ಬ್ರೇಕಿಂಗ್ ನ್ಯೂಸ್
07-01-21 04:14 pm Source: FILMIBEAT Bharath Kumar K ಸಿನಿಮಾ
ಕೊರೊನಾದಿಂದ ಚಿತ್ರರಂಗಕ್ಕೆ ಬಹಳ ದೊಡ್ಡ ಸಮಸ್ಯೆ ಎದುರಾಗಿತ್ತು. ತಿಂಗಳುಗಳ ಕಾಲ ಚಿತ್ರಮಂದಿರ ಮುಚ್ಚಿದ್ದವು. ಶೇಕಡಾ 50 ರಷ್ಟು ಆಸನ ಭರ್ತಿಯೊಂದಿಗೆ ಸಿನಿಮಾ ಥಿಯೇಟರ್ ತೆರೆಯಲು ಅನುಮತಿ ಸಿಕ್ಕಿದ್ದರೂ ಚಿತ್ರಮಂದಿರಕ್ಕೆ ಜನ ಬರ್ತಿಲ್ಲ. ಇಂತಹ ಸಂದರ್ಭದಲ್ಲಿ ದೊಡ್ಡ ಚಿತ್ರಗಳು ರಿಲೀಸ್ ಮಾಡಿದ್ರೆ ಹಾಕಿದ ಬಂಡವಾಳ ಹೇಗೆ ವಾಪಸ್ ಪಡೆಯುವುದು ಎಂಬ ಗೊಂದಲದಲ್ಲಿ ನಿರ್ಮಾಪಕರಿದ್ದಾರೆ. ಈ ನಡುವೆ ಥಿಯೇಟರ್‌ಗಿಂತ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವೇ ಎಂಬ ಅಭಿಪ್ರಾಯವೂ ಇದೆ. ತಮಿಳುನಾಡಿನಲ್ಲಿ ಶೇಕಡಾ 100ರಷ್ಟು ಆಸನ ಭರ್ತಿ ಮಾಡಿ ಪ್ರದರ್ಶನ ಆರಂಭಿಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಬಹುಶಃ ಕರ್ನಾಟಕದಲ್ಲೂ ಈ ಆದೇಶ ಜಾರಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ನಿರ್ಮಾಪಕರಿಗೆ ಕೇಂದ್ರ ಸರ್ಕಾರ ನಿರಾಸೆ ಮಾಡಿದೆ. ಹಾಗಾದ್ರೆ, ಈ ಸಭೆಯಲ್ಲಿ ಯಾವೆಲ್ಲ ವಿಷಯಗಳು ಚರ್ಚೆಯಾದವು? ಯಾರೆಲ್ಲಾ ನಿರ್ಮಾಪಕರು ಸೇರಿದ್ದರು?
ಸಿನಿಮಾಗಳು ಕ್ಲಾಶ್ ಆಗಬಾರದು!
ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ಯಶ್, ಶಿವರಾಜ್ ಕುಮಾರ್, ಧ್ರುವ ಸರ್ಜಾ ಹೀಗೆ ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಕೆಲವು ಚಿತ್ರಗಳು ರಿಲೀಸ್‌ಗೆ ದಿನಾಂಕವನ್ನು ಲಾಕ್ ಮಾಡಿಕೊಂಡಿದೆ. ಹಿಂದೆಂದೆಯೇ ಸಿನಿಮಾ ಬಿಡುಗಡೆ ಮಾಡಿದ್ರೆ ಥಿಯೇಟರ್ ಸಮಸ್ಯೆ, ಕಲೆಕ್ಷನ್ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಇದೆ. ಹಾಗಾಗಿ, ಚಿತ್ರಗಳ ನಡುವೆ ಕ್ಲಾಶ್ ಆಗಬಾರದು ಎಂಬ ಚರ್ಚೆ ಈ ಸಭೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಒಟಿಟಿಗೆ ಹೋದ್ರೆ ಏನಾಗುತ್ತದೆ?
ಚಿತ್ರಮಂದಿರಕ್ಕೆ ಜನ ಬರ್ತಿಲ್ಲ ಎಂಬ ಕಾರಣಕ್ಕೆ ಒಟಿಟಿಗೆ ಹೋದ್ರೆ ಅಲ್ಲಿ ಹಾಕಿದ ಬಂಡವಾಳ ಪಾಪಸ್ ಬರುತ್ತಾ? ಇದರಿಂದ ಸ್ಟಾರ್ ನಟರ ಚಿತ್ರಗಳನ್ನೇ ನಂಬಿಕೊಂಡಿರುವ ಥಿಯೇಟರ್ ಮಾಲೀಕರ ಪರಿಸ್ಥಿತಿ ಏನು? ಕೊರೊನಾದಿಂದ ಸಂಕಷ್ಟದಲ್ಲಿರುವ ಎಲ್ಲರ ಹಿತಾದೃಷ್ಟಿ ಕಾಯುವುದು ಹೇಗೆ ಎಂಬ ಪ್ರಮುಖ ವಿಚಾರಗಳು ಚರ್ಚೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಥಿಯೇಟರ್ ಪೂರ್ಣ ಪ್ರಮಾಣದಲ್ಲಿ ಓಪನ್ ಆಗೋದು ಕಷ್ಟ!
ತಮಿಳು ನಟ ವಿಜಯ್ ಮನವಿ ನಂತರ ತಮಿಳು ಸರ್ಕಾರ ಥಿಯೇಟರ್‌ಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಆದ್ರೆ, ತಮಿಳುನಾಡಿನ ಆದೇಶ ಹಿಂಪಡೆಯುವಂತೆ ಕೇಂದ್ರ ಗೃಹ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆಯ ಉಲ್ಲಂಘನೆಯಾಗುತ್ತಿದೆ, ಕೂಡಲೇ ಆದೇಶ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಪತ್ರ ಬರೆದಿದೆ. ಈ ಬೆಳವಣಿಗೆ ಗಮನಿಸಿದರೆ ಸದ್ಯಕ್ಕೆ ಥಿಯೇಟರ್‌ಗಳ ಪರಿಸ್ಥಿತಿ ಸುಧಾರಿಸುವುದು ಬಹಳ ಕಷ್ಟ. ಇದು ಸಹ ನಿರ್ಮಾಪಕರಿಗೆ ತಲೆ ಬಿಸಿ ಉಂಟು ಮಾಡಿದೆ.

ಯಾರೆಲ್ಲ ಸಭೆಯಲ್ಲಿ ಹಾಜರಿದ್ದರು?
ನಿರ್ಮಾಪಕರ ಸಭೆಯಲ್ಲಿ ಕನ್ನಡದ ಪ್ರಮುಖ ಪ್ರೊಡ್ಯೂಸರ್‌ಗಳು ಭಾಗಿಯಾಗಿದ್ದರು. ಕೆಜಿಎಫ್, ಯುವರತ್ನ ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಫ್ಯಾಂಟಮ್ ನಿರ್ಮಾಪಕ ಜಾಕ್ ಮಂಜು, ನಿರ್ಮಾಪಕ ಜಯಣ್ಣ, ಪೊಗರು ನಿರ್ಮಾಪಕ ಪಾಲ್ಗೊಂಡಿದ್ದರು.
This News Article is a Copy of FILMIBEAT
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm