ಬ್ರೇಕಿಂಗ್ ನ್ಯೂಸ್
08-09-25 11:06 pm HK News Desk ದೇಶ - ವಿದೇಶ
ಕಾಸರಗೋಡು, ಸೆ.8 : ಕಾಸರಗೋಡು ನಗರದ ಅಡ್ಕತ್ ಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದ್ದು ಮಹಿಳೆ ಹತ್ತು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಸ್ಥಳೀಯ ಅಡ್ಕತ್ ಬೈಲು ನಿವಾಸಿ ಯೂಸುಫ್ ಎಂಬವರ ಪತ್ನಿ ನಾಸಿಯಾ(50) ಮೃತ ಮಹಿಳೆ. ಇವರು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ ಕಾರು ಡಿಕ್ಕಿಯಾಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ತಲಪಾಡಿಯಿಂದ ಕಾಸರಗೋಡು ವರೆಗೆ ದುಬೈ ಮಾದರಿಯಲ್ಲಿ ಅತಿ ವೇಗದ ಹೆದ್ದಾರಿ ನಿರ್ಮಾಣಗೊಂಡಿದ್ದು ಎಲ್ಲೆಂದರಲ್ಲಿ ಜನರು ರಸ್ತೆ ದಾಟುವುದನ್ನ ನಿಷೇಧಿಸಲಾಗಿದೆ. ಆದರೆ ಸದ್ರಿ ಮಹಿಳೆ ವಾಹನಗಳು ಅತಿ ವೇಗದಲ್ಲಿ ಸಾಗುತ್ತವೆ ಎಂಬ ಅರಿವಿಲ್ಲದೆ, ರಸ್ತೆ ದಾಟಲು ಅವಕಾಶ ಇಲ್ಲದ ಕಡೆ ಅಡ್ಡ ಸಾಗಿದ್ದು ಇದರಿಂದಾಗಿ ಪ್ರಾಣ ಕಳಕೊಂಡಿದ್ದಾರೆ.
ಒಂದು ಲಾರಿ ಮಹಿಳೆಯನ್ನು ನೋಡಿ ಬ್ರೇಕ್ ಹಾಕಿದರೆ ಅದರ ಹಿಂದಿದ್ದ ಕಾರು ಏಕಮುಖದ ರಸ್ತೆಯಲ್ಲಿ ಬಲ ಬದಿಯಿಂದ ಅತಿ ವೇಗವಾಗಿ ನುಗ್ಗಿ ಬಂದಿದೆ. ಈ ವೇಳೆ, ಮಹಿಳೆ ರಸ್ತೆ ದಾಟುವ ಧಾವಂತದಲ್ಲಿ ಕಾರನ್ನು ನೋಡದೆ ಓಡಿದ್ದು ನೇರವಾಗಿ ಡಿಕ್ಕಿಯಾಗಿದೆ. ಅದರ ವೇಗಕ್ಕೆ ಮಹಿಳೆ ಹತ್ತು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಕೂಡಲೇ ಮಹಿಳೆಯನ್ನು ಬೇರೆ ಕಾರಿನಲ್ಲಿ ಆಸ್ಪತ್ರೆಗೆ ಒಯ್ದರೂ ಆಕೆ ಪ್ರಾಣ ಉಳಿಯಲಿಲ್ಲ. ಅಪಘಾತದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
🚨 Tragedy in #Kasaragod 🚨
— Headline Karnataka (@hknewsonline) September 8, 2025
A 50-year-old woman was flung 10 meters and died on the spot after being hit by a speeding #car while crossing the #Adkathbail National Highway.#RoadSafety #ViralVideo #liveaccident pic.twitter.com/lozK4wja4Z
A tragic accident occurred on the Adkathbail stretch of the National Highway in Kasaragod city on Sunday, where a 50-year-old woman was fatally hit by a speeding car while attempting to cross the road. She was thrown nearly 10 meters due to the impact and died on the spot.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am