ಆರೋಗ್ಯ ಸಲಹೆಗಳು: ತುಳಸಿ ಬೀಜಗಳ ಚಿನ್ನದಂತಹ ಗುಣಗಳು..

19-02-22 09:27 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ತುಳಸಿ ಎಲೆಗಳು ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಪ್ರಯೋಜನಗಳನ್ನು ತುಳಸಿ ಬೀಜಗಳು ಹೊಂದಿದೆ.

ಪವಿತ್ರ ತುಳಸಿ ಗಿಡದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ಇದರ ಎಲೆ, ಬೀಜಗಳು, ಕಾಂಡಗಳು ಎಲ್ಲವೂ ಕೂಡ ಒಂದಲ್ಲ ಒಂದು ರೀತಿಯಿಂದ ಪ್ರಯೋಜನಕ್ಕೆ ಬರುತ್ತಾ ಇರುತ್ತದೆ. ಪುರಾತನ ಕಾಲದಿಂದಲೂ ಕೂಡ ತುಳಸಿ ಗಿಡದ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿಯಾಗಿಯೂ ಬಳಸಿ ಕೊಂಡು ಬರಲಾಗುತ್ತಾ ಇದೆ. ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ಹೇಳಲಾಗುತ್ತದೆ. ಕೆಲವೊಂದು ಅಧ್ಯಯನಗಳು ಕೂಡ ಇದನ್ನು ಸಾಬೀತು ಮಾಡಿವೆ. ಆದರೆ ಇದು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ಇದರ ಎಲೆಗಳಂತೆಯೇ, ಇದರಲ್ಲಿರುವ ಬೀಜಗಳು ಕೂಡ ಅಷ್ಟೇ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ.

ಇತ್ತೀಚಿಗೆ ಸಂಶೋಧಕರು, ಕೂಡ ತುಳಸಿ ಬೀಜಗಳಲ್ಲಿರುವ ಆರೋಗ್ಯ ವಿಚಾರಗಳ ಬಗ್ಗೆ ಸರಿಯಾಗಿ ಅಧ್ಯಾಯನ ನಡೆಸಿ, ಇದರಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ಹಂಚಿ ಕೊಂಡಿದ್ದಾರೆ. ತುಳಸಿ ಬೀಜಗಳನ್ನು ನಮ್ಮ ದೈನಂದಿನ ಆರೋಗ್ಯ ಕ್ರಮದಲ್ಲಿ ಬಳಸುವುದರಿಂದ ಕೆಟ್ಟ ಆರೋಗ್ಯ ಪರಿಸ್ಥಿತಿ ದೂರವಾಗಿ ಅತ್ಯುತ್ತಮವಾದ ಆರೋಗ್ಯದ ಲಾಭಗಳು ಸಿಗುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಈ ಪವಿತ್ರ ತುಳಸಿ ಬೀಜಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನೋಡೋಣ..

ದೇಹದ ತೂಕ ಕಡಿಮೆ ಆಗಲು ನೆರವಾಗುತ್ತದೆ

Body Weight Measurement

  • ಹಲವಾರು ಮಂದಿ, ಈಗಿನ ಆಧುನಿಕ ಜೀವನ ಶೈಲಿಗೆ ಬಲಿಯಾಗಿ, ಬರ್ಗರ್, ಫಿಜ್ಜಾ, ಎಣ್ಣೆಯಲ್ಲಿ ಕರಿದ ಆಹಾರಗಳು ಇಂತಹ ಜಂಕ್ ಫುಡ್ ಆಹಾರಗಳ ರುಚಿಗೆ ಮಾರು ಹೋಗಿದ್ದಾರೆ. ಇದರೊಟ್ಟಿಗೆ ಒತ್ತಡದ ದುಡಿಮೆಯ ಜೀವನದಿಂದ ಪ್ರತಿ ದಿನ ದೈಹಿಕ ಚಟುವಟಿಕೆಯೂ ಸಹ ಕಡಿಮೆಯಾಗಿದೆ.
  • ಇದೆಲ್ಲದರ ಫಲವಾಗಿ ಇಂದು ಸಾಕಷ್ಟು ಜನರಿಗೆ, ದೇಹದ ತೂಕ, ಒಂದು ಶಾಪವಾಗಿ ಪರಿಣಮಿಸಿದೆ. ದುಃಖದ ಸಂಗತಿಗಳು ಏನೆಂದ್ರೆ ಇನ್ನೂ ಸಣ್ಣ ವಯಸ್ಸಿನಲ್ಲಿಯೇ, ದೇಹದಲ್ಲಿ ಬೊಜ್ಜು, ಕೆಟ್ಟ ಕೊಲೆಸ್ಟ್ರಾಲ್, ಇವೆಲ್ಲಾ ಅವರ ಆರೋಗ್ಯದಲ್ಲಿ ಮೀರಿ ಹೋಗಿರುತ್ತದೆ. ಇದೇ ಕಾರಣದಿಂದಾಗಿ ದೀರ್ಘಕಾಲದ ಕಾಯಿಲೆಗಳಾದ ರಕ್ತದ ಒತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಇತ್ಯಾದಿ ಸಮಸ್ಯೆಗಳು ಅವರ ಜೀವ ಹಿಂಡುತ್ತಿವೆ.
  • ಹೀಗಾಗಿ ಸರಿಯಾದ ಆಹಾರಕ್ರಮದ ಜೊತೆಗೆ, ವ್ಯಾಯಾಮ-ಯೋಗವನ್ನು ಅನುಸರಿಸಬೇಕು, ಜೊತೆಗೆ ತುಳಸಿ ಬೀಜಗಳನ್ನು ನೆನೆಸಿಟ್ಟ ನೀರು ಕುಡಿಯುವುದನ್ನು ಕೂಡ ಅಭ್ಯಾಸ ಮಾಡಿಕೊಳ್ಳಬೇಕು. ಇದಕ್ಕೆ ಮುಖ್ಯ ಕಾರಣ ತುಳಸಿ ಬೀಜಗಳಲ್ಲಿ ನಾರಿನ ಅಂಶ ಹೇರಳವಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲದೇ ಈ ಬೀಜಗಳು ದೇಹದಲ್ಲಿ ಕೊಬ್ಬಿನ ಅಂಶವನ್ನು ಕರಗಿಸಿ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚು ಮಾಡುತ್ತದೆ.

ಕೆಮ್ಮು ಮತ್ತು ಶೀತಕ್ಕೆ ರಾಮಬಾಣ 

How to Relieve a Cough from Cold or Flu | Vicks
ನೈಸರ್ಗಿಕ ವಿಧಾನದಲ್ಲಿ ನಮಗೆ ಬರುವಂತಹ ಶೀತ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿ ಸುವಲ್ಲಿ ತುಳಸಿ ಬೀಜಗಳು ತುಂಬಾನೇ ಆರೋಗ್ಯಕಾರಿ. ಇನ್ನು ಗಿಡಮೂಲಿಕೆ ಔಷಧಿಗಳಲ್ಲಿ ತುಳಸಿ ಬೀಜಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.
ಈಗಲೂ ಕೂಡ ಆಯುರ್ವೇದ ಪಂಡಿತರು ಶೀತ ಕೆಮ್ಮು ಮತ್ತು ಅಸ್ತಮಾ ಸಮಸ್ಯೆಯನ್ನು ದೂರಮಾಡಲು, ಈ ತುಳಸಿ ಬೀಜಗಳನ್ನು ಬಳಸುತ್ತಿದ್ದಾರೆ. ತುಳಸಿ ಬೀಜಗಳಲ್ಲಿ ಆಂಟಿ ಸ್ಪಾಸ್ಮೊಡಿಕ್ ಗುಣಲಕ್ಷಣಗಳು ಹೇರಳವಾಗಿ ಕಂಡು ಬರುವುದರಿಂದ, ಇವು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ.

ಚರ್ಮದ ಸಮಸ್ಯೆಗಳಿಗೆ

Common skin rashes and what to do about them

ಚರ್ಮದ ಸಮಸ್ಯೆಗಳಾದ ಇಸುಬು, ಸೋರಿಯಾಸಿಸ್ ಅಥವಾ ಇನ್ನಿತರ ಯಾವುದಾದರೂ ಚರ್ಮದ ಸೋಂಕುಗಳು ಕಂಡುಬಂದಿದ್ದರೆ, ತುಳಸಿ ಬೀಜಗಳನ್ನು ಸಣ್ಣಗೆ ಪೌಡರ್ ರೀತಿ ಮಾಡಿಕೊಂಡು, ಇದಕ್ಕೆ ಒಂದೆರಡು ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಸೋಂಕು ಇರುವ ಭಾಗದಲ್ಲಿ ಹಚ್ಚಬಹುದು. ಉತ್ತಮ ಫಲಿತಾಂಶಕ್ಕೆ ಒಂದೆರಡು ವಾರ ನಿರಂತರವಾಗಿ ಈ ಮನೆಮದ್ದನ್ನು ಬಳಸುತ್ತಾ ಬಂದರೆ, ಈ ಸಮಸ್ಯೆಯಿಂದ ಪಾರಾಗಬಹುದು.

ಬಾಡಿ ಹೀಟ್ ಕಮ್ಮಿ ಮಾಡುತ್ತೆ!

Protect Yourself From the Dangers of Extreme Heat | Environmental Health  Toolkits | NCEH

ತುಳಸಿ ಬೀಜಗಳ ನೆನೆಸಿಟ್ಟ ತಂಪು ಪಾನೀಯ ಬೀಸಿಗೆಯಲ್ಲಿ ತುಂಬಾನೇ ಫೇಮಸ್! ಯಾಕೆಂದರೆ ಈ ಬೀಜಗಳು ದೇಹಕ್ಕೆ ತಂಪು ನೀಡುವುದರ ಜೊತೆಗೆ, ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ನಮ್ಮ ಹೊಟ್ಟೆಯ ಕೆಲವು ಆರೋಗ್ಯದ ಅಸ್ವಸ್ಥತೆಗಳನ್ನು ದೂರ ಮಾಡುವ ಲಕ್ಷಣಗಳನ್ನು ಪಡೆದಿವೆ.

ತಲೆ ಕೂದಲಿನ ಆರೈಕೆ

6 Common Hair Problems and How to Fix Them | Real Simple

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿಗೆಯೇ ತಲೆ ಕೂದಲು ಬೆಳ್ಳಗಾಗುವುದು ಮತ್ತು ಉದುರಿ ಹೋಗುವುದು ಹೆಚ್ಚಿನವರಿಗೆ ಕಾಡುತ್ತಲೇ ಇರುತ್ತದೆ. ಆದರೆ ಈ ಸಮಸ್ಯೆಯನ್ನು ನಿಯಂತ್ರಿಸಲು ರಾಸಾಯನಿಕ ಉತ್ಪನ್ನಗಳನ್ನು ಉಪಯೋಗಿಸುವ ಬದಲು, ಮನೆಯಲ್ಲಿಯೇ ತುಳಸಿ ಬೀಜಗಳನ್ನು ಬಳಸಿ ಮಾಡಿದ ಹೇರ್ ಪ್ಯಾಕ್ ಬಳಸಿದರೆ, ಕೂದಲಿನ ಸಮಸ್ಯೆಯಿಂದ ಪಾರಾಗಬಹುದು.

ಹೀಗೆ ಮಾಡಿ:

ಒಂದೆರಡು ಒಣಗಿದ ನೆಲ್ಲಿಕಾಯಿ ಮತ್ತು ತುಳಸಿ ಬೀಜಗಳ ಪುಡಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇನ್ನು ಇವೆರಡನ್ನೂ ಕೂಡ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದಕ್ಕೆ ಒಂದೆರಡು ಚಮಚ ತೆಂಗಿನ ಎಣ್ಣೆಯನ್ನು ಹಾಕಿ, ನಯವಾದ ಪೇಸ್ಟ್ ಮಾಡಿಕೊಳ್ಳಿ ಇಷ್ಟಾದ ಮೇಲೆ ಬ್ರಷ್‌ನ ಸಹಾಯದಿಂದ ತಲೆಯ ನೆತ್ತಿ ಭಾಗಕ್ಕೆ ಹಚ್ಚಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಆದರೂ ಈ ಮನೆಮದ್ದನ್ನು ಟ್ರೈ ಮಾಡಿ.

ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ

Top 10 Anti-Viral Supplements to Boost Immunity - GilbertLab

ತುಳಸಿ ಎಲೆಗಳಲ್ಲಿ ಇರುವಂತೆಯೇ ಇದರ ಬೀಜಗಳಲ್ಲಿ ಕೂಡ ಅಷ್ಟೇ, ಅಧಿಕ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಕಂಡು ಬರುವುದರಿಂದ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರ ಜೊತೆಗೆ, ಫ್ರೀ ರಾಡಿಕಲ್ ಗಳ ಹಾನಿಯನ್ನು ತಪ್ಪಿಸುವಲ್ಲಿ ಕೂಡ ಸಹಾಯ ಮಾಡುತ್ತದೆ.

The Health Benefits Of Basil Seeds That You May Not Have Known.