ಬ್ರೇಕಿಂಗ್ ನ್ಯೂಸ್
12-04-26 10:59 pm HK News Desk ದೇಶ - ವಿದೇಶ
ವಾಷಿಂಗ್ಟನ್, ಎಪ್ರಿಲ್ 12: ಇರಾನ್ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಪ್ರಕಟಣೆ ನೀಡಿದ್ದು, ಹೋರ್ಮುಜ್ ಜಲಸಂಧಿ ಮೂಲಕ ತೆರಳುವ ಎಲ್ಲ ಹಡಗುಗಳನ್ನು ಅಮೆರಿಕ ನೌಕಾಪಡೆ ತಡೆಹಿಡಿಯಲಿದೆ ಎಂದು ತಿಳಿಸಿದ್ದಾರೆ. ಈ ಕುರಿತ ಪೋಸ್ಟ್‌ನಲ್ಲಿ, ಇತ್ತೀಚಿನ ಮಾತುಕತೆಯಲ್ಲಿ ಬಹುತೇಕ ವಿಷಯಗಳು ಬಗೆಹರಿದಿದ್ದರೂ, “ನಿಜವಾಗಿ ಅಗತ್ಯವಾಗಿದ್ದ ಅಣ್ವಸ್ತ್ರ ಸಂಬಂಧಿತ ವಿಷಯ ಮಾತ್ರ ಬಗೆಹರಿದಿಲ್ಲ” ಎಂದು ಹೇಳಿದ್ದಾರೆ.
ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಸಮುದ್ರ ಸ್ಫೋಟಕಗಳನ್ನು (ಮೈನ್ಸ್) ಅಳವಡಿಸಿರಬಹುದೆಂಬ ಸೂಚನೆ ನೀಡಿ ಅಸ್ಥಿರತೆ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದು, ಇದನ್ನು “ಜಗತ್ತಿನ ಮೇಲೆ ನಡೆಯುತ್ತಿರುವ ಬಲವಂತದ ವಸೂಲಿ” ಎಂದು ವರ್ಣಿಸಿದ್ದಾರೆ. ಇರಾನ್‌ಗೆ ಶುಲ್ಕ ಪಾವತಿಸಿರುವ ಪ್ರತಿ ಹಡಗನ್ನೂ ಪತ್ತೆಹಚ್ಚಿ ತಡೆದು ಪರಿಶೀಲಿಸಲು ನಮ್ಮ ನೌಕಾಪಡೆಗೆ ಆದೇಶಿಸಿದ್ದೇನೆ. ಅನಧಿಕೃತ ಶುಲ್ಕವನ್ನು ಪಾವತಿಸಿದ ಯಾರಿಗೂ ಮುಕ್ತ ಸಮುದ್ರದಲ್ಲಿ ಸುರಕ್ಷಿತ ಸಂಚಾರದ ಹಕ್ಕು ಇರುವುದಿಲ್ಲ. ಇರಾನ್ ಹೋರ್ಮುಜ್ ಜಲಸಂಧಿಯಲ್ಲಿ ಅಳವಡಿಸಿರುವ ಮೈನ್ಸ್‌ಗಳನ್ನು ನಾಶಪಡಿಸುವ ಕಾರ್ಯವನ್ನೂ ಮಾಡುತ್ತೇವೆ ಎಂದಿದ್ದಾರೆ.
ನಮ್ಮ ಮೇಲೆ ಅಥವಾ ಇತರೇ ಹಡಗುಗಳ ಮೇಲೆ ಗುಂಡು ಹಾರಿಸುವ ಯಾವುದೇ ಇರಾನಿಯನ್ನೂ ಸಂಪೂರ್ಣವಾಗಿ ನಾಶ ಮಾಡಲಾಗುತ್ತದೆ. ಈಗಾಗಲೇ ತಮ್ಮ ದೇಶವನ್ನು ಹಾಳು ಮಾಡಿರುವ ಈ ಪರಿಸ್ಥಿತಿಗೆ ತೆರೆ ಎಳೆಯುವ ಮಾರ್ಗವನ್ನು ಇರಾನ್ ಇತರರಿಗಿಂತ ಹೆಚ್ಚು ಚೆನ್ನಾಗಿ ತಿಳಿದಿದೆ” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ಗೆ ಶುಲ್ಕ ಪಾವತಿಸುತ್ತಿದೆ ಎಂದು ಶಂಕೆ ಇರುವ ಹಡಗುಗಳನ್ನು ಅಮೆರಿಕದ ಪಡೆಗಳು ತಡೆದು ಪರಿಶೀಲಿಸಲಿದೆ, ಹಾಗೆಯೇ ಆ ಜಲಮಾರ್ಗದಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗಿರುವ ಸ್ಫೋಟಕಗಳನ್ನು ತೆರವುಗೊಳಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಯಾವುದೇ ವೈರತ್ವದ ಕ್ರಮ ನಡೆದರೆ ಕಠಿಣ ಸೈನಿಕ ಪ್ರತೀಕಾರ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು. “ಅವರ ನೌಕಾಪಡೆ, ವಾಯುಪಡೆ ನಾಶವಾಗಿದೆ. ವಾಯು ರಕ್ಷಣಾ ವ್ಯವಸ್ಥೆ ಮತ್ತು ರಾಡಾರ್‌ಗಳು ಪ್ರಯೋಜನ ಕಳೆದುಕೊಂಡಿವೆ. ಖೋಮೇನಿ ಮತ್ತು ಅವರ ‘ನಾಯಕರು’ ಬಹುತೇಕ ಸತ್ತಿದ್ದಾರೆ. ಇವೆಲ್ಲದಕ್ಕೂ ಅವರ ಅಣ್ವಸ್ತ್ರದ ಆಸೆಯೇ ಕಾರಣವಾಗಿದೆ.
ಇರಾನ್ ಮೇಲಿನ ನಿಷೇಧ ಕ್ರಮ ಶೀಘ್ರದಲ್ಲೇ ಆರಂಭವಾಗಲಿದ್ದು ಇತರ ದೇಶಗಳೂ ಇದರಲ್ಲಿ ಭಾಗಿಯಾಗಲಿವೆ. ಬಲವಂತದ (ಎಕ್ಸ್‌ಟಾರ್ಷನ್) ಮೂಲಕ ಇರಾನ್ ಲಾಭ ಪಡೆಯಲು ಅವಕಾಶ ನೀಡುವುದಿಲ್ಲ. ಅವರಿಗೆ ಹಣ ಬೇಕು, ಅದಕ್ಕಿಂತ ಮುಖ್ಯವಾಗಿ ಅಣ್ವಸ್ತ್ರ ಸಾಮರ್ಥ್ಯ ಬೇಕು. ಸೂಕ್ತ ಸಮಯದಲ್ಲಿ ನಾವು ಸಂಪೂರ್ಣ ಸಜ್ಜುಗೊಂಡಿದ್ದೇವೆ. ನಮ್ಮ ಸೈನ್ಯ ಇರಾನ್‌ನ ಉಳಿದಿರುವ ಅಲ್ಪ ಶಕ್ತಿಯನ್ನೂ ಸಂಪೂರ್ಣವಾಗಿ ನಾಶಮಾಡಲಿದೆ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am