ಬ್ರೇಕಿಂಗ್ ನ್ಯೂಸ್
30-12-25 06:48 pm HK News Desk ದೇಶ - ವಿದೇಶ
ಢಾಕಾ, ಡಿ.30 : ಬಾಂಗ್ಲಾದೇಶದಲ್ಲಿ ಹಿಂಸೆ ಮುಂದುವರಿದಿದ್ದು ಮತ್ತೋರ್ವ ಹಿಂದೂವನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಮೈಮೆನ್‌ಸಿಂಗ್ ಜಿಲ್ಲೆಯ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಹಿಂದು ವ್ಯಕ್ತಿಯನ್ನು ಸಹೋದ್ಯೋಗಿಯೇ ಗುಂಡಿಕ್ಕಿ ಕೊಂದಿದ್ದಾನೆ. ಕಳೆದ ಎರಡು ವಾರಗಳಲ್ಲಿ ಮೂರನೇ ಹಿಂದು ಯುವಕನ ಹತ್ಯೆಯಾಗಿದೆ.
ಭಾಲುಕಾ ಉಪಜಿಲ್ಲಾ ಪ್ರದೇಶದಲ್ಲಿರುವ ಲಬಿಬ್ ಗ್ರೂಪ್ ಫ್ಯಾಕ್ಟರಿ ಸುಲ್ತಾನಾ ಸ್ವೆಟರ್ಸ್ ಲಿಮಿಟೆಡ್‌ನಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ. ಕಾರ್ಖಾನೆಯಲ್ಲಿ ಭದ್ರತಾ ಸಿಬಂದಿಯಾಗಿದ್ದ ಬಜೇಂದ್ರ ಬಿಸ್ವಾಸ್ (42) ಹತ್ಯೆಯಾದವರು. ಆರೋಪಿ ನೋಮನ್ ಮಿಯಾ (29) ಕೂಡ ಇದೇ ಘಟಕದಲ್ಲಿ ಭದ್ರತಾ ಸಿಬಂದಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಅನ್ಸಾರ್ ಎಂಬುದು ಗೃಹ ವ್ಯವಹಾರಗಳ ಸಚಿವಾಲಯದಡಿ ಕೆಲಸ ಮಾಡುವ ಭದ್ರತಾ ಪಡೆಯಾಗಿದೆ. ಸರ್ಕಾರಿ ಕಚೇರಿಗಳು, ಕಾರ್ಖಾನೆಗಳು, ಕೈಗಾರಿಕಾ ಘಟಕಗಳು ಮತ್ತು ಪ್ರಮುಖ ಕಟ್ಟಡಗಳ ರಕ್ಷಣೆ ಸೇರಿದಂತೆ ಆಂತರಿಕ ಭದ್ರತಾ ಕಾರ್ಯಗಳಿಗಾಗಿ ಅನ್ಸಾರ್ ಪಡೆಯ ಸದಸ್ಯರನ್ನು ನಿಯೋಜಿಸಲಾಗುತ್ತದೆ. ಭದ್ರತಾ ಕರ್ತವ್ಯಕ್ಕಾಗಿ ಸರ್ಕಾರದಿಂದ ಶಸ್ತ್ರಾಸ್ತ್ರಗಳನ್ನು ನೀಡಲಾಗುತ್ತದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರೂ ಭದ್ರತಾ ಕರ್ತವ್ಯದಲ್ಲಿದ್ದರು ಮತ್ತು ಕಾರ್ಖಾನೆ ಆವರಣದೊಳಗೆ ಬ್ಯಾರಕ್‌ಗಳಲ್ಲಿ ತಂಗಿದ್ದರು ಎನ್ನಲಾಗಿದೆ.
ಇಬ್ಬರ ಮಾತುಕತೆ ವೇಳೆ ಆರೋಪಿ ನೋಮನ್ ಮಿಯಾ, ಸರ್ಕಾರ ನೀಡಿದ ಗನ್ ಅನ್ನು ಬಿಸ್ವಾಸ್ ನತ್ತ ತೋರಿಸಿ ತಮಾಷೆ ಮಾಡಿದ್ದು ನಂತರ ಗುಂಡು ಹಾರಿಸಿದ್ದಾನೆ. ಬಿಸ್ವಾಸ್‌ನ ಎಡ ತೊಡೆಗೆ ಗುಂಡು ತಗುಲಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ಗನ್ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Violence against minorities continues in Bangladesh as another Hindu man was shot dead—marking the third such killing in just two weeks. Bijendra Biswas (42), a security guard at a garment factory in Mymensingh’s Bhaluka area, was killed by his colleague Noman Mia (29), also a security guard. The incident occurred inside the barracks of Labib Group’s Sultana Sweaters Ltd.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am