Thirthahalli, journalist attack, police: ಪತ್ರಕರ್ತನ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್‌ ಹಲ್ಲೆ ; ಮೊಬೈಲ್ ಕಸಿದು ವೀಡಿಯೋ ಡಿಲೀಟ್‌ ಮಾಡುವಂತೆ ಧಮ್ಕಿ, ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಧರಣಿ 

21-08-24 09:08 pm       HK News Desk   ಕರ್ನಾಟಕ

ಪತ್ರಕರ್ತರೊಬ್ಬರ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್‌ ಹಲ್ಲೆ ನಡೆಸಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲ್ಲೂಕಿನ ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರ ನಿರಂಜನ್ ಹಲ್ಲೆಗೊಳಗಾದವರು.

ಶಿವಮೊಗ್ಗ, ಆ 21: ಪತ್ರಕರ್ತರೊಬ್ಬರ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್‌ ಹಲ್ಲೆ ನಡೆಸಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲ್ಲೂಕಿನ ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರ ನಿರಂಜನ್ ಹಲ್ಲೆಗೊಳಗಾದವರು.

ತೀರ್ಥಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಎಸ್ಪಿ ಭೇಟಿ ನೀಡಿದ್ದು, ವಿಚಾರಣೆ ಬಳಿಕ ಸ್ಟೇಷನ್‌ಗೆ ತೆರಳುವ ದಾರಿಯಲ್ಲಿ ಜನಸಂದಣಿ ನಿಯಂತ್ರಿಸುವ ಭರಾಟೆಯಲ್ಲಿ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಎಂಬ ಪೊಲೀಸ್‌ ಅಧಿಕಾರಿ ಸಾರ್ವಜನಿಕರಿಗೆ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಈ ವೇಳೆ ಇದನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಪತ್ರಕರ್ತ ವಿ.ನಿರಂಜನ್ ಮೇಲೆ ಇನ್ಸ್ ಪೆಕ್ಟರ್ ಹಲ್ಲೆಗೆ ಯತ್ನಿಸಿದ್ದಾರೆ. 

ಬಳಿಕ ಬಲವಂತವಾಗಿ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್‌ ಮಾಡುವಂತೆ ಇನ್ಸ್‌ಪೆಕ್ಟರ್ ಮತ್ತು ಜೀಪು ಚಾಲಕ ಬೆದರಿಕೆ ಹಾಕಿಸಿದ್ದಾರೆ. ಅಷ್ಟೇ ಅಲ್ಲದೆ, ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಸಮಯದಲ್ಲಿ ಇನ್ಸ್‌ಪೆಕ್ಟರ್‌ ಅಶ್ವತ್ಥ್‌ಗೌಡ ಪತ್ರಕರ್ತ ನಿರಂಜನ್‌ ಮೇಲೆ ದೈಹಿಕ ಹಲ್ಲೆಗೂ ಮುಂದಾಗಿದ್ದಾರೆ. ಪೊಲೀಸರ ದಬ್ಬಾಳಿಕೆ ವಿರೋಧಿಸಿ ಠಾಣೆಯ ಮುಂದೆ ತೀರ್ಥಹಳ್ಳಿಯ ಪತ್ರಕರ್ತರು ಧರಣಿ ನಡೆಸಿದ್ದಾರೆ.

Prajavani reporter assaulted by inspector in Thirthahalli, journalist stage protest. Reporter was attacked for filiming video and later was threatened to delete the video