ಬ್ರೇಕಿಂಗ್ ನ್ಯೂಸ್
14-08-23 03:21 pm Source: Vijayakarnataka ಸಿನಿಮಾ
'ಬಿಗ್ ಬಾಸ್' ಕನ್ನಡ ಸೀಸನ್ 9 ರಿಯಾಲಿಟಿ ಶೋ ವಿನ್ನರ್ ರೂಪೇಶ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿದ್ದ ತುಳು ಸಿನಿಮಾ 'ಸರ್ಕಸ್' ಈಚೆಗೆ ರಿಲೀಸ್ ಆಗಿ, ಸಕ್ಸಸ್ ಪಡೆದುಕೊಂಡಿತ್ತು. ರೂಪೇಶ್ ತುಳು ಚಿತ್ರರಂಗದ ಜೊತೆಗೆ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಡೇಂಜರ್ ಝೋನ್', 'ಸ್ಮೈಲ್ ಪ್ಲೀಸ್', 'ಅನುಷ್ಕಾ' ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಅವರು ಈಗ ಹುಟ್ಟುಹಬ್ಬದ ದಿನದಂದು ಒಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಇಲ್ಲಿದೆ ಆ ಬಗ್ಗೆ ಹೆಚ್ಚಿನ ಮಾಹಿತಿ.
'ಬಿಗ್ ಬಾಸ್' ಓಟಿಟಿ ವರ್ಷನ್‌ನಲ್ಲಿ ಸೈ ಎನಿಸಿಕೊಂಡು, ಆನಂತರ ಬಿಗ್ ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು, ಅಲ್ಲಿಯೂ ವಿನ್ನರ್ ಪಟ್ಟ ಪಡೆದುಕೊಂಡವರು ನಟ ರೂಪೇಶ್ ಶೆಟ್ಟಿ. ಅಂದಹಾಗೆ, ಇಂದು (ಆ.14) ರೂಪೇಶ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಆ ಹಿನ್ನೆಲೆಯಲ್ಲಿ ಒಂದು ಸರ್ಪ್ರೈಸ್ ನೀಡಿದ್ದಾರೆ. ಹೌದು, ರೂಪೇಶ್ ಶೆಟ್ಟಿ ಅವರ ಹೊಸ ಕನ್ನಡ ಸಿನಿಮಾದ ಟೈಟಲ್ ಘೋಷಣೆ ಆಗಿದ್ದು, ಚಿತ್ರಕ್ಕೆ 'ಅಧಿಪತ್ರ' ಎಂದು ಹೆಸರಿಡಲಾಗಿದೆ.

ಅಧಿಪತ್ರಕ್ಕೆ ಸೆಪ್ಟೆಂಬರ್‌ನಲ್ಲಿ ಶೂಟಿಂಗ್
ಟೈಟಲ್ ಮೂಲಕವೇ ಕುತೂಹಲ ಹುಟ್ಟಿಸುವುದು ಈಗ ಸಿನಿಮಾ ತಂಡಗಳ ಟ್ರೆಂಡ್ ಆಗಿದೆ. ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಕೂಡ ಅದೇ ಹಾದಿಯಲ್ಲಿ ಇರುವಂತಿದೆ. ಟೈಟಲ್ ಕೇಳಿದಾಕ್ಷಣವೇ ಅದರ ಅರ್ಥ ಏನೆಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ ಚಿತ್ರತಂಡ ಈಗಲೇ ಆ ಬಗ್ಗೆ ಏನನ್ನೂ ಹೇಳುವುದಕ್ಕೆ ಸಿದ್ಧವಿಲ್ಲ. ಕೆ ಆರ್ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ 'ಅಧಿಪತ್ರ' ಸಿನಿಮಾಗೆ ಚಯನ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಚಿತ್ರತಂಡ ಹಂಚಿಕೊಳ್ಳಲಿದೆಯಂತೆ. 'ಅಧಿಪತ್ರ' ಚಿತ್ರದ ಶೂಟಿಂಗ್ ಸೆಪ್ಟೆಂಬರ್ ತಿಂಗಳಿನಿಂದ ಶುರುವಾಗಲಿದೆ.

ಕನ್ನಡಕ್ಕೆ ಮರಳಿದ ರೂಪೇಶ್ ಶೆಟ್ಟಿ
'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಗೆದ್ದರೂ ಕೂಡ ರೂಪೇಶ್, ಕನ್ನಡ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಕಾರಣ, ಅವರ ತುಳು ಸಿನಿಮಾ 'ಸರ್ಕಸ್'. ಅದರ ನಿರ್ದೇಶನ, ನಿರ್ಮಾಣ ಸೇರಿದಂತೆ ನಾನಾ ಜವಾಬ್ದಾರಿ ಹೊತ್ತುಕೊಂಡಿದ್ದ ರೂಪೇಶ್ ಶೆಟ್ಟಿ, ಅದರ ಬಗ್ಗೆಯೇ ಹೆಚ್ಚು ಗಮನಹರಿಸಿದ್ದರು. ಈ ಕಾರಣದಿಂದಲೇ ಕನ್ನಡ ಸಿನಿಮಾದ ಘೋಷಣೆ ತುಸು ತಡವಾಗಿತ್ತು. 'ಅಧಿಪತ್ರ'ದ ಮೂಲಕ ಅವರು ಕನ್ನಡಕ್ಕೆ ಮರಳಿದ್ದಾರೆ.

ಸರ್ಕಸ್‌ಗೆ ಭಾರಿ ಗೆಲುವು
ಅಂದಹಾಗೆ, ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ 'ಸರ್ಕಸ್'ಗೆ ದೊಡ್ಡ ಗೆಲುವು ಸಿಕ್ಕಿದೆ. `ಸರ್ಕಸ್’ ಚಿತ್ರ ದೊಡ್ಡ ಮಟ್ಟದಲ್ಲಿಯೇ ಹಿಟ್ ಆಗಿದೆ. 'ಸರ್ಕಸ್' ಸಿನಿಮಾವು ಜೂನ್ 23ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ವಿದೇಶದಲ್ಲೂ ಈ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ತುಳುವಿನ ಮೊದಲ ಚಿತ್ರವೆಂಬ ಹೆಗ್ಗಳಿಕೆಯೂ ಸರ್ಕಸ್ ಚಿತ್ರಕ್ಕೆ ಸಿಕ್ಕಿದೆ. ತುಳು ಸಿನಿಮಾರಂಗದಲ್ಲಿ ಭಾರಿ ಹಿಟ್ ಆಗಿದ್ದ 'ಗಿರಿಗಿಟ್' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ 2ನೇ ಬಾರಿಗೆ 'ಸರ್ಕಸ್' ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. 'ಸಲಗ', 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಗಳ ಖ್ಯಾತಿಯ ನಟ ಯಶ್ ಶೆಟ್ಟಿ ಅವರು 'ಸರ್ಕಸ್' ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ರಚನಾ ರೈ, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಪ್ರಸನ್ನ ಶೆಟ್ಟಿ ಬೈಲೂರು ಮುಂತಾದವರು ಸರ್ಕಸ್‌ನಲ್ಲಿ ನಟಿಸಿದ್ದರು.
Bigg Boss Kannada Season 9 Winner Roopesh Shettys New Movie Tilted Adhipatra.
03-12-25 03:01 pm
HK News Desk
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
03-12-25 07:19 pm
HK News Desk
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
ಅಫ್ಘಾನಿಸ್ತಾನದಲ್ಲಿ ಒಂದೇ ಕುಟುಂಬದ 13 ಜನರನ್ನು ಕೊಂ...
03-12-25 03:04 pm
ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್...
02-12-25 11:19 pm
03-12-25 10:35 pm
Mangalore Correspondent
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
K. C. Venugopal, Mangalore, Dk Shivakumar: ಮಂ...
03-12-25 11:54 am
Bjp, Arun Puthila, Puttur, Mangalore: ಬಿಜೆಪಿ...
01-12-25 09:25 pm
03-12-25 01:41 pm
Bangalore Correspondent
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm