ಬ್ರೇಕಿಂಗ್ ನ್ಯೂಸ್
11-08-23 02:04 pm Source: News18 Kannada ಸಿನಿಮಾ
ಬೀರ್‌ಬಲ್ ಸಿನಿಮಾ ಕನ್ನಡದಲ್ಲಿ ಹೊಸ ರೀತಿಯ ಭರವಸೆ ಮೂಡಿಸಿದೆ. ಟೋಪಿವಾಲಾ ಡೈರೆಕ್ಟರ್ ಶ್ರೀನಿ ಈ ಮೂಲಕ ಹೊಸ ರೀತಿಯ ಸಿನಿಮಾನೇ ಕೊಟ್ಟಿದ್ದಾರೆ. ನೋಡುಗರೂ ಕೂಡ ಬೀರ್‌ಬಲ್ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಕೊಟ್ಟಿದ್ದರು. ಹೊಸ ರೀತಿಯ ಕ್ಯಾರೆಕ್ಟರ್ ಡಿಸೈನ್ ಮಾಡೋ ಡೈರೆಕ್ಟರ್ ಎಂ.ಜಿ.ಶ್ರೀನಿವಾಸ್, ಘೋಸ್ಟ್ ಸಿನಿಮಾದಲ್ಲಿ ಒಳ್ಳೆ ಪಾತ್ರಗಳನ್ನ ಡಿಸೈನ್ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮ ದಿನಕ್ಕೆ ಹೊರ ಬಂದ ಚಿತ್ರದ ಬಿಗ್ ಡ್ಯಾಡಿ ಟೀಸರ್ ಇದಕ್ಕೆ ಸಾಕ್ಷಿ ಅಂತಲೇ ಹೇಳಬಹುದು. ಪಕ್ಕಾ ಪ್ಲಾನ್ ಮಾಡಿಕೊಂಡು ಸ್ಟೋರಿ ಬೋರ್ಡ್ ಮಾಡಿಕೊಂಡಿದ್ದ ಶ್ರೀನಿ, ತಮ್ಮ ಕಲ್ಪನೆಯಂತೇನೆ ಸಿನಿಮಾ ತೆಗೆದಿದ್ದಾರೆ. ಆ ಮೂಲಕ ಸಿನಿಮಾ ಈಗಾಗಲೇ ಒಂದು ಮಟ್ಟಕ್ಕೆ ಹೈಪ್ ತೆಗೆದುಕೊಂಡಿದೆ.
ಘೋಸ್ಟ್ ಸಿನಿಮಾದ ಆರಂಭದಲ್ಲಿಯೇ ಡೈರೆಕ್ಟರ್ ಶ್ರೀನಿ ಒಂದು ಮಾತು ಹೇಳಿದ್ದರು. ಈ ಚಿತ್ರದಲ್ಲಿ ಬೀರ್‌ಬಲ್ ಬರ್ತಾನೆ ಅಂತಲೂ ಹೇಳಿದ್ದರು. ಕನ್ನಡದಲ್ಲಿ ಇಲ್ಲಿವರೆಗೂ ಈ ರೀತಿಯ ಪ್ರಯೋಗ ಯಾರೂ ಮಾಡಿರಲಿಲ್ಲ. ಆದರೆ ಡೈರೆಕ್ಟರ್ ಶ್ರೀನಿ ಈ ಒಂದು ಕೆಲಸ ಮಾಡಿದ್ದಾರೆ.
ಸ್ಯಾಂಡಲ್‌ವುಡ್‌ನ ಬೀರ್‌ಬಲ್-ಘೋಸ್ಟ್ ಮುಖಾಮುಖಿ!
ಘೋಸ್ಟ್ ಇಲ್ಲಿ ಬೀರ್‌ಬಲ್ ಮೀಟ್ ಆಗೋದೇ ಈ ಒಂದು ಪ್ರಯೋಗ ಆಗಿದೆ. ಇದನ್ನ ಅಷ್ಟೇ ಅದ್ಭುತವಾಗಿಯೇ ಹ್ಯಾಂಡಲ್ ಮಾಡಿರೋ ಡೈರೆಕ್ಟರ್ ಶ್ರೀನಿ ತಮ್ಮ ಬೀರ್‌ಬಲ್ ಪಾತ್ರವನ್ನ ಮತ್ತೊಮ್ಮೆ ನಿರ್ವಹಿಸಿದ್ದಾರೆ. ಘೋಸ್ಟ್ ಅನ್ನ ಮೀಟ್ ಆಗೋ ದೃಶ್ಯಗಳಲ್ಲಿಯೇ ಈಗಾಗಲೇ ಅಭಿನಯಿಸಿದ್ದಾರೆ.
ಘೋಸ್ಟ್ ಚಿತ್ರದ ಕೊನೆಯಲ್ಲಿ ಬರುವ ಈ ಪಾತ್ರ ಒಂದು ವಿಷಯವನ್ನ ಕೂಡ ಹೇಳುತ್ತಿದೆ. ಘೋಸ್ಟ್ ಸಿನಿಮಾದಲ್ಲಿ ಬರೋ ಈ ಬೀರ್‌ಬಲ್ ತನ್ನ ಕಥೆಯ ಎರಡನೇ ಭಾಗದ ಹಿಂಟ್ ಕೂಡ ಬಿಟ್ಟುಕೊಡಲಿದ್ದಾನೆ. ಈ ಮಾತನ್ನೂ ಕೂಡ ಡೈರೆಕ್ಟರ್ ಶ್ರೀನಿ ಹೇಳಿದ್ದರು. ಅದೇ ರೀತಿ ಇದೀಗ ಬೀರ್‌ಬಲ್ ಪಾತ್ರದ ಚಿತ್ರೀಕರಣ ಕೂಡ ಮುಗಿದಿದೆ.
ಘೋಸ್ಟ್ ಸಿನಿಮಾದಲ್ಲಿ ಬೀರ್‌ಬಲ್ ಪಾತ್ರದ ಅಬ್ಬರ
ಘೋಸ್ಟ್ ಸಿನಿಮಾದ ಮತ್ತು ಬೀರ್‌ಬಲ್ ಪಾತ್ರದ ಶೂಟಿಂಗ್ ಮುಗಿಸಿರೋ ಡೈರೆಕ್ಟರ್ ಶ್ರೀನಿ, ಇದೀಗ ಡಬ್ಬಿಂಗ್ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ. ಮಾಲಿವುಡ್‌ನ ಜಯರಾಮ್ ಮೊನ್ನೆ ತಮ್ಮ ಪಾತ್ರದ ಡಬ್ಬಿಂಗ್ ಮಾಡಿದ್ದಾರೆ. ಈ ಮೂಲಕ ಕನ್ನಡದಲ್ಲಿಯೇ ಡಬ್ ಮಾಡೋ ಮೂಲಕ ತಮ್ಮ ಕನ್ನಡ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.
ಇನ್ನುಳಿದಂತೆ ಅತಿ ಶೀಘ್ರದಲ್ಲಿಯೇ ಘೋಸ್ಟ್ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈಗಾಗಲೇ ಹೆಚ್ಚಿನ ನಿರೀಕ್ಷೆ ಮೂಡಿಸಿರೋ ಘೋಸ್ಟ್ ಸಿನಿಮಾದ ಇನ್ನಷ್ಟು ಮತ್ತಷ್ಟು ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
Sandalwood Actor Director Ghost Film Director M G Srinivas Birbal Movie Latest.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm