ಬ್ರೇಕಿಂಗ್ ನ್ಯೂಸ್
30-11-22 10:07 am Mangalore Correspondent ಕರಾವಳಿ
ಮಂಗಳೂರು, ನ.30: ತೆಂಕುತಿಟ್ಟಿನ ಅಪ್ರತಿಮ ಯಕ್ಷಗಾನ ಕಲಾವಿದ, ಪ್ರಾಸಬದ್ಧ ಮಾತಿನಲ್ಲೇ ಯಕ್ಷಾಭಿಮಾನಿಗಳ ಮನಗೆದ್ದಿದ್ದ ಕುಂಬಳೆ ಸುಂದರ ರಾಯರು ಇನ್ನಿಲ್ಲ. 88ರ ತುಂಬು ವಯಸ್ಸಿನಲ್ಲಿ ಸುಂದರ ರಾಯರು ಮಂಗಳೂರಿನ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಪಂಪ್ವೆಲ್ ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಯಕ್ಷಗಾನ ಅಕಾಡೆಮಿಯಲ್ಲಿ ಮೊದಲ ಅಧ್ಯಕ್ಷರಾಗಿದ್ದ ಸುಂದರ ರಾವ್, ಯಕ್ಷಗಾನ ಪಿತಾಮಹ ಪಾರ್ತಿಸುಬ್ಬ ಹೆಸರಲ್ಲಿ ಅಕಾಡೆಮಿಯಿಂದ ಪ್ರಶಸ್ತಿ ಆರಂಭಿಸಿದ್ದರು. ಬಿಜೆಪಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಅವರು 1994ರಲ್ಲಿ ಸುರತ್ಕಲ್ ಕ್ಷೇತ್ರದಲ್ಲಿ ಶಾಸಕರಾಗಿದ್ದರು.
ಸುದೀರ್ಘ ಕಾಲ ಧರ್ಮಸ್ಥಳ ಮೇಳದಲ್ಲಿ ಕಲಾವಿದರಾಗಿದ್ದ ನಿವೃತ್ತಿಯ ಬಳಿಕ ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆನಂತರ ಯಕ್ಷಗಾನ ಕಲಾವಿದರಾಗಿ ಓಡಾಟ, ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಅದ್ಭುತ ವಾಕ್ ಚಾತುರ್ಯದ ಕಾರಣದಿಂದಾಗಿ ಕುಂಬ್ಳೆ ಸುಂದರ್ ರಾವ್ ಜನಮಾನಸದಲ್ಲಿ ಅಚ್ಚುಮೆಚ್ಚಿನ ಕಲಾವಿದರಾಗಿದ್ದರು. ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದ ಅಪರೂಪದ ಕಲಾವಿದ ಕುಂಬಳೆ ಸುಂದರ ರಾಯರು.
ಇಪ್ಪತ್ತು ವರ್ಷಗಳ ಹಿಂದೆ ಟಿವಿ ಇರದಿದ್ದ ಕಾಲದಲ್ಲಿ ಟೇಪ್ ರೆಕಾರ್ಡರ್ ನಲ್ಲಿ ಯಕ್ಷಗಾನ ಕೇಳುತ್ತಿದ್ದ ಸಮಯದಲ್ಲಿ ಕುಂಬಳೆ ಸುಂದರ ರಾಯರ ಕ್ಯಾಸೆಟ್ ಗಳಿಗೆ ಅಪರಿಮಿತ ಬೇಡಿಕೆ ಇತ್ತು. ಪ್ರತಿ ಮನೆಯಲ್ಲಿ ಸಂಜೆಯಾಗುತ್ತಿದ್ದಂತೆ ಸುಂದರ ರಾಯರ ಯಕ್ಷಗಾನ ಕೇಳಿ ಬರುತ್ತಿತ್ತು. ರೇಡಿಯೋದಲ್ಲಿ ಸುಂದರ ರಾಯರ ಯಕ್ಷಗಾನ ಇದ್ದರೆ ಕಾದು ಕುಳಿತು ಕಿವಿಯಾಗಿಸುವ ದಿನಗಳಿದ್ದವು.
ಕರ್ಣ, ರಾಮ, ಲಕ್ಷ್ಮಣ, ಕೃಷ್ಣ ಮುಂತಾದ ಪೌರಾಣಿಕ ಪ್ರಸಂಗಗಳಲ್ಲಿ ಕೇಳುಗನಿಗೆ ಕುಳಿತಲ್ಲೇ ನವಸರಗಳ ಭಾವುಕತೆಯನ್ನು ಕಟ್ಟಿಕೊಡುವಲ್ಲಿ ನಿಪುಣರಾಗಿದ್ದ ಏಕೈಕ ಕಲಾವಿದ ಸುಂದರ ರಾಯರು. ಮಾನಿಷಾದ ಯಕ್ಷಗಾನದ ಸೀತೆಯನ್ನು ಕಾಡಿಗೆ ಬಿಟ್ಟು ಬರುವ ಸನ್ನಿವೇಶದಲ್ಲಿ ಸೀತಾರಾಮನಾಗಿ ಇರುವುದು ಈ ರಾಜ್ಯದ ಜನರಿಗೆ ಇಷ್ಟವಿರದಿದ್ದರೆ, ನೀನು ರಾಜಾರಾಮನಾಗಿಯೇ ಇರು ಎನ್ನುವ ಭಾವುಕ ಮಾತುಗಳು ಕೇಳುಗರನ್ನು ಕುಳಿತಲ್ಲೇ ಕಣ್ಣೀರು ಹರಿಸುವಂತೆ ಮಾಡುತ್ತಿದ್ದವು.
ಮೂಲತಃ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿಯಾಗಿದ್ದರೂ, ಶಾಸಕರಾದ ಬಳಿಕ ಮಂಗಳೂರಿನಲ್ಲಿಯೇ ವಾಸವಿದ್ದರು. ಅಪಾರ ಯಕ್ಷಗಾನ ಅಭಿಮಾನಿಗಳು, ಪತ್ನಿ ಮತ್ತು ಇಬ್ಬರು ಪುತ್ರರನ್ನು ಸುಂದರ ರಾಯರು ಅಗಲಿದ್ದಾರೆ. ಡಿ.1ರಂದು ಮಂಗಳೂರಿನಲ್ಲಿ ಕುಂಬ್ಳೆ ಸುಂದರ್ ರಾವ್ ಅಂತ್ಯಕ್ರಿಯೆ ನಡೆಯಲಿದೆ.
Renowned Yakshagana artiste Kumble Sundar Rao (88) passed away on Wednesday November 30 morning. He was an exponent of Thenkuthittu style of Yakshagana. Rao was also a member of member of the tenth Karnataka Legislative Assembly from Surathkal constituency from 1994 to 1999, He won as Bharatiya Janata Party candidate.
18-01-25 05:05 pm
Bangalore Correspondent
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
18-01-25 06:20 pm
HK News Desk
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
18-01-25 09:27 pm
Mangalore Correspondent
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
Mangalore court, Rape, Crime: ಇನ್ಸ್ಟಾಗ್ರಾಮ್ ನ...
17-01-25 10:58 pm
Ullal News, Mangalore: ಸೋಮೇಶ್ವರ ; ಬಾಡಿಗೆ ಮನೆಯ...
17-01-25 10:50 pm
19-01-25 12:13 pm
HK News Desk
Mangalore Kotekar bank robbery, Update, Crime...
18-01-25 10:47 pm
Sullia, Mangalore crime: ಸುಳ್ಯ ; ಕುಡಿದ ಅಮಲಿನಲ...
18-01-25 10:28 am
Kotekar Bank Robbery, Latest Update, Mangalor...
17-01-25 07:58 pm
Kotekar Bank Robbery, Mangalore Crime; ಬೀದರ್...
17-01-25 03:02 pm