ಬ್ರೇಕಿಂಗ್ ನ್ಯೂಸ್
28-11-26 04:10 pm HK News Staffer ಕರಾವಳಿ
ಮಂಗಳೂರು, ನ.28: ಮುಖ್ಯಮಂತ್ರಿ ಜಪಾನ್ ಸ್ಪೀಡ್ ರೈಲಿನಲ್ಲಿ ಕುಳಿತು ಆಶಾ ಕಾರ್ಯಕರ್ತೆಯರ ವಿರುದ್ದ ದರ್ಪ ತೋರಿದ್ದಾರೆ. ಮನೆಗೆ ತೆರಳುವಂತೆ ಹೇಳಿ ದರ್ಪ ತೋರಿದ್ದಾರೆ. ಮಂತ್ರಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಇರೋದು ಹುಚ್ಚು ಸರ್ಕಾರ. ಯಾರ್ಯಾರ ತಲೆ ಒಡಿತಾರೋ ಗೊತ್ತಿಲ್ಲ. ಆರೋಗ್ಯ ಸಚಿವ ಯುಟಿ ಖಾದರ್ ಮಾತಿನ ಮೇಲೆ ಹಿಡಿತ ಇಟ್ಕೋಬೇಕು. ಯು.ಟಿ ಖಾದರ್ ಇಲ್ಲದಿದ್ದರೂ ಈ ರಾಜ್ಯ ನಡೆಯುತ್ತೆ. ಸಚಿವ ಯುಟಿ ಖಾದರ್ ಅವರ ಅನಿವಾರ್ಯತೆ ರಾಜ್ಯಕ್ಕೇನೂ ಇಲ್ಲ ಎಂದು ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ರಾಜ್ಯ ಸರಕಾರದ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಬೇರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ನರೇಂದ್ರ ಸ್ವಾಮಿ ತಮ್ಮ ಮಾತಿನ ಮೇಲೆ ಹಿಡಿತ ಇಟ್ಕೊಳ್ಳಲಿ. ಆಶಾ ಕಾರ್ಯಕರ್ತೆಯರು ತಮ್ಮ ಹೋರಾಟ ಮುಂದುವರಿಸಬೇಕು. ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಲಿದೆ. ಅಕ್ಕ -ತಂಗಿಯರಂತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಕೈಜೋಡಿಸಲಿವೆ. ಅವರ ಪರವಾಗಿ ನಾವು ಕೂಡ ಹೋರಾಟ ಆರಂಭಿಸಲಿದ್ದು ಜೈಲಿಗೆ ಹೋಗಲು ಸಿದ್ದರಿದ್ದೇವೆ.
ಮಹಿಳೆಯರ ಈ ಹೋರಾಟ 2028ರ ಚುನಾವಣೆಗೆ ದಿಕ್ಸೂಚಿ ಆಗಬೇಕು. ಈ ಸರಕಾರದಲ್ಲಿ ಜೈಲಿಗೆ ಹೋಗ ಬೇಕಾದವರಿಗೂ ಕ್ಲೀನ್ ಚಿಟ್ ನೀಡಲಾಗುತ್ತಿದೆ ಎಂದು ದೂರಿದರು. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜಪಾನ್ ಗೆ ತೆರಳಿ ಉದ್ಯಮಿಗಳನ್ನು ರಾಜ್ಯಕ್ಕೆ ಆಹ್ವಾನಿಸಿದ್ದಾರೆ. ಇಲ್ಲಿಯ ಜಮೀನು, ನೀರು, ಕರೆಂಟ್, ಮೂಲಭೂತ ಸೌಕರ್ಯ ಒದಗಿಸೋದಾಗಿ ಹೇಳಿದ್ದಾರೆ. ಆದರೆ ರಾಜ್ಯಕ್ಕೆ ಬರುವ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡಿಲ್ಲ. ಕಳೆದ 25 ವರ್ಷದಲ್ಲಿ ಕೈಗಾರಿಕೆಗಳಿಗೆ ನೀಡಿರುವ ಜಮೀನುಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಕೈಗಾರಿಕೆ, ಜಮೀನು ಮಾಹಿತಿ ಒಳಗೊಂಡ ಸಮಗ್ರ ಶ್ವೇತಪತ್ರವನ್ನು ಸರ್ಕಾರ ಕೂಡಲೇ ಹೊರಡಿಸಬೇಕು. ಜಮೀನು ನೀಡುವಾಗ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ನೀಡಿದ್ದ ಭರವಸೆಗಳು ಈಡೇರಿಲ್ಲ. ಹಿಂದಿನ ಸರ್ಕಾರಗಳು ನೀಡಿದ್ದ ಭರವಸೆಗಳು ಮತ್ತು ಯೋಜನೆಗಳು ಕಾಗದದ ಮೇಲೆ ಮಾತ್ರ ಉಳಿದಿವೆ. ರಾಜ್ಯ ಸರ್ಕಾರದ ನಿಯೋಗಗಳು ವಿದೇಶಗಳಿಗೆ ತೆರಳಿ, ಅಲ್ಲಿ ಉದ್ಯಮಗಳನ್ನು ಆಹ್ವಾನಿಸುತ್ತವೆ. ಆದರೆ, ಆ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರ ಬಂದಾಗ ಮಾತ್ರ ಸರ್ಕಾರ ಮೌನವಾಗುತ್ತದೆ. ಇದು ಕನ್ನಡಿಗರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ. ರಾಜ್ಯದ ಸಂಪನ್ಮೂಲ ಬಳಸಿಕೊಂಡು ಬೆಳೆಯುವ ಕಂಪನಿಗಳು, ಮೊದಲು ಇಲ್ಲಿನ ಮಕ್ಕಳಿಗೆ ಉದ್ಯೋಗ ನೀಡಬೇಕು. ಅದನ್ನು ಖಾತ್ರಿಪಡಿಸದೇ ಜಮೀನು ನೀಡುವುದು ಕನ್ನಡಿಗರ ಹಿತಕ್ಕೆ ವಿರುದ್ಧವಾಗಿದೆ ಎಂದು ವಾಟಾಳ್ ಹೇಳಿದರು.
26-11-26 08:34 pm
HK News Staffer
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
28-11-26 04:08 pm
HK News Staffer
ಇಸ್ರೇಲ್ ನಲ್ಲಿ ಮಂಗಳೂರಿನ ಯುವಕ ನಿಗೂಢ ಸಾವು ; ಕೊಲೆ...
25-11-26 11:53 am
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
28-11-26 04:10 pm
HK News Staffer
ಡಿ.25ರಿಂದ ಮಂಗಳೂರಿನಲ್ಲಿ ಮೂರು ದಿನಗಳ ‘ವಿಶ್ವ ಕೌಶಲ...
28-11-26 08:54 am
ಧರ್ಮಸ್ಥಳ ಅಸಹಜ ಸಾವು ಪ್ರಕರಣ ; ಎಸ್ಐಟಿ ವರದಿಯನ್ನು...
27-11-26 06:23 pm
ಬೋಳೂರು - ಬೆಂಗ್ರೆ ಸೇತುವೆ ಕಾಮಗಾರಿ ; ಕ್ರೇನ್ ಸಹಿತ...
27-11-26 12:28 pm
ಮಂಗಳೂರು - ಬೆಂಗಳೂರು ವಾಹನ ಸಂಚಾರಕ್ಕೆ ಮತ್ತೊಂದು ಹೊ...
26-11-26 09:00 pm
28-11-26 02:42 pm
HK News Staffer
ವಿಟ್ಲದಲ್ಲಿ ಪತ್ನಿಯನ್ನು ಹತ್ಯೆಗೈದು ಹೃದಯಾಘಾತದ ಕತೆ...
27-11-26 03:14 pm
ಗೂಗಲ್ನಲ್ಲಿ ಹುಡುಕಾಡಿ ತುಂಗಾ ನದಿಗೆ ಸ್ನಾನಕ್ಕಿಳಿದ...
26-11-26 08:35 pm
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm