ಬ್ರೇಕಿಂಗ್ ನ್ಯೂಸ್
05-01-26 02:13 pm HK News Desk ದೇಶ - ವಿದೇಶ
ಡೆಹ್ರಾಡೂನ್, ಜ.5 : ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳ ಹರಿದ್ವಾರ ಮತ್ತು ಸುತ್ತಲಿನ ಪ್ರದೇಶಗಳಿಗೆ ಹಿಂದೂಯೇತರರ ಪ್ರವೇಶ ನಿರ್ಬಂಧಿಸುವ ಬಗ್ಗೆ ಉತ್ತರಾಖಂಡ ಸರಕಾರ ಚಿಂತನೆ ನಡೆಸಿದೆ. ಹರಿದ್ವಾರವು ಪವಿತ್ರ ನಗರವಾಗಿದ್ದು, ದೇವಭೂಮಿಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸ್ವರೂಪವನ್ನು ಕಾಪಾಡಲು ಸರಕಾರ ಬದ್ಧವಾಗಿದೆ. ಇಲ್ಲಿನ ಪಾವಿತ್ರ್ಯ ಉಳಿಸಿಕೊಳ್ಳುವುದಕ್ಕಾಗಿ ಹಿಂದೂಯೇತರರ ಪ್ರವೇಶ ನಿರ್ಬಂಧಿಸುವ ಬಗ್ಗೆ ಯೋಚಿಸಲಾಗುವುದು ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಹರಿದ್ವಾರದಲ್ಲಿ 2027ರಲ್ಲಿ ಅರ್ಧ ಕುಂಭಮೇಳ ನಡೆಯಲಿದ್ದು ಅದಕ್ಕೂ ಮೊದಲು ಈ ಪ್ರದೇಶವನ್ನು ಹಿಂದುಯೇತರರು ನೆಲೆಸುವುದಕ್ಕೆ ನಿಷೇಧಿಸಬೇಕು. ಆಮೂಲಕ ಪವಿತ್ರ ಭೂಮಿಯಲ್ಲಿ ಮಾಂಸಾಹಾರ, ಇದರ ವಹಿವಾಟು ನಿಷೇಧಿಸಬೇಕು ಎಂದು ಹರಿದ್ವಾರದ ಗಂಗಾ ಘಾಟ್ ಸುರಕ್ಷತೆ ನೋಡಿಕೊಳ್ಳುತ್ತಿರುವ ಶ್ರೀ ಗಂಗಾ ಸಭಾ ಒತ್ತಾಯ ಮಾಡಿತ್ತು. ಇದರ ಬೆನ್ನಲ್ಲೇ ನ್ಯೂಸ್ 18 ಇಂಗ್ಲಿಷ್ ಮಾಧ್ಯಮ, ಅಲ್ಲಿನ ಮುಖ್ಯಮಂತ್ರಿ ಬಳಿ ಪ್ರತಿಕ್ರಿಯೆ ಕೇಳಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಪ್ರಸ್ತುತ ಹರಿದ್ವಾರದ 'ಹರ್ ಕಿ ಪೌಡಿ' ಸೇರಿದಂತೆ ಕೆಲವು ಆಯ್ದ ಗಂಗಾ ನದಿಯ ತಟಗಳಿಗೆ ಹಿಂದುಯೇತರರಿಗೆ ಅಲ್ಲಿನ ನಗರಸಭೆ ನಿಷೇಧ ವಿಧಿಸಿದೆ. ಈಗ ಈ ನಿರ್ಬಂಧವನ್ನು ಹರಿದ್ವಾರದಿಂದ ಋಷಿಕೇಶದ ವರೆಗಿನ ಎಲ್ಲಾ 105 ಗಂಗಾ ಘಾಟ್ ಗಳಿಗೆ ವಿಸ್ತರಿಸಬೇಕೆಂದು ಸಾಧು, ಸಂತರು ಮತ್ತು 'ಶ್ರೀ ಗಂಗಾ ಸಭಾ' ಆಗ್ರಹಿಸಿವೆ.
ಹರಿದ್ವಾರಕ್ಕೆ ವಾರ್ಷಿಕ 4 ಕೋಟಿ ಭಕ್ತರು
ಹರಿದ್ವಾರ ಭಾರತದ ಅತಿ ಮುಖ್ಯ ಯಾತ್ರಾಸ್ಥಳವಾಗಿದ್ದು ವಾರ್ಷಿಕವಾಗಿ ನಾಲ್ಕು ಕೋಟಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ನಡುವೆ, ಹೊರಗಿನ ವ್ಯಕ್ತಿಗಳು ಬಂದು ನೆಲೆಸುತ್ತಿರುವುದು, ಪ್ರವಾಸಿ ತಾಣಗಳ ರೀತಿ ರೆಸಾರ್ಟ್ ನಿರ್ಮಿಸುತ್ತಿರುವುದು, ಆಮೂಲಕ ಧಾರ್ಮಿಕ ಪ್ರವಾಸೋದ್ಯಮ ಬದಲು ವಿಹಾರಿ ತಾಣದ ರೀತಿ ಬದಲಾಯಿಸುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕಾಗಿ ಮಾಂಸಾಹಾರ ಪೂರ್ತಿ ನಿಷೇಧ ಮತ್ತು ಹಿಂದುಯೇತರ ವ್ಯಕ್ತಿಗಳು ಪವಿತ್ರ ಸ್ಥಳದಲ್ಲಿ ನೆಲೆಸುವಂತಾಗಬಾರದು ಎಂಬ ನಿಟ್ಟಿನಲ್ಲಿ ಹಿಂದು ಪರ ಸಂಘಟನೆಗಳು ರಾಜ್ಯ ಬಿಜೆಪಿ ಸರ್ಕಾರಕ್ಕೆ ಒತ್ತಡ ಹೇರಿವೆ.
The Uttarakhand government is considering restricting the entry and settlement of non-Hindus in the Haridwar–Rishikesh region following demands from saints, seers, and the Shri Ganga Sabha. Chief Minister Pushkar Singh Dhami said the government is committed to preserving the spiritual and cultural sanctity of the sacred cities, especially ahead of the 2027 Ardh Kumbh Mela.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am