ಬ್ರೇಕಿಂಗ್ ನ್ಯೂಸ್
31-03-26 11:00 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 31: ಯುದ್ಧ ವಿರಾಮ ಘೋಷಣೆ ನಡುವೆಯೂ ಅಮೆರಿಕ- ಇಸ್ರೇಲ್ ಇರಾನ್ ದೇಶದ ರಾಜಧಾನಿ ಟೆಹ್ರಾನ್ ಮತ್ತು ಪರಮಾಣು ಸ್ಥಾವರಗಳಿರುವ ಇಶ್ಫಹಾನ್ ಮೇಲೆ ಭಾರೀ ಬಾಂಬ್ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಪ್ರತಿಯಾಗಿ ಇರಾನಿನ ಐಆರ್ ಜಿಸಿ ಪಡೆ ಅಮೆರಿಕ ಮೂಲದ ಕಂಪನಿಗಳನ್ನು ಟಾರ್ಗೆಟ್ ಮಾಡುವುದಾಗಿ ಬೆದರಿಕೆ ಹಾಕಿದೆ.
ಅಮೆರಿಕ ತಾಂತ್ರಿಕ ದೈತ್ಯ ಕಂಪನಿಗಳಾದ ಮೈಕ್ರೋಸಾಫ್ಟ್, ಗೂಗಲ್, ಏಪಲ್, ಇಂಟೆಲ್, ಬೋಯಿಂಗ್ ಸೇರಿದಂತೆ 18 ಬಹು ರಾಷ್ಟ್ರೀಯ ಕಂಪನಿಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಐಆರ್ ಜಿಸಿ ಹೇಳಿಕೊಂಡಿದ್ದು, ಕೂಡಲೇ ಅದರಲ್ಲಿರುವ ಉದ್ಯೋಗಿಗಳು ಕಚೇರಿ ತೊರೆಯುವಂತೆ ಸೂಚನೆ ನೀಡಿದೆ. ಎಪ್ರಿಲ್ 1ರಂದೇ ಅಮೆರಿಕದ ಕಂಪನಿಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಐಆರ್ ಜಿಸಿ ಹೇಳಿದೆ. ಈ ಹಿನ್ನೆಲೆಯಲ್ಲಿ ಸೌದಿ, ದುಬೈನಲ್ಲಿರುವ ಅಮೆರಿಕದ ಕಂಪನಿಗಳಿಗೆ ನಡುಕ ಶುರುವಾಗಿದೆ.
ಅಲ್ಲದೆ, ಅಮೆರಿಕ- ಇಸ್ರೇಲ್ ದಾಳಿಯನ್ನು ಭಯೋತ್ಪಾದಕ ದಾಳಿಯೆಂದು ಐಆರ್ ಜಿಸಿ ಹೇಳಿದ್ದು, ಇವರ ಪ್ರತಿ ದಾಳಿಗೂ ಪ್ರತಿಯಾಗಿ ಅಮೆರಿಕ ಮೂಲದ ಕಂಪನಿಗಳನ್ನು ಟಾರ್ಗೆಟ್ ಮಾಡಲಾಗುವುದು ಎಂದು ಹೇಳಿದೆ. ಇದೇ ವೇಳೆ, ಇಸ್ರೇಲ್ ಇರಾನ್ ದೇಶದ ಫಾರ್ಮಾ ಕಂಪನಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಖಂಡಿಸಿದ್ದು, ಇಸ್ರೇಲ್ ಯುದ್ಧಾಪರಾಧವನ್ನು ಮಾಡುತ್ತಿದ್ದು ಫಾರ್ಮಾ ಕಂಪನಿಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಅವರ ಗುರಿ ಕ್ಲೀಯರ್ ಆಗಿ ಕಾಣುತ್ತಿದೆ ಎಂದಿದ್ದಾರೆ.
ಇದೇ ವೇಳೆ, ಪಾಕಿಸ್ತಾನ ಮತ್ತು ಚೀನಾವು ಕೂಡಲೇ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪನೆ ಮಾತುಕತೆ ನಡೆಸುವಂತೆ ಆಗ್ರಹಿಸಿವೆ. ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ತಾವು ಜೊತೆಯಾಗುವುದಾಗಿ ಜಂಟಿ ಹೇಳಿಕೆ ನೀಡಿವೆ. ಇದೇ ವೇಳೆ ಅಮೆರಿಕದಲ್ಲಿ ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ಅಧ್ಯಕ್ಷ ಟ್ರಂಪ್ ವಿರುದ್ಧ ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ. ದೇಶಾದ್ಯಂತ ಕಳೆದ 3-4 ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am