ಸಂತ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಮೇಜರ್, ಪಿಎಚ್ ಡಿ ಪ್ರವೇಶಾತಿಗೆ ಅರ್ಜಿ ಆಹ್ವಾನ

16-11-26 06:19 pm       HK News Staffer   ಕರಾವಳಿ

ನಗರದ ಸಂತ ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿಯಲ್ಲಿ ಹಿಂದಿ ಭಾಷಾ ಅಧ್ಯಯನ ವಿಭಾಗದಿಂದ ಪದವಿ ಹಂತದಲ್ಲಿ ಹಿಂದಿ ಮೇಜರ್ ಮತ್ತು ಪಿಎಚ್ ಡಿ ಅಧ್ಯಯನಕ್ಕೆ ಅವಕಾಶವಿದ್ದು 2027–28ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಮಂಗಳೂರು, ನ.16: ನಗರದ ಸಂತ ಅಲೋಶಿಯಸ್ ಡೀಮ್ಡ್ ಯುನಿವರ್ಸಿಟಿಯಲ್ಲಿ  ಹಿಂದಿ ಭಾಷಾ ಅಧ್ಯಯನ ವಿಭಾಗದಿಂದ ಪದವಿ ಹಂತದಲ್ಲಿ ಹಿಂದಿ ಮೇಜರ್ ಮತ್ತು ಪಿಎಚ್ ಡಿ ಅಧ್ಯಯನಕ್ಕೆ ಅವಕಾಶವಿದ್ದು 2027–28ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. 

ಹಿಂದಿ ಭಾಷೆಯ ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯ, ಸಂವಹನ ಸಾಮರ್ಥ್ಯ, ಸೃಜನಶೀಲತೆ ಹಾಗೂ ಉದ್ಯೋಗಪರ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಹಿಂದಿ ವಿಭಾಗವು ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿದೆ. ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಹಿಂದಿ ಮೇಜರ್, ಪಿಎಚ್ ಡಿ ಹಾಗೂ ದ್ವಿತೀಯ ಭಾಷೆಯಾಗಿ ಹಿಂದಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಸ್ನಾತಕೋತ್ತರ ಮತ್ತು ಸಂಶೋಧನಾ ಹಂತದಲ್ಲಿಯೂ ಅಧ್ಯಯನ ಮುಂದುವರಿಸಬಹುದು. 

ಹಿಂದಿ ಭಾಷೆಯ ಅಧ್ಯಯನವನ್ನು ಕೇವಲ ಸಾಹಿತ್ಯ ಮತ್ತು ವ್ಯಾಕರಣಕ್ಕೆ ಸೀಮಿತಗೊಳಿಸದೆ, ಪತ್ರಿಕೋದ್ಯಮ, ಸೃಜನಾತ್ಮಕ ಬರವಣಿಗೆ, ಪ್ರವಾಸೋದ್ಯಮ, ರಾಜಭಾಷಾ ಅಧಿಕಾರಿ, ಅನುವಾದಕ, ದೂರದರ್ಶನ ಮತ್ತು ರೇಡಿಯೋ ನಿರೂಪಕ, ಪ್ರವಾಸಿ ಮಾರ್ಗದರ್ಶಕ, ಮಾಧ್ಯಮ ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಅಗತ್ಯವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದೆ. 

ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ವೃದ್ಧಿಗಾಗಿ ದೂರದರ್ಶನ ಮತ್ತು ರೇಡಿಯೋ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್, ಕೈಗಾರಿಕಾ ಅನುಭವ ಹಾಗೂ ಯೋಜನಾ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹುಮುಖ ಜ್ಞಾನ ಮತ್ತು ವಿಶಾಲವಾದ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಅಲ್ಲದೆ,
ವಿದ್ಯಾರ್ಥಿವೇತನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಹಿಂದಿ ಭಾಷಾ ವಿಭಾಗದ ಪ್ರಕಟಣೆ ತಿಳಿಸಿದೆ.