ಬ್ರೇಕಿಂಗ್ ನ್ಯೂಸ್
06-11-26 08:08 pm HK News Desk ಕ್ರೈಂ
ಮಂಗಳೂರು, ನ.6: ನಗರದ ನೆಹರು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬೆದರಿಸಿ ಹೊಯ್ಸಳ ವಾಹನದಲ್ಲಿದ್ದ ಪೊಲೀಸ್ ಸಿಬಂದಿಯೇ ಹಣ ಸುಲಿಗೆ ಮಾಡಿದ ಘಟನೆ ನಡೆದಿದ್ದು ಪಾಂಡೇಶ್ವರ ಠಾಣೆಯ ಮೂವರು ಸಿಬಂದಿ ವಿರುದ್ಧ ಅದೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ ಬಂಧನಕ್ಕೀಡಾದ ಪ್ರಸಂಗ ನಡೆದಿದೆ.
ಬಾಗಲಕೋಟ ಮೂಲದ ಈರಣ್ಣ ಬೆನ್ನಿ, ಸುಳ್ಯ ಮೂಲದ ಉಮಾನಾಥ ಮತ್ತು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಶಿವರಾಜ್ ಬಂಧನಕ್ಕೀಡಾದ ಪೊಲೀಸರು. ವಿಟ್ಲ ಮುಡ್ನೂರು ಗ್ರಾಮದ ನಿವಾಸಿ, ಪ್ರಸ್ತುತ ಪಾಂಡೇಶ್ವರದಲ್ಲಿ ಬಾಡಿಗೆ ಮನೆಯಲ್ಲಿರುವ, ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿರುವ ವ್ಯಕ್ತಿಯ ದೂರಿನಂತೆ ಕ್ರಮ ಜರುಗಿಸಲಾಗಿದೆ.
ಇವರು ಕಳೆದ ಆಗಸ್ಟ್ 25ರಂದು ರಾತ್ರಿ ವಾಕಿಂಗ್ ಮಾಡುತ್ತಿದ್ದಾಗ ಹೊಯ್ಸಳ ವಾಹನದಲ್ಲಿ ಬಂದ ಈರಣ್ಣ ಬೆನ್ನಿ ಮತ್ತು ಶಿವರಾಜ್ ಹಣ ಕೇಳಿದ್ದು ಮೊಬೈಲ್ ಕಸಿದು ಅದರ ಕವರಿನಲ್ಲಿದ್ದ 300 ರೂ. ತೆಗೆದುಕೊಂಡು ಇನ್ನು ಈ ಕಡೆಗೆ ಬರಬೇಡ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳಿಸಿದ್ದಾರೆ. ಎರಡು ದಿನಗಳ ಬಳಿಕ ಅದೇ ಭಾಗದಲ್ಲಿ ವಾಕಿಂಗ್ ಮಾಡುತ್ತಿದ್ದ ಇದೇ ವ್ಯಕ್ತಿಯನ್ನು ತಡೆದು ಬೈಕ್ ಕೀ ಮತ್ತು ಅವರ ಕೈಯಲ್ಲಿದ್ದ ಎಟಿಎಂ ಕಿತ್ತುಕೊಂಡಿದ್ದಾರೆ. ಅದರಲ್ಲಿ ಹಣ ಇಲ್ಲ ಎಂದಾಗ ಬಲವಂತವಾಗಿ ಎಟಿಎಂ ಕಡೆಗೆ ಕರೆದೊಯ್ದು ಎರಡು ಸಾವಿರ ರೂ. ಡ್ರಾ ಮಾಡಿಸಿ ಹಣ ಕಿತ್ತುಕೊಂಡಿದ್ದಾರೆ. ಹಣ ನೀಡದೇ ಇದ್ದಲ್ಲಿ ಕೇಸು ಮಾಡಿ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ.
ಮತ್ತೆ ಅದೇ ಈರಣ್ಣ ಮತ್ತು ಶಿವರಾಜ್ ಎಂಬವರು ನ.4ರಂದು ರಾತ್ರಿ ವಾಕಿಂಗ್ ಮಾಡುತ್ತಿದ್ದಾಗ ವ್ಯಕ್ತಿಯನ್ನು ತಡೆದು ಮೊಬೈಲ್ ಫೋನ್ ಮತ್ತು ಬೈಕ್ ಕೀಯನ್ನು ಪಡೆದು ಬಲಾತ್ಕಾರವಾಗಿ ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ, ನೀನು ಫೈನ್ ಕಟ್ಟದಿದ್ದರೆ ಬಿಡೋದಿಲ್ಲ ಎಂದು ಹೇಳಿ ಪಾಂಡೇಶ್ವರ ಕಡೆಗೆ ಕರೆದೊಯ್ದು ದಬಾಯಿಸಿದ್ದಾರೆ. ಬಳಿಕ ಅದೇ ಸ್ಥಳದಲ್ಲಿ ಬಿಟ್ಟು ನಾಳೆ ಪೊಲೀಸ್ ಠಾಣೆಗೆ ಬಾ ಎಂದು ಗದರಿಸಿ, ಬೈಕನ್ನು ಪೊಲೀಸ್ ಸಿಬಂದಿ ಶಿವರಾಜ್ ಚಲಾಯಿಸಿಕೊಂಡು ಹೋಗಿದ್ದಾರೆ. ಬಳಿಕ ರಾತ್ರಿ 10.30ರ ವೇಳೆಗೆ ಉಮಾನಾಥ ಎಂಬ ಮತ್ತೊಬ್ಬ ಸಿಬಂದಿ ಕರೆ ಮಾಡಿ ಬೈಕ್ ತೆಗೆದುಕೊಂಡು ಬಂದು ಇವರಲ್ಲಿ ಹಣ ಕೇಳಿದ್ದಾರೆ. ಈ ಬಗ್ಗೆ ವ್ಯಕ್ತಿಯ ದೂರಿನಂತೆ ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದಾರೆ.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
05-11-26 09:42 pm
HK News Desk
ಬೆಂಗಳೂರಿನಿಂದ LSD ಡ್ರಗ್ಸ್ ಸಪ್ಲೈ: ಮಂಗಳೂರಿನ ವಿದ...
05-11-26 03:23 pm
ಕುಮಾರಧಾರಾ ನದಿಗೆ ಹಾರಿದ ಮಹಿಳೆ ಮೊಸಳೆ ನೋಡಿ ದುರಂತದ...
05-11-26 02:07 pm
‘ಎಸ್ಐಆರ್ ಬಗ್ಗೆ ಸುಳ್ಳು ಹೇಳಿ ದೇಶದಲ್ಲಿ ಅರಾಜಕತೆ ಸ...
04-11-26 10:30 pm
ಸಿಡಿಪಿ ಹೆಸರಲ್ಲಿ ಮುಡಾದಿಂದ ಕರಾಳ ನಿಯಮ, ಸಾಮಾನ್ಯ ಮ...
04-11-26 10:12 pm
06-11-26 08:08 pm
HK News Desk
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am
Mangalore, Veerendra Shetty: ಜಾಗದ ವಿಚಾರದಲ್ಲಿ...
05-11-26 10:45 pm
ಬಾಳೆಕುದ್ರು ಮಠದ ಸಾವಿರಾರು ವರ್ಷ ಹಿನ್ನೆಲೆಯ ವಿಗ್ರಹ...
05-11-26 07:51 pm