ಬ್ರೇಕಿಂಗ್ ನ್ಯೂಸ್
26-11-26 03:53 pm HK News Staffer ಕರಾವಳಿ
ಮಂಗಳೂರು, ನ.26: ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ಹಿನ್ನೆಲೆಯಲ್ಲಿ ಎಸ್ಐಟಿ ಕಚೇರಿಗೆ ಆಗಮಿಸಿದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ತನ್ನಲ್ಲಿರುವ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಹಲವು ದಾಖಲೆಗಳು, ಪೆನ್ ಡ್ರೈವ್ ನಲ್ಲಿ ಸಾಕ್ಷ್ಯಗಳನ್ನು ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
'ತನಿಖೆ ನಡೆಯುತ್ತಿದೆ ಏನು ಕೊಟ್ಟಿದ್ದೇವೆ, ಏನು ಕೇಳಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಎಸ್ಐಟಿ ಅಧಿಕಾರಿಗಳು ಇನ್ನೂ ಕೂಡ ಮಾಹಿತಿಯನ್ನು ಕೇಳಿದ್ದಾರೆ. ತನಿಖೆಗೆ ಸಂಬಂಧಿಸಿದಂತೆ ದಾಖಲೆ, ಪೆನ್ ಡ್ರೈವ್ ಅನ್ನು SIT ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಸೌಜನ್ಯಾ ಪ್ರಕರಣ ಆಗಿ 14 ವರ್ಷ ಆಗಿದೆ, ಮೂರು ತಿಂಗಳಲ್ಲಿ ಮುಗಿಸುವುದು ಹೇಳಿದ್ರೆ ಹೇಗೆ? ಕೋರ್ಟ್ ಹೇಳಿದ್ದಕ್ಕೆ ಪೂರಕವಾಗಿ ಪ್ರಯತ್ನ ಮಾಡುತ್ತಿದ್ದಾರೆ.
ಈ ಪ್ರಕರಣದಲ್ಲಿ ಸ್ವಲ್ಪ ಆಳಕ್ಕೆ ಹೋಗಬೇಕಾಗಿದೆ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಗೊತ್ತಿಲ್ಲ. ಸುಪ್ರೀಂ ಕೋರ್ಟ್ ನಮಗೆ ದೇವರು ಇದ್ದಾಗೆ. ಸಿಐಡಿ, ಸಿಬಿಐ , ರಾಜಕೀಯ ವ್ಯಕ್ತಿಗಳ ಮುಖಕ್ಕೆ ಸುಪ್ರೀಂ ಕೋರ್ಟ್ ಮಂಗಳಾರತಿ ಮಾಡಿದೆ. ಸಾಕ್ಷಿ ನಾಶ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಉಳಿದ ಸಾಕ್ಷಿಗಳನ್ನ ಇನ್ನು ಹುಡುಕಬೇಕು. ಅದು ಅಷ್ಟು ಸುಲಭದ ವಿಚಾರ ಅಲ್ಲ. ಆದ್ರೆ ಖಂಡಿತವಾಗಿಯೂ ಹುಡುಕಿಯೇ ಹುಡುಕುತ್ತಾರೆ.
ಎಸ್ಐಟಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಆದ್ರಿಂದ ಇಷ್ಟೇ ದಿನಕ್ಕೆ ತನಿಖೆ ಮುಗಿಸಬೇಕು ಅಂತ ಹೇಳೋಕೆ ಆಗಲ್ಲ. ನಾನು ನೇರವಾಗಿ ಹೇಳುತ್ತೇನೆ, ನಮಗೆ ರಾಜ್ಯದ ಮುಖ್ಯಮಂತ್ರಿಗಳೇ ನ್ಯಾಯ ಕೊಡಬೇಕು. ಯಾಕಂದ್ರೆ ಅವರು ಡಿಸಿಎಂ ಇರುವಾಗ ಹೇಳಿದ್ದಾರೆ. ನನ್ನಂತ ಸಾವಿರ ಡಿಕೆ ಶಿವಕುಮಾರ್ ನಿಮ್ಮ ಜೊತೆ ಇದ್ದಾರೆ ಎಂದು. ಯಾರಿಗೆ ಹೇಳಿದ್ದಾರೆ ಎಂದು ಎಲ್ಲರಿಗೆ ಗೊತ್ತಿದೆ. ಆದ್ದರಿಂದ ನಾನು ಜಾಸ್ತಿ ಹೇಳಲು ಹೋಗಲ್ಲ.
ಮಾದ್ಯಮಗಳಲ್ಲಿ ನೋಡುತ್ತಿರುವ ಹಾಗೆ ಸಾಕ್ಷಿಗಳು ಬರುತ್ತಿದ್ದಾರೆ. ಇನ್ನು ಗೌಪ್ಯವಾಗಿ ಅನೇಕ ಸಾಕ್ಷಿಗಳು ಬಂದಿರಬಹುದು. ನಾವು ಒಂದಷ್ಟು ಸಾಕ್ಷಿಗಳನ್ನ ಕೊಡುತ್ತೇವೆ, ವಿಥ್ ರೆಕಾರ್ಡ್ ಕೊಡುತ್ತೇವೆ. ಮುಂದಿನ ದಿನಗಳಲ್ಲಿಯೂ ನನ್ನನ್ನು ಕರೆದಿದ್ದಾರೆ. ಎಲ್ಲಾ ಸಹಕಾರ ಕೊಡುತ್ತೇನೆ ಎಂದು ಮಹೇಶ್ ಶೆಟ್ಟಿ ತಿಮರೊಡಿ ಹೇಳಿದರು.
ಸೌಜನ್ಯಾ ಹೋರಾಟಕ್ಕೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬೆಂಬಲಿಸಿರುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಕಲ್ಲಡ್ಕ ಪ್ರಭಾಕರ ಭಟ್ ಸನಾತನ ಹಿಂದೂ ಧರ್ಮದ ತಿಜೋರಿ ಇದ್ದಹಾಗೆ. ಇದರಲ್ಲಿ ನಾವು ಯಾರನ್ನು ಜೋಡಿಸುವುದಿಲ್ಲ. ಧರ್ಮಸ್ಥಳದ ಅಣ್ಣಪ್ಪ, ಮಂಜುನಾಥ ಸ್ವಾಮಿಬ
ಜೋಡಿಸ್ತಾರೆ. ನಾವು ಎಲ್ಲರೂ ನಿಮಿತ್ತ ಮಾತ್ರ. ಎಲ್ಲಾ ಪುರಾಣದಲ್ಲಿಯೂ ತಾಯಂದಿರಿಂದ ಧರ್ಮ ಸ್ಥಾಪನೆ ಆಗಿದ್ದು. ಧರ್ಮಸ್ಥಳದಲ್ಲಿಯೂ ಸೌಜನ್ಯಾ ಎಂಬ ತಾಯಿಯಿಂದ ಧರ್ಮ ಸ್ಥಾಪನೆ ಆಗಲಿದೆ ಎಂದು ಮಹೇಶ್ ತಿಮರೋಡಿ ಹೇಳಿದರು.
25-11-26 07:48 pm
HK News Staffer
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
ಬಿಸ್ಲೆರಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ;...
23-11-26 09:23 pm
25-11-26 11:53 am
HK News Staffer
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
26-11-26 03:53 pm
HK News Staffer
ಬ್ರಹ್ಮರಕೂಟ್ಲು ಟೋಲ್ ಕೇಂದ್ರಕ್ಕೆ ಎಸ್ಡಿಪಿಐ ಮುತ್ತಿ...
26-11-26 03:03 pm
ಹಾಸನ ಪೊಲೀಸರು ಮಾಧ್ಯಮದವ್ರಿಗೆ ನೋಟಿಸ್ ನೀಡಿದ್ದರಲ್ಲ...
25-11-26 06:58 pm
ಸೌಜನ್ಯಾ ಪ್ರಕರಣ ಅತ್ಯಂತ ಸೂಕ್ಷ್ಮ ; ವೈಜ್ಞಾನಿಕ ಆಧಾ...
25-11-26 06:29 pm
ತಣ್ಣೀರುಬಾವಿ ಬೀಚ್ ನಲ್ಲಿ ದೇಶದ ಮೊದಲ ಡೇಟಾ ಸೆಂಟರ್...
25-11-26 05:49 pm
26-11-26 02:48 pm
HK News Staffer
ದುಬೈನಿಂದ ಚಿನ್ನ ಸ್ಮಗ್ಲಿಂಗ್ ; ಶೌಚಾಲಯದಲ್ಲಿ ಬಚ್ಚಿ...
26-11-26 01:01 pm
ಒಂದು ಟೀ ಶರ್ಟ್ ಕೊಂಡರೆ ಐ-ಫೋನ್ ಗಿಫ್ಟ್ ! ಶ್ರೀನಿವಾ...
25-11-26 01:30 pm
ಕಾಪು ಬೀಚ್ ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿದ ದಾವಣ...
23-11-26 02:24 pm
ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ...
23-11-26 11:59 am