ಬ್ರೇಕಿಂಗ್ ನ್ಯೂಸ್
13-08-25 10:37 am Mangalore Correspondent ಕರಾವಳಿ
ಬೆಳ್ತಂಗಡಿ, ಆ.13 : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪ ಕುರಿತಂತೆ ಇದೀಗ ರಾಷ್ಟ್ರೀಯ ಮಾನವ ಹಕ್ಕಗಳ ಆಯೋಗವೂ ಎಂಟ್ರಿಯಾಗಿದ್ದು ತನಿಖೆ ಆರಂಭಿಸಿದೆ. ಧರ್ಮಸ್ಥಳಕ್ಕೆ ಆಗಮಿಸಿದ ನಾಲ್ವರು ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಂಗಳವಾರ ತನಿಖೆ ಆರಂಭಿಸಿದೆ.
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಆಯೋಗ, ಧರ್ಮಸ್ಥಳದ ದೇವಾಲಯದ ಆವರಣ, ಗ್ರಾಮ ಪಂಚಾಯಿತಿ ಕಚೇರಿ, ಸ್ಥಳೀಯ ಪೊಲೀಸ್ ಠಾಣೆ ಕಚೇರಿ, SIT ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ತನಿಖೆ ಪರಿಶೀಲನೆ ನಡೆಸಿತು.
ಮಾನವ ಹಕ್ಕುಗಳ ಆಯೋಗದ ಹಿರಿಯ ಪೊಲೀಸ್ ಅಧೀಕ್ಷಕ ಯುವರಾಜ್, ಡಿವೈಎಸ್ಪಿ ರವಿ ಸಿಂಗ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಧರ್ಮಸ್ಥಳಕ್ಕೆ ಬಂದಿದ್ದು ಮಾಹಿತಿ ಕಲೆಹಾಕುತ್ತಿದೆ. ದಶಕಗಳ ಕಾಲದ ಅಸಹಜ ಸಾವಿನ ಪ್ರಕರಣಗಳ ದಾಖಲೆಗಳನ್ನು ಸಂಗ್ರಹಿಸಿದೆ. ಪೌರ ಕಾರ್ಮಿಕರು ಮತ್ತಿತರ ಸಂಬಂಧಿತ ವ್ಯಕ್ತಿಗಳಿಂದಲೂ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಇವರ ತನಿಖೆ ನಾಲ್ಕೈದು ದಿನಗಳ ಕಾಲ ನಡೆಯುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವ ಶೋಧ ಕಾರ್ಯಾಚರಣೆ ನಡೆಯುವಲ್ಲಿಗೆ ಬಂದು ಎಸ್ಐಟಿ ತಂಡದ ಬಳಿಯಿಂದಲೂ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ದೇಶಾದ್ಯಂತ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರು ತನಿಖೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
The National Human Rights Commission (NHRC) has officially intervened in the sensational case involving allegations of hundreds of bodies being buried in Dharmasthala, initiating a formal investigation.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm