ಕ್ಯಾಮರಾ ಕಣ್ಣಲ್ಲಿ ಕಂಡ ಕೊರೊನಾ ಸಂಕಷ್ಟ...!!

27-11-20 03:32 pm       Bangalore Correspondent   ಸ್ಪೆಷಲ್ ಕೆಫೆ

ಕೊರೊನಾ ಸೋಂಕು ಜನರನ್ನು ಯಾವ ಪರಿ ಭೀತಿಗೊಳಪಡಿಸಿದೆ ಎನ್ನುವುದರ ಚಿಕ್ಕ ಚಿತ್ರಣ.

ಬೆಂಗಳೂರು, ನವೆಂಬರ್ 27: ಕಳೆದ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಕೊರೊನಾ ಸೋಂಕು ಜನರನ್ನು ಯಾವ ಪರಿ ಭೀತಿಗೊಳಪಡಿಸಿತ್ತು. ಕೊರೊನಾ ಲಾಕ್ಡೌನ್ ಆಗಿ ಜನರು ಯಾವೆಲ್ಲಾ ಕಷ್ಟ ಅನುಭವಿಸಿದ್ದರು ಎನ್ನೋದನ್ನು ಅಂದಿನ ಛಾಯಾಚಿತ್ರಗಳಷ್ಟೇ ಹೇಳಬೇಕು. ಇಡೀ ರಾಜ್ಯದಲ್ಲಿ ಜನರು ಅನ್ನ, ನೀರಿಲ್ಲದೆ ಕಷ್ಟಪಟ್ಟಿದ್ದು, ಅಗತ್ಯ ವಸ್ತುಗಳು ಸಿಗದೆ ಸಾಮಾನ್ಯ ಜನರು ಕಂಗೆಟ್ಟಿದ್ದು, ಕೂಲಿ ಕಾರ್ಮಿಕರು ತಮ್ಮೂರಿಗೆ ತೆರಳಲು ಬವಣೆ ಪಟ್ಟಿದ್ದು, ಊರೇ ಮುಳುಗಿ ಹೋಯ್ತು ಅಂತ ಉತ್ತರ ಭಾರತದ ಕಾರ್ಮಿಕರು ಗುಳೇ ಹೋಗಿದ್ದು ಎಲ್ಲವೂ ಚಿತ್ರವಿಚಿತ್ರ.

ರಾಜ್ಯದೆಲ್ಲೆಡೆಯ ಛಾಯಾಗ್ರಾಹಕರು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಹಿಡಿದಿಟ್ಟ ಚಿತ್ರಗಳೇ ಅಂದಿನ ಮಾರ್ಮಿಕ ಸ್ಥಿತಿಯನ್ನು ಕಟ್ಟಿಕೊಡುತ್ತವೆ. ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಕೋವಿಡ್ 19 ರಾಜ್ಯ ಮಟ್ಟದ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದು, ಥರಾವರಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಛಾಯಾಚಿತ್ರ ಪ್ರದರ್ಶನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ನ.27ರಿಂದ 29ರ ವರೆಗೆ ಪ್ರದರ್ಶನ ಇರಲಿದೆ.