ಸಂಶೋಧನೆ: ತಣ್ಣೀರಿನ ಸ್ನಾನ ಮತ್ತು ಬಿಸಿ ನೀರಿನ ಸ್ನಾನ ಯಾವುದು ಒಳ್ಳೆಯದು?

20-02-22 11:12 pm       Source: Vijayakarnataka   ಡಾಕ್ಟರ್ಸ್ ನೋಟ್

ತಣ್ಣೀರು ಸ್ನಾನ ಮಾಡುವುದರಿಂದ ಏನೆಲ್ಲಾ ಆರೋಗ್ಯ ಲಾಭಗಳು ಪಡೆಯಬಹುದು ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯಿರಿ.

ಬೆಳಗ್ಗೆ ಆದರೆ ಬಿಸಿ ಬಿಸಿ ಸ್ನಾನ ಮಾಡಿ, ಒತ್ತಡ ಬದುಕನ್ನು ಪ್ರಾರಂಭ ಮಾಡುತ್ತೇವೆ. ಸಾಕಷ್ಟು ಮಂದಿ ಉಗುರು ಬೆಚ್ಚಗಿನ ಬಿಸಿ ನೀರಿನ ಬದಲಾಗಿ ಸುಡುವ ನೀರಿನಿಂದ ಸ್ನಾನ ಮಾಡುತ್ತಾರೆ. ಸುಡುವ ನೀರಿನ ಸ್ನಾನ ಮಾಡಿದರೆ ಮಾತ್ರ ಅವರಿಗೆ ಸ್ನಾನ ಮಾಡಿದ ತೃಪ್ತಿ ಉಂಟಾಗುತ್ತದೆ.

ಸಾಮಾನ್ಯವಾಗಿ ಬಿಸಿ ನೀರು ಮೈಕೈ ನೋವನ್ನು ಕಡಿಮೆ ಮಾಡುತ್ತದೆ ಎಂಬ ಮಾತಿದೆ. ಇದನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಇದು ನಿಜ ಕೂಡ. ಆದರೆ ಆಯುರ್ವೇದವು ಬಿಸಿ ನೀರಿನ ಸ್ನಾನದ ಬದಲಾಗಿ ತಣ್ಣೀರಿನ ಸ್ನಾನ ತುಂಬಾ ಒಳ್ಳೆಯದು ಎಂದು ಹೇಳುತ್ತದೆ. ಏಕೆಂದರೆ ತಣ್ಣೀರಿನ ಸ್ನಾನವು ತೂಕ ನಷ್ಟಕ್ಕೆ, ಖಿನ್ನತೆ, ಒತ್ತಡ, ಸ್ನಾಯುಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಲೇಖನದಲ್ಲಿ ತಣ್ಣೀರಿನ ಸ್ನಾನ ಮಾಡುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ? ಎಂಬುದನ್ನು ಇಲ್ಲಿ ತಿಳಿಯಿರಿ.

ತುರಿಕೆಯ ಚರ್ಮವನ್ನು ಶಾಂತಗೊಳಿಸುತ್ತದೆ

Itching without a rash: 8 possible causes and treatments

ಬಹುತೇಕರಿಗೆ ಚಳಿಗಾಲದಲ್ಲಿ ಮೈಯೆಲ್ಲಾ ತುರಿಕೆ ಉಂಟಾಗುತ್ತದೆ. ಆಗ ಬಿಸಿ ಬಿಸಿ ಸ್ನಾನ ಮಾಡುವುದರಿಂದ ಮತ್ತಷ್ಟು ತುರಿಕೆಯ ಸಮಸ್ಯೆ ಕಾಡುತ್ತದೆ. ಇದಕ್ಕೆ ಪರಿಹಾರವಾಗಿ ತಣ್ಣನೆಯ ಸ್ನಾನವು ತುರಿಕೆ ಚರ್ಮವನ್ನು ಶಾಂತಗೊಳಿಸುತ್ತದೆ. ಇದು ಸುಡುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ.

ಹೀಗೆ ಮಾಡಿ

ತುರಿಕೆಯನ್ನು ನಿವಾರಣೆ ಮಾಡಲು ಓಟ್ಸ್‌ ಪುಡಿಯನ್ನು ನಿಮ್ಮ ಸ್ನಾನದ ನೀರಿನ ಬಕೆಟ್‌ಗೆ ಹಾಕಿ. ಸುಮಾರು 5 ನಿಮಿಷಗಳ ಕಾಲ ಬಿಟ್ಟು ಸ್ನಾನ ಮಾಡಿ. ಇದರಿಂದ ತುರಿಕೆ ದಿನದಿಂದ ದಿನ ಕಡಿಮೆಯಾಗುತ್ತದೆ.

ತಣ್ಣೀರಿನ ಸ್ನಾನವು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ

This is the traditional superfood that improves blood circulation

ತಣ್ಣೀರು ನಿಮ್ಮ ದೇಹ ಮತ್ತು ಬಾಹ್ಯ ಅಂಗಗಳಿಗೆ ತಾಗಿದಾಗ, ಅದು ನಿಮ್ಮ ದೇಹದ ಮೇಲ್ಮೈಯಲ್ಲಿ ಪರಿಚಲನೆಯನ್ನು ನಿರ್ಬಂಧಿಸುತ್ತದೆ. ಇದು ನಿಮ್ಮ ಆಳವಾದ ಅಂಗಾಂಶಗಳಲ್ಲಿನ ರಕ್ತವು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ವೇಗವಾಗಿ ಪರಿಚಲನೆಗೆ ಕಾರಣವಾಗುತ್ತದೆ.

ತಣ್ಣೀರಿನ ಸ್ನಾನವು ಅಧಿಕ ರಕ್ತದೊತ್ತಡ ಅಥವಾ ಹೃದಯರಕ್ತನಾಳದ ಕಾಯಿಲೆ ಹೊಂದಿರುವವರಿಗೆ ಒಳ್ಳೆಯದು. ಏಕೆಂದರೆ ಶೀತ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ ರಕ್ತಪರಿಚಲನಾ ವ್ಯವಸ್ಥೆಯನ್ನು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಪ್ರಚೋದಿಸುತ್ತದೆ.

ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ

Muscle Pain: treatment and remedy of twisting and pain in muscles - हल्के  में न लें मांसपेशियों की जकड़न, करें ये बचाव - Navbharat Times

ಕೆಲವು ಸಂಶೋಧನೆಯ ಪ್ರಕಾರ, ವ್ಯಾಯಾಮದ ನಂತರ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಸ್ನಾಯುಗಳ ನೋವಿಗೆ ಕಡಿಮೆ ಗುರಿಯಾಗುತ್ತಾರೆ.

ವೈದ್ಯಕೀಯ ತಜ್ಞರ ಪ್ರಕಾರ, ತಣ್ಣೀರು ಸ್ನಾನ ನೋವಿನಿಂದ ಸಹಾಯ ಮಾಡುತ್ತದೆ. ಏಕೆಂದರೆ ಅದು ನಿಮ್ಮ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಅಲ್ಲದೆ, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಸ್ನಾಯುಗಳ ನೋವು ಅನುಭವಿಸುತ್ತಿದ್ದರೆ ಉಗುರು ಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನ ಮಾಡಲು ಶಿಫಾರಸ್ಸು ಮಾಡಲಾಗುತ್ತದೆ. ಹೆಚ್ಚು ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ.

ಖಿನ್ನತೆಯಿಂದ ಹೊರಬರಬಹುದು

home remedies for depression: ಮಾನಸಿಕ ಖಿನ್ನತೆ ನಿವಾರಿಸಲು ಮನೆ ಮದ್ದು - how to  get rid of depression through home remedies | Vijaya Karnataka

ತಣ್ಣೀರು ಮಾನಸಿಕ ಆರೋಗ್ಯದ ಸ್ಥಿತಿಯನ್ನು ತಕ್ಕ ಮಟ್ಟಿಗೆ ಸುಧಾರಿಸುತ್ತದೆ. ಅಂದರೆ ಈಜುವಂತಹ ಚಟುವಟಿಕೆ ಮಾಡುವುದರಿಂದ ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

The Human Immune System Explained

ತಣ್ಣೀರಿನ ಸ್ನಾನವು ಒಂದು ರೀತಿಯ ಚಿಕಿತ್ಸೆಯಾಗಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ ಎಂಬುದನ್ನು ಸಾಬೀತು ಪಡಿಸಿದೆ. ಇದು ನಿಮ್ಮ ಅನಾರೋಗ್ಯದ ವಿರುದ್ಧ ಹೋರಾಡುವ ನಿಮ್ಮ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಕೆಲವು ಅಧ್ಯಯನವು, ತಣ್ಣೀರಿನ ಸ್ನಾನ ಪ್ರತಿನಿತ್ಯ ಮಾಡುವುದರಿಂದ ಆಂಟಿಟ್ಯೂಮರ್‌ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ತಿಳಿಸಿವೆ.

ತಣ್ಣೀರಿನ ಸ್ನಾನ ಚಿಕಿತ್ಸೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆಯೇ ಎಂಬುದಕ್ಕೆ ಹೆಚ್ಚಿನ ಸಂಶೋಧನೆಗಳು ಅಗತ್ಯವಿದ್ದರು ಕೂಡ, ಕೆಲವು ಅಧ್ಯಯನಗಳು ಮಾತ್ರ ತಣ್ಣೀರಿನ ಸ್ನಾನವು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ತೋರಿಸಿದೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ, ಕ್ಯಾಲೋರಿಗಳನ್ನು ಸುಡುವಂತೆ ಮಾಡುತ್ತದೆ. ಹಾಗೆಯೇ ತಣ್ಣೀರಿನ ಸ್ನಾನವು ನಿಮ್ಮ ಕೂದಲು ಮತ್ತು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಇದರಿಂದ ನೀವು ಯಾವುದೇ ರೀತಿಯ ತುರಿಕೆಯನ್ನು ಅನುಭವಿಸುವುದಿಲ್ಲ.

Cold Water Vs Hot Water Bath Benefits.