ಬ್ರೇಕಿಂಗ್ ನ್ಯೂಸ್
27-11-26 12:28 pm HK News Staffer ಕರಾವಳಿ
ಮಂಗಳೂರು, ನ.27: ಬೋಳೂರಿನ ಮೀನುಗಾರಿಕಾ ದಕ್ಕೆ ಬಳಿಯಿಂದ ತಣ್ಣೀರುಬಾವಿ- ಬೆಂಗ್ರೆ ಕಡೆಗೆ ಸಂಪರ್ಕಿಸುವ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸೇತುವೆ ಪಿಲ್ಲರ್ ಗೆ ಕಾಂಕ್ರೀಟ್ ಸ್ಲ್ಯಾಬ್ ಜೋಡಿಸುತ್ತಿದ್ದಾಗ ಜಾರಿ ಬಿದ್ದ ಘಟನೆ ನಡೆದಿದ್ದು ಕೆಳಗೆ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್ ಜಖಂ ಆಗಿದೆ. ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಕಾಮಗಾರಿ ಭರದಿಂದ ನಡೆಯುತ್ತಿದ್ದು ಮುಗ್ರೋಡಿ ಕನ್ ಸ್ಟ್ರಕ್ಷನ್ನವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ ಪಿಲ್ಲರ್ ಹಾಕಲಾಗಿದ್ದು ಅದರ ಮೇಲಿನಿಂದ ಕಾಂಕ್ರೀಟ್ ಸ್ಲ್ಯಾಬ್ ಜೋಡಣೆ ಕಾರ್ಯ ಆಗುತ್ತಿದೆ. ಈ ವೇಳೆ, ಆಯತಪ್ಪಿ ಸ್ಲ್ಯಾಬ್ ಜಾರಿದ್ದು ಕ್ರೇನ್ ಸಹಿತ ನದಿ ನೀರಿಗೆ ಬಿದ್ದಿದೆ. ಹರೀಶ್ ಎಂಬವರಿಗೆ ಸೇರಿದ ಬೋಟನ್ನು ಸೇತುವೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಅದರಲ್ಲಿ ಯಾವುದೇ ಕಾರ್ಮಿಕರು ಇಲ್ಲದ ಕಾರಣ ಅನಾಹುತ ತಪ್ಪಿದೆ.








ಸ್ಥಳದಲ್ಲಿದ್ದ ಇಬ್ಬರು ಕ್ರೇನ್ ಕಾರ್ಮಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಳೂರು ಕಡೆಯಿಂದ ಬೆಂಗ್ರೆ- ತಣ್ಣೀರುಬಾವಿ ಕಡೆಗೆ ನೇರ ವಾಹನ ಸಂಚಾರಕ್ಕಾಗಿ ಸೇತುವೆ ನಿರ್ಮಿಸಲಾಗುತ್ತಿದ್ದು ಇದು ಪೂರ್ಣಗೊಂಡರೆ ತಣ್ಣೀರುಬಾವಿಗೆ ಕುಳೂರು ಮೂಲಕ ಸುತ್ತಿಬಳಸಿ ಸಾಗುವ ಅನಿವಾರ್ಯತೆ ತಪ್ಪಲಿದೆ. ಇದೇ ಮಾರ್ಚ್ ಒಳಗಡೆ ಇದರ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
26-11-26 08:34 pm
HK News Staffer
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
25-11-26 11:53 am
HK News Staffer
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
27-11-26 12:28 pm
HK News Staffer
ಮಂಗಳೂರು - ಬೆಂಗಳೂರು ವಾಹನ ಸಂಚಾರಕ್ಕೆ ಮತ್ತೊಂದು ಹೊ...
26-11-26 09:00 pm
ಎಸ್ಐಟಿ ಕಚೇರಿಗೆ ಮಹೇಶ್ ಶೆಟ್ಟಿ ತಿಮರೋಡಿ ದಾಖಲೆ ಸಲ್...
26-11-26 03:53 pm
ಬ್ರಹ್ಮರಕೂಟ್ಲು ಟೋಲ್ ಕೇಂದ್ರಕ್ಕೆ ಎಸ್ಡಿಪಿಐ ಮುತ್ತಿ...
26-11-26 03:03 pm
ಹಾಸನ ಪೊಲೀಸರು ಮಾಧ್ಯಮದವ್ರಿಗೆ ನೋಟಿಸ್ ನೀಡಿದ್ದರಲ್ಲ...
25-11-26 06:58 pm
26-11-26 08:35 pm
HK News Staffer
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm
ದುಬೈನಿಂದ ಚಿನ್ನ ಸ್ಮಗ್ಲಿಂಗ್ ; ಶೌಚಾಲಯದಲ್ಲಿ ಬಚ್ಚಿ...
26-11-26 01:01 pm
ಒಂದು ಟೀ ಶರ್ಟ್ ಕೊಂಡರೆ ಐ-ಫೋನ್ ಗಿಫ್ಟ್ ! ಶ್ರೀನಿವಾ...
25-11-26 01:30 pm