ತುಳು ಭವನದಲ್ಲಿ ನ.17ರಂದು ಹಲವು ಸಾಧಕರಿಗೆ ಗೌರವ ; ದಕ್ಷಿಣ ಕನ್ನಡ ಮ್ಯೂಚುಯಲ್‌ ಬಿಸಿನೆಸ್ ನವ ಉದ್ಯಮಿದಾರರ ಸೊಸೈಟಿ ಅಧ್ಯಕ್ಷ- ಉಪಾಧ್ಯಕ್ಷರಿಗೆ ತೌಳವ ಸಹಕಾರಿ ಸಾಧಕ ಪ್ರಶಸ್ತಿ ಪ್ರದಾನ

16-11-26 04:38 pm       HK News Staffer   ಕರಾವಳಿ

73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ನವೆಂಬರ್ 17ರಂದು ಮಂಗಳೂರಿನ ಉರ್ವ ಸ್ಟೋರ್‌ನ ತುಳು ಭವನದಲ್ಲಿ ‘ತೌಳವ ಸಹಕಾರಿ ರತ್ನ ಪ್ರಶಸ್ತಿ' ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಮಂಗಳೂರು, ನ.16 : 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ನವೆಂಬರ್ 17ರಂದು ಮಂಗಳೂರಿನ ಉರ್ವ ಸ್ಟೋರ್‌ನ ತುಳು ಭವನದಲ್ಲಿ ‘ತೌಳವ ಸಹಕಾರಿ ರತ್ನ ಪ್ರಶಸ್ತಿ' ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. 

ಕಾರ್ಯಕ್ರಮದಲ್ಲಿ ಭಾಷಣ ಸ್ಪರ್ಧೆ, ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ವತಿಯಿಂದ ‘ನೃತ್ಯ ವೈಭವ’ ಪ್ರದರ್ಶನಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ಜರುಗಲಿದ್ದು ಡಿ.ಕೆ. ಬಿಸಿನೆಸ್ ಆ್ಯಂಡ್ ಟೆಕ್ನಾಲಜಿ ಅಡ್ವೈಸರ್ ಪ್ರೈವೇಟ್ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಅಲ್ವಿನ್ ಜೋಯೆಲ್ ನೊರೊನ್ಹಾ ಅಧ್ಯಕ್ಷತೆ ವಹಿಸಲಿದ್ದಾರೆ.‌ ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಮಾಡೂರು ಶಿವದುರ್ಗಾಂಬ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. 

ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಿವಿಧ ಸಾಧಕರಿಗೆ ತೌಳವ ಸಹಕಾರಿ ರತ್ನ ಪ್ರಶಸ್ತಿ, ತೌಳವ ಸಹಕಾರಿ ಸಾಧಕ ಪ್ರಶಸ್ತಿ, ತೌಳವ ಸಹಕಾರಿ ಸಿರಿ ಪ್ರಶಸ್ತಿ ಪ್ರದಾನ ನಡೆಯಲಿದೆ. ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನವ ಉದ್ಯಮಿದಾರರ ಕ್ರೆಡಿಟ್ ಸೊಸೈಟಿ ಅಧ್ಯಕ್ಷೆ ಫ್ಲಾವಿಯಾ ಮರಿಯಾ ನೊರೊನ್ಹಾ, ಸೊಸೈಟಿ ಉಪಾಧ್ಯಕ್ಷ ಜಗನ್ನಾಥ ಶಿರ್ಲಾಲು, ಸಿಇಒ ಮಿಥುನ್ ಎಸ್. ಅಂಚನ್, ಪಂಪ್ವೆಲ್ ತೆರಿಗೆ ಪಾವತಿದಾರರ ಹಾಗೂ ತೆರಿಗೆ ಉಳಿತಾಯಗಾರರ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಶುಶಾನ್ ಸುವರ್ಣ, ಉಪಾಧ್ಯಕ್ಷೆ ರಮ್ಯಾ, ನಿರ್ದೇಶಕ ವಿನೀತ್ ಎ.ಕೆ., ದಕ್ಷಿಣ ಕನ್ನಡ ಮ್ಯೂಚುಯಲ್‌ ಬಿಸಿನೆಸ್ ನವ ಉದ್ಯಮಿದಾರರ ಕ್ರೆಡಿಟ್ ಸೊಸೈಟಿ ಉಡುಪಿ ಇದರ ಅಧ್ಯಕ್ಷ ಜಾರ್ಜ್ ಡಿಸೋಜ, ಸಿಇಓ ಕಿಶನ್ ಆರ್. ಕುಂದರ್, ಗುತ್ತಿಗಾರು ತೆರಿಗೆ ಪಾವತಿದಾರರ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಉಪಾಧ್ಯಕ್ಷ ಮನೋಹರ್ ಎಚ್.ಎಸ್, ನಿರ್ದೇಶಕ ಶಿವಪ್ರಕಾಶ್, ಸಿಇಒ ನಿಕಿತಾ, ಕಡಬ ತೆರಿಗೆ ಪಾವತಿದಾರರ ಕ್ರೆಡಿಟ್ ಸೊಸೈಟಿ ಇದರ ಅಧ್ಯಕ್ಷ ಸತೀಶ್ ನಾಯಕ್, ಉಪಾಧ್ಯಕ್ಷ ಕೃಷ್ಣಪ್ಪ ಮಡಿವಾಳ, ಸಿಇಒ ಪ್ರದೀಪ್ ಕುಮಾರ್, ದಕ್ಷಿಣ ಕನ್ನಡ ಸಾವಯವ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಕಂಕನಾಡಿ ಇದರ ಅಧ್ಯಕ್ಷ ವಿಲ್ಸನ್ ಫೆಡ್ರಿಕ್ ಪಿಂಟೋ, ಸಿಇಒ ಸಂಗೀತಾ ನಾಯಕ್, ಉದ್ಯಮ ಹಾಗೂ ಕೈಗಾರಿಕಾ ಅಭಿವೃದ್ಧಿ ಕ್ರೆಡಿಟ್ ಸೊಸೈಟಿ ಸುರತ್ಕಲ್ ಇದರ ಅಧ್ಯಕ್ಷ ಕೇಶವ ಪೂಜಾರಿ, ಸಿಇಒ ಸುಶ್ಮಿತ್, ಪುತ್ತೂರು ತೆರಿಗೆ ಪಾವತಿದಾರರ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಪುನೀತ್ ವಿಜೆ, ಕೊಂಕಣ್ ಕೆಥೋಲಿಕ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷೆ ಶೇಷಿ ಲಿಡ್ವಿನ್ ಡಿಸೋಜ, ಉಪಾಧ್ಯಕ್ಷೆ ಸೂಕ್ಷ್ಮ ಕ್ರಾಸ್ತಾ, ನಿರ್ದೇಶಕ ಆರ್ಥರ್ ಡಿಸೋಜ, ಹಿರಿಯ ನಾಗರಿಕರ ಕ್ರೆಡಿಟ್ ಸೊಸೈಟಿ ಮೂಡುಬಿದ್ರೆ ಇದರ ಸಿಇಒ ಜಿತೇಶ್ ಪೂಜಾರಿ, ಬಂಟ್ವಾಳ ತೆರಿಗೆ ಪಾವತಿದಾರರ ಕ್ರೆಡಿಟ್ ಸೊಸೈಟಿ ಅಧ್ಯಕ್ಷೆ ಲವಿನಾ, ಉಪಾಧ್ಯಕ್ಷ ಸದಾಶಿವ ಪೂಜಾರಿ, ಸಿಇಒ ದೀಪ್ತಿ ಕೋಟ್ಯಾನ್, ಖಾಸಗಿ ಹಾಗೂ ಸಾರ್ವಜನಿಕ ವಲಯದ ಕ್ರೆಡಿಟ್ ಸೊಸೈಟಿ ಅಧ್ಯಕ್ಷೆ ಸೌದಾ ಫಾರೂಕ್, ಉಪಾಧ್ಯಕ್ಷ ಶ್ರೀಧರ್ ಕುಮಾರ್ ಜೈನ್, ಸಿಇಒ ಅಬ್ದುಲ್ ಅಜೀಜ್ ರೆಹ್ಮಾನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಅಲ್ಲದೆ ಸಹಕಾರಿ ಧುರೀಣ ಜಾಕೆ ಮಾಧವ ಗೌಡ, ನಾಗೇಶ್ ಕುಲಾಲ್, ವಸಂತ ಬೆರ್ನಾಡ್, ಕೆ.ಟಿ. ವಿಶ್ವನಾಥ್, ಹೇಮ ದಾಮೋದರ ನಿಸರ್ಗ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನೂ ಸನ್ಮಾನಿಸಲಾಗುವುದು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಶಾಸಕರಾದ ಮೊಯ್ದಿನ್ ಬಾವಾ ಮತ್ತಿತರರು ಭಾಗವಹಿಸಲಿದ್ದಾರೆ.