ಬ್ರೇಕಿಂಗ್ ನ್ಯೂಸ್
06-01-21 03:37 pm Headline Karnataka News Network ಸಿನಿಮಾ
ಬೆಂಗಳೂರು, ಜ.6: ಕಪಟ ಸ್ವಾಮಿ ಯುವರಾಜ್ ಜೊತೆಗಿನ ಸಂಪರ್ಕದ ಬಗ್ಗೆ ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಮ್ಮ ತಂದೆಯವರ ಜೊತೆಗೆ ನಿಕಟ ಸಂಪರ್ಕ ಇದ್ದುದು ನಿಜ. 17 ವರ್ಷಗಳಿಂದ ತಂದೆಯವರ ಜೊತೆ ತುಂಬ ಆಪ್ತರಾಗಿದ್ದರು. ತಂದೆ ನಿಧನರಾದ ಬಳಿಕವೂ ಜ್ಯೋತಿಷ್ಯ ಹೇಳುವ ವಿಚಾರದಲ್ಲಿ ಸಂಪರ್ಕ ಇತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನ ತಮ್ಮ ಡಾಲರ್ಸ್ ಕಾಲನಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ರಾಧಿಕಾ, ಯುವರಾಜ್ ಒಂದು ಐತಿಹಾಸಿಕ ಸಿನಿಮಾ ಮಾಡಬೇಕೆಂದು ಹೇಳ್ತಾ ಇದ್ದರು. ತಂದೆ ನಿಧನರಾದ ಬಳಿಕ ಈ ಸಿನಿಮಾದ ಮಾತುಕತೆ ನಡೆದಿತ್ತು. ಅದಕ್ಕಾಗಿ 15 ಲಕ್ಷ ರೂ. ನನ್ನ ಖಾತೆಗೆ ಹಾಕಿದ್ದಾರೆ. ಆನಂತರ ಬೇರೊಬ್ಬ ನಿರ್ಮಾಪಕರ ಮೂಲಕ 60 ಲಕ್ಷ ಹಣ ಹಾಕಿದ್ದಾರೆ. ಅದು ಬಿಟ್ಟರೆ ಒಂದೂವರೆ ಕೋಟಿ ಹಣ ಬಂದಿದೆ ಅನ್ನುವುದೆಲ್ಲ ಸುಳ್ಳು ಎಂದು ಹೇಳಿದರು.
2019ರಲ್ಲಿ ತಂದೆ ನಿಧನರಾಗಿದ್ದರು. ತಂದೆಗೆ ಕಂಟಕ ಇರುವುದು, ಸಾಯುತ್ತಾರೆಂದು ಒಂದು ವರ್ಷದ ಮೊದಲೇ ಸ್ವಾಮಿ ಹೇಳಿದ್ದರು. ಏನೋ ಪೂಜೆ ಮಾಡುವಂತೆ ಸೂಚಿಸಿದ್ದರು. ಆದರೆ, ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಅವರು ಹೇಳಿದಂತೇ ಆಗಿದ್ದರಿಂದ ನಮಗೆ ತುಂಬ ನಂಬಿಕೆ ಇತ್ತು. ನಮ್ಮ ತಾಯಿ ತುಂಬ ಗೌರವಿಸುತ್ತಿದ್ದರು. ನನಗೂ ಒಳ್ಳೇದಾಗುತ್ತದೆ, ಹೆಣ್ಣು ಮಗುವಾಗುತ್ತದೆ ಎಂದಿದ್ದರು. ಅವರು ಹೇಳಿದ್ದು ನಿಜವಾಗಿದೆ. ಜ್ಯೋತಿಷ್ಯ ವಿಚಾರದಲ್ಲಿ ಸಂಪರ್ಕ ಇತ್ತೇ ವಿನಾ ಬೇರಾವುದೇ ಸಂಬಂಧ ಇರಲಿಲ್ಲ ಎಂದು ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.
ನಾಟ್ಯರಾಣಿ ಶಾಂತಲಾ ಹೆಸರಲ್ಲಿ ಸಿನಿಮಾ
ಅಲ್ಲದೆ, ಸ್ವಾಮಿಯವರು ತಮ್ಮ ಪತ್ನಿ ಹೆಸರಲ್ಲಿ ಚಿತ್ರ ನಿರ್ಮಾಣದ ಬ್ಯಾನರ್ ಮಾಡಿಕೊಂಡಿದ್ದರು. ನನ್ನ ಮಗಳ ಹೆಸರಲ್ಲೂ ಪ್ರೊಡಕ್ಷನ್ ಹೌಸ್ ಬ್ಯಾನರ್ ಇದ್ದುದರಿಂದ ಜೊತೆಯಾಗಿ ಮಾಡೋಣ ಎಂದಿದ್ದರು. ನಾಟ್ಯ ರಾಣಿ ಶಾಂತಲಾ ಹೆಸರಲ್ಲಿ ಚಿತ್ರ ಮಾಡಬೇಕೆಂದು ಇದ್ದರು. ಈ ಬಗ್ಗೆ ನನಗೂ ಆಸಕ್ತಿ ಇದ್ದುದರಿಂದ ಒಪ್ಪಿಕೊಂಡಿದ್ದೆ. ಕಳೆದ 2020ರ ಫೆಬ್ರವರಿ ಮಾರ್ಚ್ ವೇಳೆಗೆ ಮಾತುಕತೆ ನಡೆದಿದ್ದು, ನನ್ನ ಖಾತೆಗೆ 75 ಲಕ್ಷ ಹಣ ಹಾಕಿದ್ದು ಸತ್ಯ. ನಂಬಿಕೆ ಇದ್ದುದರಿಂದ ಈ ಬಗ್ಗೆ ಯಾವುದೇ ಅಗ್ರಿಮೆಂಟ್ ಮಾಡಿರಲಿಲ್ಲ. ಈ ಬಗ್ಗೆ ಎಲ್ಲ ದಾಖಲೆ ನೀಡಲು ಸಿದ್ಧಳಿದ್ದೇನೆ. ಸಿಸಿಬಿಯವರು ನನ್ನನ್ನು ವಿಚಾರಣೆಗೆ ಕರೆದಿಲ್ಲ. ಕರೆದರೆ ಈ ಬಗ್ಗೆ ದಾಖಲೆ ನೀಡುವುದಕ್ಕೆ ಸಿದ್ಧ ಎಂದು ಹೇಳಿದರು.
ಹಾಗೆಂದು ಸ್ವಾಮಿಯವರ ಖಾಸಗಿ ವಿಚಾರಗಳ ಬಗ್ಗೆ ನನಗೇನು ತಿಳಿದಿಲ್ಲ. ತಿಂಗಳ ಹಿಂದೆ ಅರೆಸ್ಟ್ ಆದಾಗ ನಿಜಕ್ಕೂ ಶಾಕ್ ಆಗಿತ್ತು. ಹೀಗೆಲ್ಲಾ ಮಾಡಿದ್ದಾರೆ ಎನ್ನುವುದು ಗೊತ್ತಿರಲಿಲ್ಲ ಎಂದು ಹೇಳಿದ ರಾಧಿಕಾ, ಕಳೆದ ಡಿಸೆಂಬರ್ ತಿಂಗಳಲ್ಲಿ ನನಗೆ ಟೈಮ್ ಸರಿ ಇಲ್ಲ ಎಂದಿದ್ದರು. ಆನಂತರ ಫೆಬ್ರವರಿ ಬಳಿಕ ಶುಕ್ರದೆಸೆ ಬರುತ್ತದೆ ಎಂದಿದ್ದರು. ಕುಟುಂಬ ಜ್ಯೋತಿಷ್ಯರಾಗಿದ್ದರಿಂದ ಎಲ್ಲವನ್ನೂ ನಂಬುತ್ತಿದ್ದೆವು ಎಂದಿದ್ದಾರೆ. ಇನ್ನು ನನ್ನ ಸೋದರನಿಗೆ ಯಾವುದೇ ಹಣದ ವ್ಯವಹಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆರೆಸ್ಸೆಸ್ ಮುಖಂಡನ ಸೋಗಿನಲ್ಲಿ ಕೋಟಿಗಟ್ಟಲೆ ವಂಚಿಸಿದ ಯುವರಾಜನಿಗೆ ಖ್ಯಾತ ನಟಿ ಜೊತೆ ಲಿಂಕ್ ?!
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm