ಬ್ರೇಕಿಂಗ್ ನ್ಯೂಸ್
21-11-22 06:26 pm Mangalore Correspondent ಕರಾವಳಿ
ಮಂಗಳೂರು, ನ.21: ಕುಕ್ಕರ್ ಬಾಂಬ್ ಬ್ಲಾಸ್ಟ್ ಘಟನೆಯಿಂದಾಗಿ ಜನರು ಆತಂಕದಲ್ಲಿರುವಾಗಲೇ ಮಂಗಳೂರಿನಲ್ಲಿ ಮತ್ತೊಂದು ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಪೊಲೀಸರನ್ನೇ ಆತಂಕಕ್ಕೀಡು ಮಾಡಿದ ಪ್ರಸಂಗ ನಡೆದಿದೆ.
ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅನಾಥ ಬ್ಯಾಗ್ ಪತ್ತೆಯಾಗಿದ್ದು, ಅಲ್ಲಿದ್ದ ಜನರು ಮತ್ತು ನಿಲ್ದಾಣದ ಸಿಬಂದಿ ಅದನ್ನು ನೋಡುತ್ತಲೇ ಆತಂಕಗೊಂಡಿದ್ದಾರೆ. ವಾರೀಸುದಾರರಿಲ್ಲದೆ ಬ್ಯಾಗ್ ಬಸ್ ನಿಲ್ದಾಣದ ಒಳಗಿನ ಮೆಟ್ಟಿಲ ಬಳಿ ಅನಾಥವಾಗಿ ಬಿದ್ದುಕೊಂಡಿತ್ತು. ವಿಷಯ ತಿಳಿದ ಪೊಲೀಸರು ಅಲ್ಲಿದ್ದ ಜನರನ್ನು ದೂರಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ಮೆಟ್ಟಿಲ ಹಾದಿಗೆ ಬ್ಯಾರಿಕೇಡ್ ಹಾಕಿ ಅಲ್ಲಿಂದ ಜನ ಸಂಚಾರವನ್ನು ಬಂದ್ ಮಾಡಿದ್ದಾರೆ. ಕೂಡಲೇ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಸಿದ್ದಾರೆ. ಶ್ವಾನದಳ ತಪಾಸಣೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಹೀಗಾಗಿ ಪೊಲೀಸರು ಬ್ಯಾಗನ್ನು ತೆಗೆದು ಪರಿಶೀಲನೆ ನಡೆಸಿದಾಗ, ಅದರಲ್ಲಿ ಒಂದಷ್ಟು ಹಳೆಯ ಬಟ್ಟೆಗಳು ಮತ್ತು ಕಾಗದ ಪತ್ರಗಳಷ್ಟೇ ಇದ್ದವು. ಅದನ್ನು ನೋಡಿದ ಪೊಲೀಸರು ತಾವು ಇಷ್ಟಕ್ಕೇ ಇಷ್ಟೊಂದು ಹೆದರಿಕೊಂಡಿದ್ದೇ ಅನ್ನುವಂತಾಯಿತು.
ಬಂದರು ಠಾಣೆ ಪೊಲೀಸರು ಮತ್ತು ಶ್ವಾನದಳ ಬಸ್ ನಿಲ್ದಾಣದ ಸುತ್ತಮುತ್ತ ತಪಾಸಣೆಯನ್ನೂ ನಡೆಸಿತು. ಬ್ಯಾಗಿನಲ್ಲಿ ಏನೂ ಇಲ್ಲ ಎಂಬುದನ್ನು ತಿಳಿಯುತ್ತಲೇ ಬಸ್ ನಿಲ್ದಾಣದ ಸಿಬಂದಿ ಮತ್ತು ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಎರಡು ದಿನಗಳ ಹಿಂದಷ್ಟೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿದ್ದು ಅದರಿಂದಾಗಿ ಬಾಂಬ್ ಆತಂಕದ ವಾತಾವರಣ ನೆಲೆಸಿದ್ದರಿಂದ ಜನರು ಮತ್ತು ಪೊಲೀಸರು ಸಹಜವಾಗಿಯೇ ಬ್ಯಾಗ್ ಕಂಡು ಆತಂಕಗೊಂಡಿದ್ದರು. ಯಾರೋ ಪ್ರಯಾಣಿಕರು ಬ್ಯಾಗನ್ನು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು ಅನ್ನುವ ಅನುಮಾನವಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Autorickshaw blast in Mangalore, Unidentified bag found in KSRTC bus stand create Panic. The bomb and canine squad of police rushed to the spot. After inspection, the owner of the bag was traced. The bag was that of a passenger.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm