ಸಿಇಟಿ ; ಮೊದಲ ೫೦ರಲ್ಲಿ ೨೦ ರ‍್ಯಾಂಕ್ ಪಡೆದ ಮಂಗಳೂರಿನ ಎಕ್ಸ್ಪರ್ಟ್ ವಿದ್ಯಾರ್ಥಿಗಳು, ಸಂಸ್ಥೆಗೆ ಹೊಸ ಹೆಗ್ಗಳಿಕೆ 

01-08-22 03:41 pm       Mangalore Correspondent   ಕಾಲೇಜು ಕ್ಯಾಂಪಸ್

೨೦೨೨ನೇ ಸಾಲಿನ ಸಿಇಟಿ ಪರೀಕ್ಷೆಯ ಐದು ವಿಭಾಗದ ಮೊದಲ ೧೦ ರ‍್ಯಾಂಕ್‌ಗಳಲ್ಲಿ ೨ ರ‍್ಯಾಂಕ್‌ಗಳನ್ನು ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಮಂಗಳೂರು, ಆಗಸ್ಟ್ ೦೧ : ೨೦೨೨ನೇ ಸಾಲಿನ ಸಿಇಟಿ ಪರೀಕ್ಷೆಯ ಐದು ವಿಭಾಗದ ಮೊದಲ ೧೦ ರ‍್ಯಾಂಕ್‌ಗಳಲ್ಲಿ ೨ ರ‍್ಯಾಂಕ್‌ಗಳನ್ನು ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಮೊದಲ ೫೦ ರ‍್ಯಾಂಕ್‌ನಲ್ಲಿ ೨೦ ರ‍್ಯಾಂಕ್ ಹಾಗೂ ಮೊದಲ ೧೦೦ ರ‍್ಯಾಂಕ್‌ನಲ್ಲಿ ೪೯ ರ‍್ಯಾಂಕ್‌ಗಳನ್ನು ಎಕ್ಸ್ಪರ್ಟ್ ವಿದ್ಯಾರ್ಥಿಗಳು ಪಡೆದಿದ್ದು ಸಂಸ್ಥೆಯ ಹೆಗ್ಗಳಿಕೆಗೆ ಹೊಸ ಗರಿ ಮೂಡಿಸಿದ್ದಾರೆ.

ಮೊದಲ ೧೫೦ರಲ್ಲಿ ೭೮ ರ‍್ಯಾಂಕ್, ಮೊದಲ ೨೦೦ ರ‍್ಯಾಂಕ್‌ಗಳಲ್ಲಿ ೧೦೫, ಮೊದಲ ೩೦೦ ರ‍್ಯಾಂಕ್‌ಗಳಲ್ಲಿ ೧೫೩ ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕಾಲೇಜಿನ ಅದಿತ್ಯಾ ಕಾಮತ್ ಅಮ್ಮೆಂಬಳ ಬಿಎನ್‌ವೈಎಸ್‌ನಲ್ಲಿ ೭, ಪಶು ವೈದ್ಯಕೀಯದಲ್ಲಿ ೧೭, ಬಿ ಫಾರ್ಮಾದಲ್ಲಿ ೩೪ನೇ ರ‍್ಯಾಂಕ್ ಪಡೆದುಕೊಂಡರೆ, ಪ್ರಣವ್ ಎಸ್. ಬಿಎನ್‌ವೈಎಸ್‌ನಲ್ಲಿ ೧೦, ಪಶು ವೈದ್ಯಕೀಯದಲ್ಲಿ ೧೪, ಬಿ ಫಾರ್ಮಾದಲ್ಲಿ ೧೮, ಕೃಷಿಯಲ್ಲಿ ೬೦ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಅದಲ್ಲದೆ ಕಾಲೇಜಿನ ವಿದ್ಯಾರ್ಥಿಗಳಾದ ಮುಹಮ್ಮದ್ ರುಮೈಜ್ ಎಂಜಿನಿಯರಿಂಗ್‌ನಲ್ಲಿ ೨೨, ಅಮರೆ ಗೌಡ ಪಶು ವೈದ್ಯಕೀಯದಲ್ಲಿ ೨೩, ಬಿ ಫಾರ್ಮಾದಲ್ಲಿ ೩೧, ಬಿಎನ್‌ವೈಎಸ್‌ನಲ್ಲಿ ೫೩, ಕೃಷಿಯಲ್ಲಿ ೬೧, ವೃಷಭ್ ವಿ.ಜವಳಿ ಪಶು ವೈದ್ಯಕೀಯ ೨೬, ಬಿ ಫಾರ್ಮಾದಲ್ಲಿ ೩೬, ಬಿಎನ್‌ವೈಎಸ್‌ನಲ್ಲಿ ೪೯, ಅನುಜ್ಞಾ ಕೆ. ಬಿಎನ್‌ವೈಎಸ್‌ನಲ್ಲಿ ೨೯, ಕೃಷಿಯಲ್ಲಿ  ೫೯, ಪಶು ವೈದ್ಯಕೀಯ ೬೨, ಬಿ ಫಾರ್ಮಾ ೯೫, ಸ್ಕಂದ ಶಾನಭಾಗ್ ಪಶು ವೈದ್ಯಕೀಯದಲ್ಲಿ ೨೯, ಬಿ ಫಾರ್ಮಾದಲ್ಲಿ ೩೫, ಕೃಷಿಯಲ್ಲಿ ೯೭, ಪವನ್ ಎಸ್. ಧೂಳಶೆಟ್ಟಿ ಕೃಷಿಯಲ್ಲಿ ೩೦, ಬಿಎನ್‌ವೈಎಸ್‌ನಲ್ಲಿ ೬೮, ಪಶು ವೈದ್ಯಕೀಯದಲ್ಲಿ ೯೧, ವಿಶಾಲ್ ಎಸ್. ಕೃಷಿಯಲ್ಲಿ ೩೯, ಸಾತ್ವಿಕ್ ಎ.ಎಸ್. ಕೃಷಿಯಲ್ಲಿ ೪೦, ಪಶು ವೈದ್ಯಕೀಯದಲ್ಲಿ ೫೦, ಬಿಎನ್‌ವೈಎಸ್‌ನಲ್ಲಿ ೫೨, ಬಿ ಫಾರ್ಮಾದಲ್ಲಿ ೫೯, ಸ್ನೇಹಲ್ ಮಹಿಮಾ ಕ್ಯಾಸ್ಟಲಿನೊ ಕೃಷಿಯಲ್ಲಿ ೪೪, ಬಿಎನ್‌ವೈಎಸ್‌ನಲ್ಲಿ ೮೫ನೇ ಸ್ಥಾನ ಪಡೆದಿದ್ದಾರೆ. 

ಸಂಪತ್ ಎಸ್.ಡಿ. ಪಶು ವೈದ್ಯಕೀಯದಲ್ಲಿ ೪೯, ಬಿಎನ್‌ವೈಎಸ್‌ನಲ್ಲಿ ೫೧, ಬಿ ಫಾರ್ಮಾದಲ್ಲಿ ೬೦, ಅಭಿಷೇಕ್ ಬಿ.ವೈ. ಕೃಷಿಯಲ್ಲಿ ೫೨, ತುಬಾಚಿ ಕೃತಿಕ್ ಚನ್‌ಗೌಡ ಬಿಎನ್‌ವೈಎಸ್‌ನಲ್ಲಿ ೫೭, ಪಶು ವೈದ್ಯಕೀಯದಲ್ಲಿ ೭೩, ಸಮರ್ಥ್ ಎಸ್. ಬೆಟಗೇರಿ ಬಿಎನ್‌ವೈಎಸ್‌ನಲ್ಲಿ ೫೯, ಪಶು ವೈದ್ಯಕೀಯದಲ್ಲಿ ೬೫, ಬಿ ಫಾರ್ಮಾದಲ್ಲಿ  ೮೧, ನಮಿತಾ ಎನ್. ಬಿಎನ್‌ವೈಎಸ್‌ನಲ್ಲಿ ೭೧, ಹಿಮಾಂಶು ಎಲ್. ಕೃಷಿಯಲ್ಲಿ ೭೨, ಸೂರ್ಯದೀಪ್ ಎಸ್. ಕೃಷಿಯಲ್ಲಿ ೮೨, ಬಿಎನ್‌ವೈಎಸ್‌ನಲ್ಲಿ ೯೩, ಭರತ್ ಕುಮಾರ್ ವೈ ರೇವಡಕುಂಡಿ ಕೃಷಿಯಲ್ಲಿ ೮೪, ಯಶಸ್ವಿನಿ ಎಸ್. ಬಾಳಪ್ಪನವರ್ ಬಿಎನ್‌ವೈಎಸ್‌ನಲ್ಲಿ ೮೭, ಪಶು ವೈದ್ಯಕೀಯದಲ್ಲಿ ೯೨, ಅಭಿ ಎಸ್. ಕುಮಾರ್ ಕೃಷಿಯಲ್ಲಿ ೯೦, ದಿಶಾಂತ್ ಕೆ.ಪಶು ವೈದ್ಯಕೀಯದಲ್ಲಿ ೯೮ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಐದು ವಿಭಾಗದ ಮೊದಲ ೧೦೦ ರ‍್ಯಾಂಕ್‌ಗಳಲ್ಲಿ ೪೯ ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಾಂಘಿಕ ಪ್ರಯತ್ನದಿಂದಾಗಿ ಉತ್ತಮ ಫಲಿತಾಂಶ ಬಂದಿದೆ. `ಶ್ರಮ ಏವ ಜಯತೆ' ಎಂಬ ಸಂಸ್ಥೆಯ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ತಿಳಿಸಿದ್ದಾರೆ.

ಸಾಧನೆ ಹಿಂದೆ ಸಂಸ್ಥೆಯ ಕೊಡುಗೆ ಇದೆ 

ಸಿಇಟಿ ಪರೀಕ್ಷೆಯ ಫಲಿತಾಂಶದ ಬಗ್ಗೆ ನಿರೀಕ್ಷೆ ಇತ್ತು. ತಾನು ಈಗಾಗಲೇ ಕೆವಿಪಿವೈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ನೀಟ್ ಪರೀಕ್ಷೆಯಲ್ಲಿ ಫಲಿತಾಂಶದ ಆಧಾರದಲ್ಲಿ ಮುಂದಿನ ಶಿಕ್ಷಣದ ಕುರಿತು ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ. ತನ್ನ ಶೈಕ್ಷಣಿಕ ಸಾಧನೆಯ ಹಿಂದೆ ಪೋಷಕರ ಪ್ರೋತ್ಸಾಹದೊಂದಿಗೆ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಮತ್ತು ಅಧ್ಯಾಪಕರ ಕೊಡುಗೆ ಅಪಾರವಾಗಿದೆ. ಶೈಕ್ಷಣಿಕವಾಗಿ ಸಿದ್ಧಪಡಿಸುವುದರೊಂದಿಗೆ ತನ್ನನ್ನು ಮಾನಸಿಕವಾಗಿಯೂ ಬಲಪಡಿಸಿದ್ದಾರೆ. ನಿಜಕ್ಕೂ ಇದಕ್ಕಾಗಿ ನಾನು ಎಕ್ಸ್ಪರ್ಟ್ ಸಂಸ್ಥೆಯ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ಬಿಎನ್‌ವೈಎಸ್‌ನಲ್ಲಿ ೭ನೇ ರ‍್ಯಾಂಕ್ ಪಡೆದ ಆದಿತ್ಯಾ ಕಾಮತ್ ಅಮ್ಮೆಂಬಳ.

Students of Expert Pre University College have bagged twenty ranks out of first 50 ranks in the CET examinations held in 2022. Out of first 10 ranks in the five divisions, two are bagged by Expert PU college students. They have secured 20 ranks out of the first 50 and 49 ranks out of the first 100 ranks.They have secured 78 ranks in the first 150 ranks, 105 in the first 200 ranks and 153 ranks of the first 300 ranks.Aditya Kamath Ammembal has secured 7th rank in BNYS, 17th rank in veterinary science, 34th rank in B Pharma; Pranav S has secured 10th rank in BNYS, 14th rank in veterinary science, 18th rank in B Pharma and 60th rank in agriculture.