Bangalore, North Indians, Video; ನಾವಿದ್ದರೆ ಬೆಂಗಳೂರು, ನಾವು ಹೋದರೆ ಇಡೀ ಊರೇ ಖಾಲಿಯಾಗುತ್ತೆ ಎಂದು ಹೇಳಿ ಧಿಮಾಕು ತೋರಿಸಿದ್ದ ಸುಗಂಧ ಶರ್ಮ ಕೆಲಸದಿಂದಲೇ ವಜಾ ; ಕನ್ನಡಿಗರ ಆಕ್ರೋಶಕ್ಕೆ ಸ್ಪಂದನೆ 

23-09-24 04:42 pm       HK News Desk   ಕರ್ನಾಟಕ

ನಾವಿದ್ದರೆ ಬೆಂಗಳೂರು. ಹಾಗೇನಾದರೂ ನಾವೆಲ್ಲ ಬೆಂಗಳೂರು ಬಿಟ್ಟು ಹೋದರೆ, ಇಡೀ ಊರೇ ಖಾಲಿಯಾಗುತ್ತದೆ. ಕೋರಮಂಗಲದ ಪಬ್‌ಗಳೆಲ್ಲಾ ಖಾಲಿ ಹೊಡೆಯುತ್ತದೆ ಎಂದಿದ್ದ ಇನ್ಸ್‌ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಸುಗಂಧ್‌ ಶರ್ಮ ಬೆಂಗಳೂರಿನಲ್ಲಿ ತಾನಿದ್ದ ಟೆಕ್ಕಿ ಕೆಲಸವನ್ನೇ ಕಳೆದುಕೊಂಡಿದ್ದಾಳೆ.

ಬೆಂಗಳೂರು, ಸೆ.23: ನಾವಿದ್ದರೆ ಬೆಂಗಳೂರು. ಹಾಗೇನಾದರೂ ನಾವೆಲ್ಲ ಬೆಂಗಳೂರು ಬಿಟ್ಟು ಹೋದರೆ, ಇಡೀ ಊರೇ ಖಾಲಿಯಾಗುತ್ತದೆ. ಕೋರಮಂಗಲದ ಪಬ್‌ಗಳೆಲ್ಲಾ ಖಾಲಿ ಹೊಡೆಯುತ್ತದೆ ಎಂದಿದ್ದ ಇನ್ಸ್‌ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಸುಗಂಧ್‌ ಶರ್ಮ ಬೆಂಗಳೂರಿನಲ್ಲಿ ತಾನಿದ್ದ ಟೆಕ್ಕಿ ಕೆಲಸವನ್ನೇ ಕಳೆದುಕೊಂಡಿದ್ದಾಳೆ. ಸುಗಂಧ್‌ ಶರ್ಮ ಸೋಶಿಯಲ್‌ ಮೀಡಿಯಾದಲ್ಲಿ ರಾಜ್ಯದ ಕುರಿತು ಕೆಟ್ಟದಾಗಿ ಮಾತನಾಡಿದ ಬೆನ್ನಲ್ಲೇ ಆಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ನೀವು ಬೆಂಗಳೂರು ಬಿಟ್ಟು ತೊಲಗಿ ಎಂದು ಸಾಕಷ್ಟು ಮಂದಿ ಹೇಳಿದ್ದರು. 

ಜಾಲತಾಣದಲ್ಲಿ ಆಕ್ರೋಶ ಹೆಚ್ಚುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಫ್ರೀಡಂ ಕಂಪನಿ ಎಚ್ಚೆತ್ತುಕೊಂಡಿದ್ದು ಸುಗಂಧ ಶರ್ಮರನ್ನ ಕೆಲಸದಿಂದ ತೆಗೆದುಹಾಕಿದ್ದಾಗಿ ಹೇಳಿದೆ. ಫ್ರೀಡಂ ಕಂಪನಿಗೆ ತೆರಳಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದರ ಮಾಹಿತಿ ಪಡೆದು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ  ಆಕೆ ಬೇರೆ ಯಾವುದೇ ಕಂಪನಿಯಲ್ಲಿ ಕೆಲಸ ನಿರ್ವಹಿಸಿದರೂ ವಿರೋಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ತಾನು ಮಾಡಿದ ರೀಲ್ಸ್‌ನಲ್ಲಿ ಧಿಮಾಕು ತೋರಿಸಿದ್ದಕ್ಕೆ ಕನ್ನಡಿಗರು ಚಳಿ ಬಿಡಿಸಿದ ಬಳಿಕ ಮೆತ್ತಗಾಗಿದ್ದಳು. ನನಗೆ ಕನ್ನಡ ಅಂದ್ರೆ ತುಂಬಾ ಇಷ್ಟ, ಕನ್ನಡ ಕಲಿಯಲು ಪ್ರಯತ್ನ ಮಾಡ್ತಿದ್ದೇನೆ ಎಂದು ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದರು. ನಾನು ಟ್ರಾವೆಲರ್‌, ಊರೂರು ಸುತ್ತುತ್ತೇನೆ. ಬೆಂಗಳೂರಂದ್ರೆ ನನಗೆ ಇಷ್ಟ. ಈ ಊರಿನ ಬಗ್ಗೆ ಗೌರವವಿದೆ. ನನ್ನಲ್ಲಿ ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಎಂಬ ಯಾವುದೇ ಭೇದ ಇಲ್ಲ ಎಂದು ಪೋಸ್ಟ್ ಮಾಡಿದ್ದಾಳೆ. ಎರಡು ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಸುಗಂಧ ಶರ್ಮ ಮಾಡಿದ್ದ ಪೋಸ್ಟ್‌ ವೈರಲ್ ಆಗಿತ್ತು.

A woman in Bengaluru has triggered an outrage on social media after claiming that if North Indians do leave the city, as many pro-Kannada groups keep insisting, then the entire city would become drained out of people and money. Sugandh Sharma, a digital creator on Instagram who goes by the handle @thesugandhsharma and has more than 17,000 followers, created a series of reels on why Bengaluru would be at a loss without the migrant population from the north but one among them is viral, attracting widespread criticism of Sharma.