ಬ್ರೇಕಿಂಗ್ ನ್ಯೂಸ್
09-06-22 07:45 pm Source: Vijayakarnataka ಡಾಕ್ಟರ್ಸ್ ನೋಟ್
ಬೆಣ್ಣೆ ಮತ್ತು ತುಪ್ಪವು ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲನ್ನು ಹೊಂದಿದೆ. ಹಾಗಾಗಿ ವೈದ್ಯರು ಇದನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡುವುದಿಲ್ಲ. ಅದರಲ್ಲೂ ತೂಕ ಇಳಿಸಲು ಪ್ರಯತ್ನಿಸುವವರು ಇವನ್ನು ಸೇವಿಸಲೇ ಬಾರದು. ಬೆಣ್ಣೆ ತುಪ್ಪದ ಅತಿಯಾದ ಸೇವನೆಯು ಹೃದಯದ ಆರೋಗ್ಯಕ್ಕೆಒಳ್ಳೆಯದಲ್ಲ. ಆದರೆ ಮಿತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಆದರೆ ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ತುಪ್ಪ ಒಳ್ಳೆಯದೇ ಎನ್ನುವುದು ಎನ್ನುವುದು ಇನ್ನೂ ತಿಳಿದಿಲ್ಲ. ಇವೆರಡರಲ್ಲಿ ಯಾವುದೂ ನಿಮ್ಮ ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುವುದಿಲ್ಲ, ಆದರೆ ಅವು ಅಡುಗೆಯ ಬಳಕೆಯಲ್ಲಿ ವ್ಯತ್ಯಾಸವನ್ನುಂಟುಮಾಡುತ್ತವೆ. ಎರಡರ ನಡುವಿನ ಕೆಲವು ಸಾಮ್ಯತೆಗಳು ಮತ್ತು ವ್ಯತ್ಯಾಸಗಳು ಇಲ್ಲಿವೆ. ಇವುಗಳನ್ನು ಆಹಾರದಲ್ಲಿ ಬಳಸುವಾಗ ಯಾವುದನ್ನು ಎಲ್ಲಿ ಬಳಸಬೇಕು ಎನ್ನುವುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಪೌಷ್ಟಿಕಾಂಶಗಳ ಆಗರ
ತುಪ್ಪ ಹಾಗೂ ಬೆಣ್ಣೆ ಎರಡೂ ಪೌಷ್ಟಿಕಾಂಶದ ಶಕ್ತಿಕೇಂದ್ರವಾಗಿದೆ. ವಿಟಮಿನ್ ಎ, ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳು, ರೈಬೋಫ್ಲಾವಿನ್, ರಂಜಕ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಎರಡರಲ್ಲೂ ಕಂಡುಬರುತ್ತವೆ.
ರೋಗನಿರೋಧಕ ಶಕ್ತಿ
ಬೆಣ್ಣೆಯು ಜೀವಕೋಶಗಳನ್ನು ಸ್ವತಂತ್ರ ರಾಡಿಕಲ್ಸ್‌ಗಳಿಂದ ರಕ್ಷಿಸುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಸ್ತನ ಮತ್ತು ಹೊಟ್ಟೆಯ ಕ್ಯಾನ್ಸರ್ ಅನ್ನು ಸಹ ತಡೆಯುತ್ತದೆ.
ತುಪ್ಪವು ಕ್ಯಾನ್ಸರ್ ವಿರೋಧಿ CLA ಸಂಯೋಜಿತ ಲಿನೋಲಿಕ್ ಆಮ್ಲವನ್ನು ಹೊಂದಿದೆ. ಇದು ಹೃದಯರಕ್ತನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.
ಕ್ಯಾಲೋರಿ
ತುಪ್ಪವು ಬೆಣ್ಣೆಗಿಂತ ಸ್ವಲ್ಪ ಹೆಚ್ಚಿನ ಕೊಬ್ಬಿನಾಂಶ ಮತ್ತು ಹೆಚ್ಚಿನ ಕ್ಯಾಲೋರಿ ಅಂಶವನ್ನು ಹೊಂದಿದೆ. ಒಂದು ಚಮಚ ತುಪ್ಪದಲ್ಲಿ ಸುಮಾರು 120 ಕ್ಯಾಲೋರಿಗಳಿದ್ದರೆ, ಒಂದು ಚಮಚ ಬೆಣ್ಣೆಯಲ್ಲಿ ಸುಮಾರು 102 ಕ್ಯಾಲೋರಿಗಳಿರುತ್ತವೆ.
ಹಾಲಿನ ಉತ್ಪನ್ನದ ಅಲರ್ಜಿ
ತುಪ್ಪವು ಬೆಣ್ಣೆಗಿಂತ ಕಡಿಮೆ ಹಾಲಿನ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಆದ್ದರಿಂದ ಹಾಲಿನ ಅಲರ್ಜಿ ಮತ್ತು ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಜನರು ತುಪ್ಪವನ್ನು ಆರಿಸಿಕೊಳ್ಳಬೇಕು. ಆದರೆ ದೈನಂದಿನ ಪ್ರೋಟೀನ್ ಸೇವನೆಗಾಗಿ ಯಾರಾದರೂ ಡೈರಿ ಉತ್ಪನ್ನಗಳನ್ನು ಅವಲಂಬಿಸಿದ್ದರೆ, ಬೆಣ್ಣೆಯು ಖಂಡಿತವಾಗಿಯೂ ಉತ್ತಮ ಆಯ್ಕೆಯಾಗಿದೆ.
ತುಪ್ಪ ಹಾಗೂ ಬೆಣ್ಣೆಯ ರುಚಿ
ತುಪ್ಪ ಮತ್ತು ಬೆಣ್ಣೆ ಎರಡೂ ವಿಭಿನ್ನವಾದ ರುಚಿಯನ್ನು ಹೊಂದಿವೆ ಮತ್ತು ಆದ್ದರಿಂದ ಅವುಗಳನ್ನು ವಿಭಿನ್ನ ರೀತಿಯಲ್ಲಿ ಬಳಸುವುದರಲ್ಲಿ ಆಶ್ಚರ್ಯವೇನಿಲ್ಲ. ಬೆಣ್ಣೆಯ ಸಿಹಿ ಸಾರವು ಬೇಕಿಂಗ್‌ಗೆ ಪರಿಪೂರ್ಣವಾಗಿಸುತ್ತದೆ. ಉದಾಹರಣೆಗೆ ನೀವು ಕುಕ್ಕೀಸ್ ಮಾಡುವುದಾದರೆ, ಕೇಕ್ ಮಾಡುವುದಾದರೆ ಬೆಣ್ಣೆಯನ್ನುಬಳಸುವುದು ಒಳ್ಳೆಯದು. ಒಂದು ವೇಳೆ ನೀವು ಖಾರದ ಭಕ್ಷ್ಯವನ್ನು ತಯಾರಿಸುವುದಾದರೆ ಯಾವಾಗಲೂ ತುಪ್ಪವನ್ನು ಆರಿಸಿಕೊಳ್ಳಿ.
ತುಪ್ಪ ಹಾಗೂ ಬೆಣ್ಣೆ ಸಂಗ್ರಹಿಸಿಡಲು ಟಿಪ್ಸ್
ಮನೆಯಲ್ಲಿ ತಯಾರಿಸಿದ ತುಪ್ಪವನ್ನು ಮೂರು ತಿಂಗಳವರೆಗೆ ಸುಲಭವಾಗಿ ಹೊರಗೆ ಇಡಬಹುದು. ನೇರ ಸೂರ್ಯನ ಬೆಳಕು ಬೀಳದಂತೆ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಬೇಕು. ಬೆಣ್ಣೆಯನ್ನು ಫ್ರಿಡ್ಜ್‌ನಲ್ಲಿ ವರ್ಷಗಳವರೆಗೆ ಶೇಖರಿಸಿಡಬಹುದು. ಬೆಣ್ಣೆಯನ್ನು ಬಟರ್ ಪೇಪರ್‌ನಲ್ಲಿ ಸುತ್ತಿ ಅಥವಾ ಜಿಪ್ ಲಾಕ್ ಕವರ್‌ನಲ್ಲಿ ಸಂಗ್ರಹಿಸಿ ಪ್ರಿಡ್ಜ್‌ನಲ್ಲಿಡಬಹುದು.
Ghee Or Butter Which Is Good For Health.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm