Mangalore Missing, Deralakatte: ದೇರಳಕಟ್ಟೆ ಮಸೀದಿಗೆ ತೆರಳಿದ್ದ ಬೆಳ್ಮ ನಿವಾಸಿ ನಾಪತ್ತೆ ; ಕೊಣಾಜೆ ಠಾಣೆಗೆ ದೂರು 

20-09-25 06:39 pm       Mangalore Correspondent   ಕರಾವಳಿ

ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ಬದ್ಯಾರು ನಿವಾಸಿ ಮಹಮ್ಮದ್ (80) ಎಂಬವರು ಸೆ.19ರಂದು ಶುಕ್ರವಾರ ಮಧ್ಯಾಹ್ನ ಮಸೀದಿಗೆಂದು ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಕೊಣಾಜೆ ಠಾಣೆಗೆ ನಾಪತ್ತೆ ದೂರು ಸಲ್ಲಿಕೆಯಾಗಿದೆ. 

ಮಂಗಳೂರು, ಸೆ.20 : ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ಬದ್ಯಾರು ನಿವಾಸಿ ಮಹಮ್ಮದ್ (80) ಎಂಬವರು ಸೆ.19ರಂದು ಶುಕ್ರವಾರ ಮಧ್ಯಾಹ್ನ ಮಸೀದಿಗೆಂದು ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಕೊಣಾಜೆ ಠಾಣೆಗೆ ನಾಪತ್ತೆ ದೂರು ಸಲ್ಲಿಕೆಯಾಗಿದೆ. 

ಮಹಮ್ಮದ್ ಅವರು ಶುಕ್ರವಾರ ಮಧ್ಯಾಹ್ನ 12.39 ಗಂಟೆಗೆ ದೇರಳಕಟ್ಟೆ ಬದ್ರಿಯಾ ಜುಮ್ಮಾ ಮಸೀದಿಗೆ ಪ್ರಾರ್ಥನೆಗೆ ಹೋಗಿದ್ದು ಮರಳಿ ಮನೆಗೆ ಬಂದಿರುವುದಿಲ್ಲ‌. ಈ ಬಗ್ಗೆ ಮಸೀದಿಯಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದ್ದು ಹುಡುಕಾಟ ನಡೆಸಲಾಗಿದೆ. ಇದರಿಂದ ಠಾಣೆಗೆ ದೂರು ನೀಡುತ್ತಿರುವುದಾಗಿ ಮಗ ಮಹಮ್ಮದ್ ಇರ್ಷಾದ್ ದೂರಿನಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಮಹಮ್ಮದ್ ಅವರು ತುಳು, ಕನ್ನಡ, ಮಲಯಾಳಿ, ಬ್ಯಾರಿ, ಹಿಂದಿ ಭಾಷೆ ಮಾತನಾಡುತ್ತಿದ್ದು ಕೋಲು ಮುಖ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಪತ್ತೆಯಾದಲ್ಲಿ ಮಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಗೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಗೆ 0824-2220536,_9480802350 ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೊಣಾಜೆ ಪೊಲೀಸರು ಕೋರಿದ್ದಾರೆ.

An 80-year-old resident of Badyaru in Belma village, identified as Mohammed, has been reported missing after he failed to return home from Friday prayers. According to a complaint filed at the Konaje Police Station by his son Mohammed Irshad, the elderly man left home around 12:39 p.m. on September 19 to attend prayers at the Badriya Juma Masjid in Deralakatte.