ಬ್ರೇಕಿಂಗ್ ನ್ಯೂಸ್
14-02-26 08:13 pm HK Staffer ದೇಶ - ವಿದೇಶ
ಢಾಕಾ, ಫೆ.14: ಮಾಜಿ ಪ್ರಧಾನಿ ಶೇಕ್ ಹಸೀನಾ ಪರಾರಿಯಾದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ತಾರಿಕ್ ರೆಹೆಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಭರ್ಜರಿ ಗೆಲುವು ದಾಖಲಿಸಿದೆ. ಎರಡು ದಶಕಗಳ ಬಳಿಕ ಬಿಎನ್‌ಪಿ ಬಾಂಗ್ಲಾದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ವಿಶೇಷ ಅಂದರೆ ಬಾಂಗ್ಲಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಒಂದು ಸ್ಥಾನ ಗೆದ್ದು ಅಚ್ಚರಿ ಮೂಡಿಸಿದೆ.
ಭೋಲಾ 1 ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು:
ಬಾಂಗ್ಲಾದೇಶದ ಭೋಲಾ 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಆದರೆ ನೀವು ಅಂದುಕೊಂಡಿರುವ ಭಾರತದ ಬಿಜೆಪಿ ಪಕ್ಷ ಇದಲ್ಲ. ಇದು ಬಾಂಗ್ಲಾದೇಶದ ಬಿಜೆಪಿ ಪಕ್ಷ. ಅಂದರೆ ಬಾಂಗ್ಲಾದೇಶ ಜಾತೀಯ ಪಾರ್ಟಿ. ನಜೀಉರ್ ರೆಹಮಾನ್ ಮನ್ಜೂರ್ ಸ್ಥಾಪಿಸಿದ ಬಿಜೆಪಿ ಪಕ್ಷದ ಅಭ್ಯರ್ಥಿ ಅಂದಲೀವೆ ರಹಮಾನ್ ಪಾರ್ಥೋ ಬಿಜೆಪಿ ಪಕ್ಷದಿಂದ ಆರಿಸಿ ಬಂದಿದ್ದಾರೆ.
ಬಾಂಗ್ಲಾದೇಶ ಜಾತೀಯ ಪಾರ್ಟಿ 2001ರಿಂದ 2006ರ ವರೆಗೆ ಮೈತ್ರಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಜಾತಿಯಾ ಪಾರ್ಟಿ ಆಗಿ ಜನ್ಮ ತಾಳಿದ್ದ ಪಾರ್ಟಿ ಬಳಿಕ ಒಡೆದು ಬಾಂಗ್ಲಾದೇಶ ಜಾತೀಯ ಪಾರ್ಟಿಯಾಗಿ ಹೊರಹೊಮ್ಮಿತ್ತು. ಇದೀಗ ಬಾಂಗ್ಲಾದೇಶದಲ್ಲಿ ಬಿಜೆಪಿ ಮತ್ತೆ ಪಕ್ಷ ಸಂಘಟನೆ ಬಲಗೊಳಿಸುತ್ತಿದೆ. ಶೇಕ್ ಹಸೀನಾ ಸರ್ಕಾರ ಆಗಮಿಸಿದ ಬಳಿಕ ಅವಾಮಿ ಲೀಗ್ ಬಾಂಗ್ಲಾದೇಶದ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತ್ತು. ಇದೀಗ ಮತ್ತೆ ಬಿಜೆಪಿ ಪುಟಿದೆದ್ದಿದೆ. ಒಂದು ಸ್ಥಾನ ಗೆಲ್ಲುವ ಮೂಲಕ ಬಾಂಗ್ಲಾದೇಶದಲ್ಲಿ ಮತ್ತೆ ಮೈತ್ರಿ ಅವಕಾಶಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ.
297 ಸ್ಥಾನಗಳ ಪೈಕಿ ಬಿಎನ್‌ಪಿ 209 ಸ್ಥಾನ ಗೆದ್ದು ಅಧಿಕಾರಕ್ಕೇರಿದೆ. ಪ್ರಬಲ ಪ್ರತಿಸ್ಪರ್ಧಿ ಪಕ್ಷ ಜಮಾಯತ್ ಇ ಇಸ್ಲಾಮ್ ಪಕ್ಷ 68 ಸ್ಥಾನ ಗೆದ್ದಿದೆ. ಬಿಎನ್‌ಪಿ ಚೇರ್ಮೆನ್ ತಾರೀಕ್ ರಹೆಮಾನ್ ಬಾಂಗ್ಲಾದೇಶ ಮುಂದಿನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶೇಕ್ ಹಸೀನಾ ಕಾಲದಲ್ಲಿ ದೇಶ ತೊರೆದಿದ್ದ ತಾರೀಕ್ ರಹೆಮಾನ್ ಇದೀಗ ಬಾಂಗ್ಲಾದಲ್ಲಿ ಮತ್ತೆ ಅಧಿಕಾರ ಹಿಡಿಯಲು ಯಶಸ್ವಿಯಾಗಿದ್ದಾರೆ.
In a dramatic political shift following the reported exit of former Prime Minister Sheikh Hasina, Bangladesh has witnessed a major electoral turnaround. The Bangladesh Nationalist Party (BNP), led by Tarique Rahman, secured a sweeping victory in the national elections, marking its return to power after nearly two decades.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm