ಡ್ರಗ್ ಮಾಫಿಯಾದಲ್ಲಿ ಶಾಸಕರು, ಸಚಿವ ಯಾರೇ ಇದ್ದರೂ ಒದ್ದು ಒಳಗಾಕಿ ; ಶಾಸಕ ಅಪ್ಪಚ್ಚು ರಂಜನ್

10-09-20 12:59 pm       Headline Karnataka News Network   ಲೀಡರ್ಸ್ ರಿಪೋರ್ಟ್

"ಡ್ರಗ್ಸ್ ದಂಧೆಯಲ್ಲಿ ಯಾರೇ ಕೈವಾಡ ಹೊಂದಿದ್ದರೂ ರಿಯಾಯ್ತಿ ಕೊಡಬಾರದು. ಸಚಿವರು, ಶಾಸಕರು ಯಾರಿದ್ದರೂ ಒದ್ದು ಜೈಲಿಗೆ ತಳ್ಳಬೇಕು"

ಮಡಿಕೇರಿ, ಸೆಪ್ಟೆಂಬರ್ 10: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ರಾಜ್ಯದಲ್ಲಿ ಸಂಚಲನ ಎಬ್ಬಿಸಿರುವಾಗಲೇ ನಟಿಮಣಿಯರ ಜೊತೆ ರಾಜಕಾರಣಿಗಳ ನಂಟೂ ಬೆಳಕಿಗೆ ಬರುತ್ತಿದೆ. ಇದೇ ವೇಳೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ, ಶಾಸಕ ಅಪ್ಪಚ್ಚು ರಂಜನ್, ಡ್ರಗ್ಸ್ ದಂಧೆಯಲ್ಲಿ ಯಾರೇ ಕೈವಾಡ ಹೊಂದಿದ್ದರೂ ರಿಯಾಯ್ತಿ ಕೊಡಬಾರದು. ಸಚಿವರು, ಶಾಸಕರು ಯಾರಿದ್ದರೂ ಒದ್ದು ಜೈಲಿಗೆ ತಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ. 

ಡ್ರಗ್ಸ್ ಮಾಫಿಯಾದಲ್ಲಿ  ಕಾಂಗ್ರೆಸ್ ಆಗಿರಲಿ, ಬಿಜೆಪಿ ಆಗಿರಲಿ. ಡ್ರಗ್ಸ್ ದಂಧೆಯಲ್ಲಿರುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಒದ್ದು ಒಳಗಾಕಬೇಕು ಎಂದು ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಫಿಯಾದಲ್ಲಿ ಶಾಮೀಲಾದ ಯಾರೆ ಸ್ಟಾರ್ ಕಲಾವಿದರಿದ್ದರು ನಟ ನಟಿಯರಾದರೂ ಒದ್ದು ಒಳಗಾಕಬೇಕು. ಡ್ರಗ್ಸ್ ದಂಧೆಯಿಂದ ಸಂಪಾದಿಸಿರುವ ಎಷ್ಟೇ ಆಸ್ತಿಯಾದರೂ ಮುಟ್ಟುಗೋಲು ಹಾಕಬೇಕು ಎಂದು ಅಪ್ಪಚ್ಚು ರಂಜನ್ ಮಡಿಕೇರಿಯಲ್ಲಿ ಒತ್ತಾಯಿಸಿದ್ದಾರೆ.

Join our WhatsApp group for latest news updates