ಬ್ರೇಕಿಂಗ್ ನ್ಯೂಸ್
06-02-26 08:47 pm HK News Desk ದೇಶ - ವಿದೇಶ
ನವದೆಹಲಿ, ಫೆ.6 : ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ತಂದೆ ನೀಡಿರುವ ಹೇಳಿಕೆಗಳು ಮತ್ತು ಪೊಲೀಸರ ತನಿಖಾ ವರದಿಗಳ ನಡುವೆ ಗಂಭೀರ ಅಂತರ ಕಂಡುಬಂದಿದೆ.
“ನನ್ನ ಮಕ್ಕಳು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರು ಕೊರಿಯನ್ ವೆಬ್ ಸೀರೀಸ್ ಮತ್ತು ಗೇಮ್‌ಗಳಿಗೆ ದಾಸರಾಗಿದ್ದರು. ಕೊರಿಯನ್ನರಂತೆ ಬದುಕಲು ಬಯಸುತ್ತಿದ್ದರು. ಆದರೆ ನಾನು ಅವರನ್ನು ಭಾರತೀಯ ಸಂಸ್ಕೃತಿಯಲ್ಲಿ ಬೆಳೆಸಲು ಪ್ರಯತ್ನಿಸಿದ್ದೆ” ಎಂದು ಮೃತ ಮಕ್ಕಳ ತಂದೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಪೊಲೀಸರ ಪ್ರಕಾರ, ಮೃತ ಸಹೋದರಿಯರು ಬರೆದಿದ್ದ ಡೆತ್‌ನೋಟ್‌ನಲ್ಲಿ ಕೊರಿಯನ್ ಸೀರೀಸ್‌ಗಳನ್ನು ನೋಡದಂತೆ ಪೋಷಕರು ಒತ್ತಡ ಹೇರಿದ್ದರಿಂದ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ, ಇದು ಯಾವುದೋ ಆನ್‌ಲೈನ್ ಗೇಮ್‌ನ ಟಾಸ್ಕ್‌ನ ಭಾಗವೇ ಎಂಬುದಕ್ಕೆ ಸದ್ಯದ ಮಟ್ಟಿಗೆ ಯಾವುದೇ ಪುರಾವೆ ದೊರಕಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ತನಿಖೆಯ ವೇಳೆ, ಮಕ್ಕಳ ತಂದೆಗೆ ಸುಮಾರು 2 ಕೋಟಿ ರೂಪಾಯಿ ಸಾಲವಿದ್ದ ವಿಚಾರ ಬೆಳಕಿಗೆ ಬಂದಿದೆ. ಸಾಲದ ಒತ್ತಡದಲ್ಲಿದ್ದ ತಂದೆ, ಮಕ್ಕಳು ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಮಾರಾಟ ಮಾಡಿ, ಅದರಿಂದ ಮನೆಯ ವಿದ್ಯುತ್ ಬಿಲ್ ಪಾವತಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೂ ಮೊದಲು ಬಿಲ್ ಪಾವತಿಸದ ಕಾರಣ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎನ್ನಲಾಗಿದೆ.
ಮಕ್ಕಳು ಕೇವಲ ಗೇಮ್‌ಗಳಲ್ಲ, ನಿರಂತರವಾಗಿ ಕೊರಿಯನ್ ವೆಬ್ ಸೀರೀಸ್‌ಗಳನ್ನು ವೀಕ್ಷಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಕೊರಿಯನ್ ಸೀರೀಸ್ ಪಾತ್ರಗಳ ಹೆಸರನ್ನೇ ಯೂಸರ್‌ನೇಮ್ ಆಗಿ ಬಳಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಅಕ್ಕಪಕ್ಕದವರ ಹೇಳಿಕೆ ಪ್ರಕಾರ, ಮಕ್ಕಳು ಯಾರೊಂದಿಗೂ ಬೆರೆಯದೇ, ಒಂಟಿ ಜೀವನ ನಡೆಸುತ್ತಿದ್ದರು. ಇತರ ಮಕ್ಕಳೊಂದಿಗೆ ಆಟವಾಡಲು ಸಹ ಹೊರಗೆ ಹೋಗುತ್ತಿರಲಿಲ್ಲ. ಮಕ್ಕಳ ತಂದೆ ವೃತ್ತಿಯಲ್ಲಿ ಸ್ಟಾಕ್ ಟ್ರೇಡರ್ ಆಗಿದ್ದು, ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಬುಧವಾರ ಮುಂಜಾನೆ ಸುಮಾರು 2 ಗಂಟೆಗೆ, ನೋಯ್ಡಾದಲ್ಲಿರುವ ತಮ್ಮ ಫ್ಲ್ಯಾಟ್‌ನ 9ನೇ ಮಹಡಿಯಿಂದ ಮೂವರು ಸಹೋದರಿಯರು ಜಿಗಿದು ಸಾವನ್ನಪ್ಪಿದ್ದರು. ಆದರೂ, ಇದು ಆತ್ಮಹತ್ಯೆಯಲ್ಲ, ಆನ್‌ಲೈನ್ ಗೇಮ್ ಟಾಸ್ಕ್‌ನಿಂದಲೇ ನಡೆದ ಘಟನೆ ಎಂದು ತಂದೆ ಪದೇ ಪದೇ ಪೊಲೀಸರ ಮುಂದೆ ಹೇಳುತ್ತಿದ್ದಾರೆ. ಪ್ರಕರಣದ ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿದಿದೆ.
In a shocking incident from Uttar Pradesh’s Ghaziabad, three minor sisters allegedly died by suicide after jumping from the 9th floor of their Noida apartment early Wednesday morning. The tragedy has sparked nationwide concern, with conflicting claims emerging between the father’s statement and the police investigation.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am