ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ; ನೀಲಣ್ಣವರ್ ಮಾದರಿಯಲ್ಲೇ ತಿಂಗಳಿಗೆ 3 ಶೇ. ಬಡ್ಡಿ ಆಮಿಷ, ನೂರಾರು ಕೋಟಿ ಪೀಕಿಸಿ ತಾಯಿ- ಮಗ ಎಸ್ಕೇಪ್

26-11-26 02:48 pm       HK News Staffer   ಕ್ರೈಂ

ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಶಿವಾನಂದ ನೀಲಣ್ಣವರ್ ವಂಚನೆ ಮಾದರಿಯಲ್ಲೇ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಂದ ನೂರಾರು ಕೋಟಿ ಸಂಗ್ರಹಿಸಿ ತಾಯಿ-ಮಗ ವಂಚನೆ ನಡೆಸಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ನಿಪ್ಪಾಣಿಯಲ್ಲಿ ಪ್ರಕರಣ ದಾಖಲಾಗಿದೆ. ‌

ಬೆಳಗಾವಿ, ನ.26: ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಶಿವಾನಂದ ನೀಲಣ್ಣವರ್ ವಂಚನೆ ಮಾದರಿಯಲ್ಲೇ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಂದ ನೂರಾರು ಕೋಟಿ ಸಂಗ್ರಹಿಸಿ ತಾಯಿ-ಮಗ ವಂಚನೆ ನಡೆಸಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ನಿಪ್ಪಾಣಿಯಲ್ಲಿ ಪ್ರಕರಣ ದಾಖಲಾಗಿದೆ. ‌

ನಿಪ್ಪಾಣಿ ಮೂಲದ ನಂದಾ ಪಾಟೀಲ್, ಪುತ್ರ ಪ್ರಸಾದ್ ಪಾಟೀಲ್‌ ಪ್ರಮುಖ ಆರೋಪಿಗಳು. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕಚೇರಿಗಳನ್ನ ತೆರೆದಿದ್ದ ಆರೋಪಿಗಳು ನಂದಾ ಟ್ರೇಡರ್ಸ್, ಲೂನಾರ್ಸ್ ಎಜುಕೇಷನ್ ಆ್ಯಂಡ್ ಟ್ರೈನಿಂಗ್‌ ಮತ್ತು ಸೊಲ್ಯುಷನ್ ಪ್ರೈವೇಟ್‌ ಲಿಮಿಟೆಡ್ ಹೆಸರಿನಲ್ಲಿ ಹೂಡಿಕೆ ಮಾಡಿಸಿಕೊಳ್ತಿದ್ದರು ಎಂದು ದೂರು ದಾಖಲಾಗಿದೆ. 

ಶಿವಾನಂದ ನೀಲಣ್ಣನವರನ ಶಿವಂ ಅಸೋಸಿಯೇಟ್ಸ್ ಜೊತೆ ಕೆಲಸ ಮಾಡುತ್ತಿದ್ದ ನಂದಾ ಪಾಟೀಲ್ ಆತನ ಜೊತೆಗೆ ವ್ಯಾವಹಾರಿಕ ಮನಸ್ತಾಪದಲ್ಲಿ ಹೊರ ಬಂದಿದ್ದರು. ಆಬಳಿಕ ಅದೇ ಮಾದರಿಯಲ್ಲಿ ತನ್ನದೇ ಕಂಪನಿ ಆರಂಭಿಸಿದ್ದು 1 ಲಕ್ಷ ಹೂಡಿದ್ರೆ ಮಾಸಿಕ ಶೇ.3ರಷ್ಟು ಬಡ್ಡಿ ನೀಡುವ ಆಮಿಷದಲ್ಲಿ ಜನರಿಂದ ಹೂಡಿಕೆ ಮಾಡಿಸುತ್ತಿದ್ದರು. ಬಳಿಕ ಬಡ್ಡಿ ಹಣವನ್ನು ನೀಡದೆ ಅಸಲು ಹಣ ಕೇಳಿದರೆ ಧಮ್ಕಿ ಹಾಕಿ ಬಾಯಿ ಮುಚ್ಚಿಸುತ್ತಿದ್ದರು. ಜನರ ಹೂಡಿಕೆ ಹಣದಲ್ಲಿ ಜಮೀನು, ಆಸ್ತಿ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. 

ಇವರ ಮಾತು ನಂಬಿ ಹೂಡಿಕೆ ಮಾಡಿದವರಲ್ಲಿ ಮಹಾರಾಷ್ಟ್ರದ‌ ನಾಸಿಕ್ ಜಿಲ್ಲೆಯ ಜನರೇ ಹೆಚ್ಚು. ವಂಚನೆ ಸಂಬಂಧಿಸಿ ನಂದಾ ಪಾಟೀಲ್, ಪ್ರಸಾದ್, ಸೌರಬ್ ಮಾಳಿ ಸೇರಿ 12 ಜನರ ವಿರುದ್ಧ ನಿಪ್ಪಾಣಿಯ ಬಸವೇಶ್ವರ ಪೋಲಿಸ್ ಚೌಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೇಸು ದಾಖಲಾಗುತ್ತಿದ್ದಂತೆ ಆರೋಪಿಗಳು ಊರು ಬಿಟ್ಟು ಪರಾರಿಯಾಗಿದ್ದಾರೆ.