆ ಕಂಡುಬರುತ್ತದೆ. ಆದರೆ ಬೆಳ್ಳುಳ್ಳಿ, ತ್ವಚೆಯ ಮೇಲಿನ ಸುಕ್ಕು ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಸಾಧ್ಯವಾದರೆ ಸಣ್ಣ ತುಂಡು ಹಸಿ ಬೆಳ್ಳುಳ್ಳಿಯ ಒಂದು ಎಸಳನ್ನು ಸ್ವಲ್ಪ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸದೊಂದಿಗೆ ಬೆರೆಸಿ ಬೆಳಗ್ಗೆ ಸೇವಿಸಿ. ವಾರಕ್ಕೆ ಒಮ್ಮೆ ಈ ವಿಧಾನವನ್ನು ಅನುಸರಿಸಿ.

ಸ್ಟ್ರೆಚ್ ಮಾರ್ಕ್ಸ್

Why Some People Get Stretch Marks And Others Don't | Venus Treatments

ಒಂದೆರಡು ಚಮಚ ಆಗುವಷ್ಟು ಆಲಿವ್ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಇದಕ್ಕೆ ಮೂರು ನಾಲ್ಕು ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಕಿಕೊಳ್ಳಿ. ಬೆಳ್ಳುಳ್ಳಿಯಿಂದ ವಾಸನೆ ಬರಲು ಪ್ರಾರಂಭಿಸಿದಾಗ ಗ್ಯಾಸ್ ಒಲೆಯನ್ನು ಸ್ವಿಚ್ ಆಫ್ ಮಾಡಿ. ಸ್ವಲ್ಪ ತಣ್ಣಗಾಗಲು ಬಿಡಿ. ಸಾಧ್ಯವಾದರೆ ಉಗುರು ಬೆಚ್ಚಗಿನ ಈ ಎಣ್ಣೆಯನ್ನು ಸ್ಟ್ರೆಚ್ ಮಾರ್ಕ್ಸ್ಮೂಡಿರುವ ಜಾಗದಲ್ಲಿ, ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಿ.

ಕೂದಲುದುರುವ ಸಮಸ್ಯೆ ಬೆಳ್ಳುಳ್ಳಿ ಎಣ್ಣೆ ಬಳಸಿ

These 5 Steps Can Help You Control Postpartum Hair Fall

  • ಕಲುಷಿತಗೊಂಡ ನೀರು, ವಾತಾವರಣ, ಆಹಾರ ಕ್ರಮ, ಒತ್ತಡ ಇತ್ಯಾದಿಗಳಿಂದಾಗಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ಕೂದಲು ಉದುರುವಿಕೆ ಸಮಸ್ಯೆ ಕಂಡುಬರುತ್ತಿದೆ. ಕೆಲವರಲ್ಲಿ ಈ ಸಮಸ್ಯೆಗಳು ಅತಿಯಾಗಿದ್ದರೆ, ಇನ್ನು ಕೆಲವರಲ್ಲಿ ಆಗಾಗ ಕಾಡುತ್ತಲೇ ಇರುತ್ತದೆ.
  • ಇತ್ತೀಚಿನ ದಿನಗಳಲ್ಲಿ ಕೂದಲ ಉದುರುವಿಕೆಗೆ ಔಷಧಿ ಎಂದು ಇಂದು ನೂರಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವೆಲ್ಲಾ ಸಾಕಷ್ಟು ಪ್ರಮಾಣದಲ್ಲಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವುದರಿಂದ, ಮುಂದೆ ಕೂದಲಿಗ ಸಂಬಂಧ ಪಟ್ಟ ಸಮಸ್ಯೆಗಳು ಜಾಸ್ತಿ ಕಾಡಲು ಶುರುವಾಗಬಹುದು. ಇದರ ಬದಲಿಗೆ ಬೆಳ್ಳುಳ್ಳಿ ಎಣ್ಣೆಯಿಂದ, ತಲೆಕೂದಲಿಗೆ ಮಸಾಜ್ ಮಾಡುವ ಮೂಲಕ ಕೂದಲು ಉದುರುವಿಕೆ ಸಮಸ್ಯೆಯಿಂದ ಪಾರಾಗಬಹುದು!
  • ರಾತ್ರಿ ಮಲಗುವ ಮುನ್ನ ಸ್ವಲ್ಪ ಬೆಳ್ಳುಳ್ಳಿ ಎಣ್ಣೆಯನ್ನು ಉಗುರು ಬೆಚ್ಚಗಾಗಿಸಿ, ಕೂದಲ ಬುಡಕ್ಕೆ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಬೇಕು. ಬಳಿಕ ತಲೆಗೂದಲನ್ನು ಹೇರ್ ಕ್ಯಾಪ್ ಬಳಸಿ ಕವರ್ ಮಾಡಿಕೊಳ್ಳಿ. ರಾತ್ರಿಯಿಡೀ ಹಾಗೇ ಬಿಟ್ಟು ಮರುದಿನ ಬೆಳಿಗ್ಗೆ ಸ್ನಾನ ಮಾಡುವಾಗ ನೈಸರ್ಗಿಕ ಶಾಂಪೂ ಬಳಸಿ, ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿಯಾದರೂ ಅನುಸರಿಸಿ

Know The Unknown Beauty Benefits Of Garlic For Hair, Skin.