ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಕೇಶವ ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್ ಗೆ ಎಸ್ಐಟಿ ಡ್ರಿಲ್, ಫಾರೆನ್ಸಿಕ್ ವೈದ್ಯ ಮಹಾಬಲ ಶೆಟ್ಟಿ ವಿಚಾರಣೆಗೆ ಕರೆಯಲ್ವೇ ?

19-09-25 09:59 pm       Mangalore Correspondent   ಕರಾವಳಿ

ಧರ್ಮಸ್ಥಳ ಬಳಿಯ ನೇತ್ರಾವತಿ ಸ್ನಾನಘಟ್ಟ ಆಸುಪಾಸಿನಲ್ಲಿ ದೂರುದಾರ ಚಿನ್ನಯ್ಯ ಸೂಚಿಸಿದ ಪ್ರಕಾರ ಎಸ್ಐಟಿ ಅಧಿಕಾರಿಗಳು ಸ್ಥಳ ಶೋಧ ನಡೆಸುತ್ತಿದ್ದಾಗ, ಆ ಜಾಗದಲ್ಲಿ ಬಹಳಷ್ಟು ಹೆಣಗಳನ್ನು ಹೂತು ಹಾಕಲಾಗಿತ್ತು ಎಂದು ಧರ್ಮಸ್ಥಳ ಗ್ರಾಪಂ ಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಮತ್ತು ಹಾಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಇದೀಗ ಅವರನ್ನು ಎಸ್ಐಟಿ ನೋಟೀಸ್ ನೀಡಿ ವಿಚಾರಣೆಗೆ ಕರೆಸಿಕೊಂಡು ಡ್ರಿಲ್ ಮಾಡಿದೆ.

ಬೆಳ್ತಂಗಡಿ, ಸೆ.19 : ಧರ್ಮಸ್ಥಳ ಬಳಿಯ ನೇತ್ರಾವತಿ ಸ್ನಾನಘಟ್ಟ ಆಸುಪಾಸಿನಲ್ಲಿ ದೂರುದಾರ ಚಿನ್ನಯ್ಯ ಸೂಚಿಸಿದ ಪ್ರಕಾರ ಎಸ್ಐಟಿ ಅಧಿಕಾರಿಗಳು ಸ್ಥಳ ಶೋಧ ನಡೆಸುತ್ತಿದ್ದಾಗ, ಆ ಜಾಗದಲ್ಲಿ ಬಹಳಷ್ಟು ಹೆಣಗಳನ್ನು ಹೂತು ಹಾಕಲಾಗಿತ್ತು ಎಂದು ಧರ್ಮಸ್ಥಳ ಗ್ರಾಪಂ ಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಮತ್ತು ಹಾಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಇದೀಗ ಅವರನ್ನು ಎಸ್ಐಟಿ ನೋಟೀಸ್ ನೀಡಿ ವಿಚಾರಣೆಗೆ ಕರೆಸಿಕೊಂಡು ಡ್ರಿಲ್ ಮಾಡಿದೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿದ ಇವರನ್ನು ಮೂರು ಗಂಟೆಗಳ ಕಾಲ ಕುಳ್ಳಿರಿಸಿ ವಿಚಾರಣೆ ನಡೆಸಿದ್ದಾರೆ. ಪ್ರಮುಖವಾಗಿ ಗ್ರಾಮ ಪಂಚಾಯತ್ ವತಿಯಿಂದ ಪಡೆದ ಮಾಹಿತಿಗಳು, ಶವ ಹೂತ ಬಗೆಗಿನ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಚಿನ್ನಯ್ಯ ಸೂಚಿಸಿದಂತೆ 13 ಕಡೆ ಮಾರ್ಕ್ ಮಾಡಿ, ಅಲ್ಲಿ ಅಗೆಯುತ್ತಿದ್ದಾಗ ಇವರಿಬ್ಬರು ಕೂಡ ಆ ಜಾಗದಲ್ಲಿ ಶವ ಹೂತಿದ್ದನ್ನು ನೋಡಿದ್ದೇವೆ, ಅಲ್ಲದೆ ಈಗ ದೂರು ಹೇಳಲು ಬಂದ ವ್ಯಕ್ತಿ ಶವದ ಮೇಲಿನ ಬಂಗಾರವನ್ನು ಕದಿಯುತ್ತಿದ್ದ ಎಂದೂ ಆರೋಪ ಮಾಡಿದ್ದರು. ಅಲ್ಲದೆ, ಆ ಜಾಗದಲ್ಲಿ ಅಗೆದು ನೋಡಿದರೆ ಬಹಳಷ್ಟು ಹೆಣಗಳ ಅವಶೇಷಗಳು ಸಿಕ್ಕೇ ಸಿಗುತ್ತದೆ, ಅವೆಲ್ಲ ಪೋಸ್ಟ್ ಮಾರ್ಟಂ ಮಾಡಿರುವ ಅಪರಿಚಿತ ಶವಗಳು ಎಂದೂ ಹೇಳಿದ್ದರು.

ಅದೇ ಸಂದರ್ಭದಲ್ಲಿ ಫಾರೆನ್ಸಿಕ್ ವೈದ್ಯ ಡಾ.ಮಹಾಬಲ ಶೆಟ್ಟಿ ಅವರೂ ಮಾಧ್ಯಮಕ್ಕೆ ಹೇಳಿಕೆ ನೀಡಿ, ನೇತ್ರಾವತಿ ಸ್ನಾನಘಟ್ಟದ ಬಳಿ 80-100 ರಷ್ಟು ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ. ಹೆಚ್ಚಿನ ಶವಗಳು ಕೊಳೆತಿದ್ದರಿಂದ ಅವನ್ನು ಬೇರೆ ಜಾಗಗಳಿಗೆ ಒಯ್ಯಲಾಗದೆ ಅಲ್ಲಿಯೇ ದಫನ ಮಾಡಿದ್ದೆವು. ಅದರಲ್ಲಿ ವಿಶೇಷ ಇಲ್ಲ ಎಂದು ಹೇಳಿದ್ದರು. ಈಗ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಕರೆಸಿ ವಿಚಾರಣೆ ಮಾಡಿರುವುದರಿಂದ ಮಹಾಬಲ ಶೆಟ್ಟಿ ಅವರನ್ನೂ ಕರೆಸಿ ವಿಚಾರಣೆಗೆ ಒಳಪಡಿಸುವ ಮತ್ತು ಅವರಲ್ಲಿರುವ ದಾಖಲೆಗಳನ್ನು ಕೇಳಿ ಪಡೆಯುವ ಸಾಧ್ಯತೆಯಿದೆ.

ಪೋಸ್ಟ್ ಮಾರ್ಟಂ ಮಾಡಿದ್ದರೆ ಅವರಲ್ಲಿ ಹೆಣ್ಣೋ, ಗಂಡೋ, ಎಷ್ಟು ಪ್ರಾಯದವರು ಮತ್ತು ಯಾವ ಕಾರಣಕ್ಕೆ ಸಾವು ಆಗಿದೆ ಎನ್ನುವ ಖಚಿತ ಮಾಹಿತಿ ಇರಬಹುದು. ಧರ್ಮಸ್ಥಳ ಗ್ರಾಪಂ ಈಗಾಗಲೇ 279 ಅಸಹಜ ಸಾವುಗಳ ಬಗ್ಗೆ ಮಾಹಿತಿ ನೀಡಿರುವುದರಿಂದ ಅದರಲ್ಲಿ ಮಹಾಬಲ ಶೆಟ್ಟಿ ಪೋಸ್ಟ್ ಮಾರ್ಟಂ ಮಾಡಿರುವುದು ಎಷ್ಟು ಎನ್ನುವ ಮಾಹಿತಿಯೂ ಸಿಗುವ ಸಾಧ್ಯತೆಯಿದೆ.

ಬೆಳಗ್ಗೆ 11 ಗಂಟೆಗೆ ಎಸ್ಐಟಿ ಕಚೇರಿಗೆ ತೆರಳಿದ್ದ ಕೇಶವ ಗೌಡ ಮತ್ತು ಶ್ರೀನಿವಾಸ ರಾವ್ ಅವರನ್ನು ಮೂರು ಗಂಟೆ ಕಾಲ ವಿಚಾರಣೆ ನಡೆಸಿದ್ದು ಅದು ಮುಗಿಯುತ್ತಲೇ ಮಾಧ್ಯಮಗಳಿಗೆ ಉತ್ತರಿಸದೆ ಹೊರ ನಡೆದಿದ್ದಾರೆ. ಮಹಾಬಲ ಶೆಟ್ಟಿ ಇತ್ತೀಚೆಗೆ ಎಸ್ಐಟಿ ಕಚೇರಿಗೆ ಬಂದಿದ್ದರು ಎಂದು ಹೇಳಲಾಗುತ್ತಿದ್ದರೂ ಅಧಿಕೃತವಾಗಿ ನೋಟೀಸ್ ಕೊಟ್ಟು ಕರೆಸುವ ಸಾಧ್ಯತೆ ಹೆಚ್ಚಿದೆ. ಹೆಚ್ಚಿನ ಪೋಸ್ಟ್ ಮಾರ್ಟಂಗಳನ್ನು ಅವರೇ ಮಾಡಿರುವುದರಿಂದ ಅವರಲ್ಲಿನ ಮಾಹಿತಿ ತನಿಖೆಗೆ ಹೆಚ್ಚು ಸಹಕಾರಿ ಆಗಬಲ್ಲದು.

ಎರಡು ದಿನಗಳ ಕಾಲ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ನಡೆಸಿದ್ದ ಎಸ್ಐಟಿ, ಅಲ್ಲಿಂದ ಏಳು ತಲೆಬುರುಡೆ ಸೇರಿದಂತೆ ನೂರಕ್ಕೂ ಹೆಚ್ಚು ಶವದ ಅವಶೇಷಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ನೆಲದ ಮೇಲ್ಮೈನಿಂದಲೇ ಇವುಗಳನ್ನು ಸಂಗ್ರಹಿಸಿದ್ದು, ನೆಲದ ಒಳಗಡೆ ಅಗೆದು ಶೋಧಿಸುವ ಕೆಲಸ ಮಾಡಿಲ್ಲ. ಮುಂದೆ ಅಗೆಯುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

The Special Investigation Team (SIT) probing the Dharmasthala case has intensified its inquiry after shocking claims surfaced about multiple bodies being buried near the Nethravathi bathing ghat.