ಬ್ರೇಕಿಂಗ್ ನ್ಯೂಸ್
09-08-24 10:56 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 9: ಬೀದಿಬದಿ ವ್ಯಾಪಾರಿಗಳ ವಿರುದ್ಧ ಕಳೆದ 10 ದಿನಗಳಿಂದ ಟೈಗರ್ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಇದರಿಂದ ಬೀದಿ ಬದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಆರೋಪಿಸಿ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘವು ಪ್ರತಿಭಟನೆ ನಡೆಸುತ್ತ ಬಂದಿದೆ. ಇದರ ಪರಿಣಾಮ ಎಂಬಂತೆ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ವ್ಯಾಪಾರಿ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಟೈಗರ್ ಕಾರ್ಯಾಚರಣೆ ವಿರುದ್ಧ ಆಗಸ್ಟ್ 7ರಂದು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಮೇಯರ್ ಮತ್ತು ಪಾಲಿಕೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಬೀದಿಬದಿ ವ್ಯಾಪಾರಿಗಳ ಜೊತೆಗೆ ಸಭೆ ನಡೆಸಿದ್ದು ಐಡಿ ಕಾರ್ಡ್ ನೀಡುವ ಬಗ್ಗೆ ಪ್ರಸ್ತಾಪ ಇಟ್ಟಿದ್ದಾರೆ.
ಇದಕ್ಕೆ ವ್ಯಾಪಾರಿಗಳು ಒಪ್ಪಿಗೆ ನೀಡಿದ್ದು, 667 ಮಂದಿ ಬೀದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ವಿತರಣೆ ಮತ್ತು ಬೀದಿ ವ್ಯಾಪಾರ ವಲಯ ರಚನೆ ಮಾಡಲು ಆಗಸ್ಟ್ 19 ವರೆಗೆ ಮೇಯರ್ ಕಾಲಾವಕಾಶ ಕೇಳಿದ್ದಾರೆ. ಇದೇ ವೇಳೆ, ಸಂಘದ ಗೌರವಾಧ್ಯಕ್ಷ ಬಿಕೆ ಇಮ್ತಿಯಾಜ್, ವ್ಯಾಪಾರ ವಲಯ ಮತ್ತು ಐಡಿ ಕಾರ್ಡ್ ವಿತರಣೆ ಮಾಡುವವರೆಗೆ ಟೈಗರ್ ಕಾರ್ಯಾಚರಣೆ ನಿಲ್ಲಿಸಬೇಕೆಂದು ಮೇಯರ್ ಅವರನ್ನು ಒತ್ತಾಯಿಸಿದರು.
ಇದಲ್ಲದೆ, ಆಹಾರ ಮಾರಾಟ ಮಾಡುವ ವ್ಯಾಪಾರಿಗಳಿಗೆ ಸಂಜೆ 4ರಿಂದ ರಾತ್ರಿ 11ರ ವರೆಗೆ ಅವಕಾಶ ನೀಡುವಂತೆ ಕೋರಲಾಯಿತು. ಎಲ್ಲದಕ್ಕೂ ಆಗಸ್ಟ್ 19ರ ವರೆಗೆ ಕಾಯಿರಿ, ಅದರೊಳಗೆ ವ್ಯವಸ್ಥೆ ಮಾಡುವುದು ನಮ್ಮಿಂದ ಸಾಧ್ಯ ಆಗದಿದ್ದರೆ ಯಥಾಸ್ಥಿತಿ ವ್ಯಾಪಾರ ಮುಂದುವರಿಸಿ ಎಂದು ಮೇಯರ್ ತಿಳಿಸಿದ್ದಾರೆ ಎಂಬುದಾಗಿ ಡಿವೈಎಫ್ಐ ಪ್ರತಿನಿಧಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಸಂಘದ ಮುಖಂಡರಾದ ಶ್ರೀನಿವಾಸ್ ಕಾವೂರು, ಗೋಪಾಲ್, ಅನಿಲ್, ರಹಿಮಾನ್ ಮುಂತಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
The Street Traders Welfare Association has been protesting against the hawkers for the past 10 days because of the ongoing Tiger Operation, which is robbing the street hawkers of their right to live. As a result of this, Corporation Mayor Sudhir Shetty has held talks with Kannur business representatives.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm