ಬ್ರೇಕಿಂಗ್ ನ್ಯೂಸ್
26-12-25 03:04 pm HK News Desk ದೇಶ - ವಿದೇಶ
ನವದೆಹಲಿ, ಡಿ.26 : ರೈಲ್ವೇ ಇಲಾಖೆಯು ಒಂದೇ ವರ್ಷದಲ್ಲಿ 2ನೇ ಬಾರಿಗೆ ರೈಲ್ವೇ ಟಿಕೆಟ್ ದರ ಏರಿಕೆ ಮಾಡಿದೆ. ಇದೇ ಡಿಸೆಂಬರ್ 26 ರಿಂದ ರೈಲ್ವೇ ಟಿಕೆಟ್ ದರ ಏರಿಕೆ ಜಾರಿಗೆ ಬರಲಿದೆ. ಪ್ರಯಾಣಿಕರ ಸುರಕ್ಷತೆ, ನಿರ್ವಹಣಾ ವೆಚ್ಚ ಭರಿಸಲು ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ರೈಲ್ವೇ ಇಲಾಖೆ ಹೇಳಿಕೊಂಡಿದೆ.
ದೇಶದಲ್ಲಿ ಕೇವಲ 6 ತಿಂಗಳ ಅಂತರದಲ್ಲಿ ರೈಲ್ವೇ ಇಲಾಖೆ ಟಿಕೆಟ್ ದರ ಏರಿಸಿರುವುದು ಹಲವರ ಆಕ್ಷೇಪಕ್ಕೂ ಕಾರಣವಾಗಿದೆ. ಆದರೇ, ಭಾರೀ ಪ್ರಮಾಣದಲ್ಲಿ ರೈಲ್ವೇ ಟಿಕೆಟ್ ದರ ಏರಿಸುತ್ತಿಲ್ಲ. ಪೈಸೆಗಳ ಲೆಕ್ಕದಲ್ಲಿ ಟಿಕೆಟ್ ದರ ಏರಿಸುವ ತೀರ್ಮಾನ ಕೈಗೊಂಡಿದ್ದಾಗಿ ರೈಲ್ವೇ ಸಮರ್ಥಿಸಿಕೊಂಡಿದೆ. ಕಳೆದ ಜುಲೈನಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿದ್ದ ರೈಲ್ವೇ, ಇದೀಗ ಮತ್ತೊಮ್ಮೆ ಟಿಕೆಟ್ ದರವನ್ನು ಏರಿಸಿದೆ. ಕನಿಷ್ಠ 215 ಕಿ.ಮೀ ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಸಾಮಾನ್ಯ ದರ್ಜೆಯ ಟಿಕೆಟ್ ದರ ಪ್ರತಿ ಕಿ.ಮೀಗೆ 1 ಪೈಸೆಯಂತೆ ಏರಿಕೆ ಮಾಡಲಾಗಿದೆ. ಎಕ್ಸ್ ಪ್ರೆಸ್, ನಾನ್ ಎ.ಸಿ. ಹಾಗೂ ಎ.ಸಿ ರೈಲುಗಳ ಪ್ರಯಾಣದಲ್ಲಿ ಪ್ರತಿ ಕಿ.ಮೀ.ಗೆ 2 ಪೈಸೆ ಏರಿಕೆ ಮಾಡಲಾಗಿದೆ. ನಾನ್ ಎ.ಸಿ ಬೋಗಿಯಲ್ಲಿ 500 ಕಿ.ಮೀ ದೂರದ ವರೆಗೆ ಪ್ರಯಾಣಿಸುವವರು ಹಾಲಿ ದರಕ್ಕಿಂತ 10 ರೂ. ಹೆಚ್ಚುವರಿ ಪಾವತಿಸಬೇಕು. ಉಪ ನಗರಗಳ ಪ್ರಯಾಣ, ಮಾಸಿಕ ಪಾಸುಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೇ ಇಲಾಖೆ ಹೇಳಿದೆ.
ಟಿಕೆಟ್ ದರ ಏರಿಕೆಯಿಂದ ರೈಲ್ವೇ ಇಲಾಖೆಗೆ ವರ್ಷಕ್ಕೆ 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ. ರೈಲ್ವೇ ನೆಟ್ ವರ್ಕ್ ವಿಸ್ತರಣೆ, ರೈಲ್ವೇ ಅಪರೇಷನ್ ವೆಚ್ಚ ಹೆಚ್ಚಳ, ರೈಲ್ವೇ ಸುರಕ್ಷತೆ, ದಕ್ಷತೆಯ ಹೆಚ್ಚಳದ ಕಾರಣದಿಂದ ರೈಲ್ವೇ ಟಿಕೆಟ್ ದರವನ್ನು ಪೈಸೆಗಳ ಲೆಕ್ಕದಲ್ಲಿ ಏರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ರೈಲ್ವೇ ಸುರಕ್ಷತೆ, ದಕ್ಷತೆಯ ಹೆಚ್ಚಳಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ರೈಲ್ವೇ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ವೇತನವೂ 1.15 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ನಿವೃತ್ತ ಸಿಬ್ಬಂದಿ, ಅಧಿಕಾರಿಗಳ ಪಿಂಚಣಿಗಾಗಿ 60,000 ಕೋಟಿ ರೂಪಾಯಿ ನೀಡಬೇಕಾಗಿದೆ. ರೈಲ್ವೇ ನಿರ್ವಹಣಾ ವೆಚ್ಚವು 2024-25 ರಲ್ಲಿ 2.63 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.
The Indian Railways has announced another round of fare hikes — the second increase within a span of six months. The revised ticket prices come into effect starting December 26. According to officials, the fare hike is necessary to cover rising operational and maintenance costs and to improve passenger safety.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am