ಉಪ್ಪಿಯ ಹೊಸ ಸಿನಿಮಾದ ಪೋಸ್ಟರ್‌ನ ಅರ್ಥವೇನು? ಇಲ್ಲಿದೆ ವಿಶ್ಲೇಷಣೆ

04-06-22 06:54 pm       Source: Filmi Beat   ಸಿನಿಮಾ

ಉಪೇಂದ್ರ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಬೇರೆಯದೇ ಮಾದರಿಯ ತಿರುವು ನೀಡಿದ ನಿರ್ದೇಶಕ ಅವರು. ಸಿನಿಮಾದ ಕತೆ, ನಿರೂಪಣೆಗೆ ವೇಗ ತಂದುಕೊಟ್ಟವರು ಉಪ್ಪಿ.

ಉಪೇಂದ್ರ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಬೇರೆಯದೇ ಮಾದರಿಯ ತಿರುವು ನೀಡಿದ ನಿರ್ದೇಶಕ ಅವರು. ಸಿನಿಮಾದ ಕತೆ, ನಿರೂಪಣೆಗೆ ವೇಗ ತಂದುಕೊಟ್ಟವರು ಉಪ್ಪಿ.

'ಓಂ', 'ಶ್', 'ತರ್ಲೆ ನನ್‌ಮಗ', 'ಸ್ವಸ್ಥಿಕ್', 'ಆಪರೇಷನ್ ಅಂತ', 'ಸ್ವಸ್ಥಿಕ್' ಅಂಥಹಾ ನೆನಪುಳಿವ ಸಿನಿಮಾಗಳನ್ನು ನೀಡಿದ ಉಪೇಂದ್ರ ಆ ನಂತರ ತಮ್ಮ ನಿರ್ದೇಶನದ ದಿಕ್ಕು ತುಸು ಬದಲಿಸಿಕೊಂಡು ಮಾನವ ವ್ಯಕ್ತಿತ್ವ, ವರ್ತನೆಗಳ ಆಳ ವಿಶ್ಲೇಷಣೆಯನ್ನು ಸಿನಿಮಾಗಳ ಮೂಲಕ ಮಾಡಲಾರಂಭಿಸಿದರು. 'ಎ', 'ಉಪೇಂದ್ರ' ಸಿನಿಮಾಗಳು ಇದೇ ಮಾದರಿಯಲ್ಲಿ ಬಂದ ಸಿನಿಮಾಗಳು.

ಬಳಿಕ 'ಸೂಪರ್' ಹಾಗೂ 'ಉಪ್ಪಿ 2' ಮೂಲಕ ಮಾನವ ವ್ಯಕ್ತಿತ್ವದ ಜೊತೆಗೆ ಸಮಾಜದ ಅಂಕು-ಡೊಂಕನ್ನೂ ವಿಡಂಬನೆ, ವಿಶ್ಲೇಷಣೆ ಮಾಡುವ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ವೀಕ್ಷಕರನ್ನು ತೀವ್ರವಾಗಿ ಯೋಚನೆಗೆ ಹಚ್ಚುವ, ಭಿನ್ನ ಮಾದರಿಯ ಸಿನಿಮಾ ನಿರ್ದೇಶನವನ್ನು ತಮ್ಮ ಶೈಲಿ ಮಾಡಿಕೊಂಡಿರುವ ಉಪೇಂದ್ರ ಇದೀಗ ಹೊಸ ಸಿನಿಮಾ ಘೋಷಿಸಿದ್ದು, ಸಿನಿಮಾದ ಪೋಸ್ಟರ್‌ ಅನ್ನು ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಮಾಡಿದ್ದು, ಸಿನಿಮಾದ ಪೋಸ್ಟರ್‌ ಯಥಾವತ್ತು ಬಹಳ ಗೊಂದಲ ಮಯವಾಗಿದೆ. ಆದರೆ ಪೋಸ್ಟರ್‌ ಮೂಲಕ ಉಪೇಂದ್ರ ಏನು ಹೇಳಲು ಹೊರಟಿದ್ದಾರೆಂಬ ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ...

ಮಹಿಳೆಯ ಚಿತ್ರ ಸೂಚಿಸುತ್ತಿರುವುದೇನು?

ಪೋಸ್ಟರ್‌ನಲ್ಲಿ ಏನಿದೆ?

ಪೋಸ್ಟರ್‌ನಲ್ಲಿ ಕಪ್ಪು ಕುದುರೆಯ ಮುಖವಿದೆ. ಅದರ ಮೂಗಿಗೆ ಹಾಕಲಾಗಿರುವ ಕಡಗ ಮಾದರಿಯ ನತ್ತು ಅದರ ಮೂಗಿನ ಮೇಲ್ಭಾಗದಿಂದ ಒಸರುತ್ತಿರುವ ರಕ್ತ ನಾಮವನ್ನು ನೆನಪಿಸುತ್ತಿದೆ. ಕುದುರೆಯ ಮುಖದ ಮೇಲೆ ಕೆಲವು ಚಿತ್ರಗಳಿವೆ ಆ ಚಿತ್ರಗಳು ಏನೇನನ್ನೋ ಸೂಚಿಸುತ್ತಿವೆ. ಕುದುರೆಯ ಮುಖದ ಮೇಲೆ ಉಪೇಂದ್ರ ಗಾಬರಿಯಿಂದ ನೋಡುತ್ತಿರುವ ಚಿತ್ರವೊಂದಿದೆ. ಉಗಿಬಂಡಿ (ಹಳೆ ಕಾಲದ ರೈಲು)ಯ ಚಿತ್ರವಿದೆ. 'ಕ್ರಿಯೇಷನ್ ಆಫ್ ಆಡಮ್' ನೆನಪಿಸುವ ಚಿತ್ರವೊಂದು ಕುದುರೆಯ ಮುಖದ ಮೇಲಿದೆ. ಪುರಾತನ ಮರದ ಬಿಳಲುಗಳು, ಒಂದು ಅನೂಹ್ಯ ಬೆಳಕು ಇನ್ನೂ ಕೆಲವು ಚಿತ್ರಗಳು ಕುದುರೆಯ ಮುಖದ ಮೇಲಿದೆ.

ಕಪ್ಪು ಕುದುರೆಯೇ ಏಕೆ?

ಕಪ್ಪು ಕುದುರೆಯೇ ಏಕೆ?

ಈ ಮೊದಲು ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದಾಗಲೂ ಪೋಸ್ಟರ್‌ನಲ್ಲಿ ಕುದುರೆ ಇತ್ತು. ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್‌ನಲ್ಲಿ ಕಪ್ಪು ಕುದುರೆಯ ಮುಖವಿದೆ. ಕುದುರೆಯನ್ನು ವೇಗಕ್ಕೆ, ಮನಸಿನ ನಾಗಾಲೋಟದ ಸೂಚಕವಾಗಿ ಬಳಸಲಾಗುತ್ತದೆ. ಕುದುರೆಯ ಮೂಗಿಗೆ ಲಗಾಮೊಂದನ್ನು ಹಾಕಿದ್ದು ಅದು ಯೂ ಆಕಾರದಲ್ಲಿದೆ. ಮನಸ್ಸಿನ ಯೋಚನೆಗಳನ್ನು ಇತರರ ಕಾರಣಗಳಿಗಾಗಿ ನಾವು ಬಂಧಿಸಿಡುತ್ತಿದ್ದೇವೆ ಎಂಬ ಅರ್ಥವನ್ನು ಇದು ನೀಡುತ್ತಿದೆ. ಅಥವಾ ಕುದುರೆಯ ಮುಖ ತೋರಿಸಿ ಚಿಕ್ಕಮಗಳೂರಿನ ಕುದುರೆಮುಖದ ರೆಫರೆನ್ಸೇನಾದರೂ ನೀಡುತ್ತಿದ್ದಾರಾ ಎಂಬ ಅನುಮಾನವೂ ಇದೆ.

'ಯು', 'ಐ' ಎಂದರೇನು?

'ಯು', 'ಐ' ಎಂದರೇನು?

ಇನ್ನು ಕುದುರೆಯ ಮೂಗಿಗೆ ಹಾಕಿರುವ ಲಗಾಮು ಹಾಗೂ ಕುದುರೆಯ ಮೂಗಿನ ಮೇಲೆ ಒಸರುತ್ತಿರುವ ರಕ್ತ ನಾಮದ ಆಕಾರದಲ್ಲಿದೆ. ಸಿನಿಮಾದ ಮುಹೂರ್ತದಲ್ಲೂ ಸಹ ನಾಮವೇ ವಿಜೃಂಭಿಸಿತ್ತು. ಆದರೆ ಇದು ನಾಮವಲ್ಲ ಬದಲಿಗೆ 'ಯು' ಮತ್ತು 'ಐ' ಎನ್ನಲಾಗುತ್ತಿದೆ. ಉಪೇಂದ್ರರ ಈ ಸಿನಿಮಾ 'ನೀನು ಮತ್ತು ನಾನು' ಎಂಬ ವಿಷಯದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ಹೇಳುತ್ತಿದೆ. ವ್ಯಕ್ತಿ ಹಾಗೂ ಸಮಾಜದೆಡೆಗಿನ ಅವನ ಸಂಬಂಧದ ಕುರಿತು ಉಪೇಂದ್ರದ ಈ ಸಿನಿಮಾ ಮಾತನಾಡುವುದು ಪಕ್ಕಾ.

ಮಹಿಳೆಯ ಚಿತ್ರ ಸೂಚಿಸುತ್ತಿರುವುದೇನು?

ಮಹಿಳೆಯ ಚಿತ್ರ ಸೂಚಿಸುತ್ತಿರುವುದೇನು?

ಇನ್ನು ಪೋಸ್ಟರ್‌ನಲ್ಲಿ 'ಕ್ರಿಯೇಷನ್ ಆಫ್ ಆಡಮ್' ಮಾದರಿಯ ಚಿತ್ರವೊಂದಿದೆ. ಆ ಚಿತ್ರದಲ್ಲಿ ಹೆಣ್ಣೊಬ್ಬಳು ನಗ್ನ ಸ್ಥಿತಿಯಲ್ಲಿದ್ದಾಳೆ. ಗಂಡು ಆಕೆಯ ಮುಂದೆ ಮಂಡಿ ಊರಿದ್ದಾನೆ. ಆ ಚಿತ್ರವನ್ನು ಸೃಷ್ಟಿಯನ್ನು, ಹೆಣ್ಣಿನ ಶ್ರೇಷ್ಟತೆಯನ್ನು ಹೇಳುತ್ತಿರುವ ಸಾಧ್ಯತೆ ಇದೆ. ಜೊತೆಗೆ ಪೋಸ್ಟರ್‌ನಲ್ಲಿ ಹಳೆಯ ಕಾಲದ ರೈಲೊಂದು ಓಡುತ್ತಿರುವ ಚಿತ್ರವಿದ್ದು, ಇದು ನಿಲ್ಲದೇ ಸಾಗುವ ಬದುಕಿನ ಬಗ್ಗೆ ಹೇಳುತ್ತಿರುವಂತಿದೆ. ಅಥವಾ ಸಿನಿಮಾದ ಕತೆ 6೦-70 ರ ದಶಕದಲ್ಲಿ ಸ್ಥಿತವಾಗಿರುವ ಸಾಧ್ಯತೆಯನ್ನೂ ಸಾರುತ್ತಿದೆ.

upendras new movie poster analysis article content.